ಆಮ್ ಆದ್ಮಿ ಪಕ್ಷ ಸೇರ್ಪಡೆಯಾದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಇಂದು ಅಧಿಕೃತವಾಗಿ ಎಎಪಿ ಪಕ್ಷವನ್ನು ಸೇರ್ಪಡೆಗೊಂಡರು.

ಬೆಂಗಳೂರಿನ ಪರಾಗ್ ಹೊಟೆಲ್ ನಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರ ಸಮ್ಮುಖದಲ್ಲಿ ಇಂದು ಮುಖ್ಯಮಂತ್ರಿ ಚಂದ್ರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದರು.

ಈ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷದಲ್ಲಿ ಯಾವುದೇ ಷರತ್ತುಗಳಿಲ್ಲದೆ ನಾನು ಪಕ್ಷ ಸೇರ್ಪಡೆಯಾಗಿದ್ದೇನೆ. ವ್ಯಾಪಾರಿಕರಣದ ರಾಜಕಾರಣ ನನಗೆ ಬೇಸರ ತಂದಿದೆ. ಶಿಕ್ಷಣ ಹಾಗೂ ಆರೋಗ್ಯದಲ್ಲಿ ಹೊಸ ಬದಲಾವಣೆ ಆಗಬೇಕಿದೆ. ಭ್ರಷ್ಟಾಚಾರ ನಿರ್ಮೂಲನೆ ಸಿದ್ದಾಂತ ನನಗೆ ಇಷ್ಟ ಆಗಿದೆ ಎಂದರು.

ನಾಡಿನ ಜನೆತೆಗೆ ಪರ್ಯಾಯ ವ್ಯವಸ್ಥೆ ಆಗುವ ನಿಟ್ಟಿನಲ್ಲಿ ನಾನು ಆಮ್ ಆದ್ಮಿ ಪಕ್ಷದಲ್ಲಿ ಕೆಲಸ ಮಾಡುತ್ತೇನೆ. ಜೆಡಿಎಸ್ ಕೌಟುಂಬಿಕಕ್ಕೆ ಸೀಮಿತವಾದ ಪಕ್ಷ, ಇನ್ನೂರಿಪ್ಪತ್ತು ಸೀಟ್ ಗೆಲ್ಲುವ ಸಾಮರ್ಥ್ಯ ಜೆ.ಡಿ.ಎಸ್ ಪಕ್ಷಕ್ಕೆ ಇಲ್ಲ ಎಂದರು.

ಇನ್ನೂ ಬಿಜೆಪಿ ಪಕ್ಷದ ಬಗ್ಗೆ ಟೀಕೆ ಮಾಡಿದ ಮುಖ್ಯಮಂತ್ರಿ ಚಂದ್ರು ಕೋಟಿ ಕೋಟಿ ವೆಚ್ಚದಲ್ಲಿ ರಾಮ ಮಂದಿರ ಕಟ್ಟುವ ಬಿಜೆಪಿ ಪಕ್ಷ ಊರಿನಲ್ಲಿರುವ ಮಾರಮ್ಮನ ಗುಡಿಯನ್ನು ಯಾರು ಕಟ್ಟುತ್ತಾರೆ, ಬೊಮ್ಮಾಯಿ ಸಾಂದರ್ಭಿಕ ಮುಖ್ಯಮಂತ್ರಿ, ಒಂದೇ ಸಮಾಜದವರನ್ನು ಸೇರಿಸಿಕೊಂಡು ಪಕ್ಷ ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷದವರು ರಾಜಕೀಯದಲ್ಲಿ ಧರ್ಮವನ್ನು ತಂದಿದ್ದಾರೆ  ಎಂದು ತಿಳಿಸಿದರು.

ವರದಿ: ಅಭಿಜಿತ್, ಕರ್ನಾಟಕ ಟಿವಿ, ಬೆಂಗಳೂರು

About The Author