Sunday, May 26, 2024

Latest Posts

ಉಡುಪಿ ಕಾಲೇಜು ಶೌಚಾಲಯದಲ್ಲಿ ವೀಡಿಯೋ: ವಿದ್ಯಾರ್ಥಿನಿಯರ ನೀಚತನ ಸಾಬೀತು..

- Advertisement -

Udupi news: ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವೀಡಿಯೋ ಮಾಡಿದ್ದ ಪ್ರಕರಣ ಸಾಬೀತಾಗಿದ್ದು, ವಿದ್ಯಾರ್ಥಿನಿಯರ ನೀಚತನ ಬಯಲಾಗಿದೆ.

ಮೂವರು ವಿದ್ಯಾರ್ಥಿನಿಯರು ಈ ಕುಕೃತ್ಯ ಮಾಡಿರುವುದಾಗಿ ಸಾಬೀತಾಗಿದೆ ಎಂದು ಸಿಐಡಿ ಕೋರ್ಟ್‌ಗೆ ನೀಡಿದ ಆರೋಪ ಪಟ್ಟಿಯಲ್ಲಿ ತಿಳಿಸಿದೆ. ಶಬನಾಜ್, ಉಲ್ಫಿಯಾ, ಅಲಿಮತ್ ಉಲ್ ಶಫಾ ವಿದ್ಯಾರ್ಥಿನಿಯೊಬ್ಬಳ ಖಾಸಗಿ ವೀಡಿಯೋ ಮಾಡಿದ್ದು, ಬಳಿಕ ಸಾಕ್ಷ್ಯ ನಾಶಕ್ಕಾಗಿ ಆ ವೀಡಿಯೋ ಡಿಲೀಟ್ ಮಾಡಿದ್ದು ತನಿಖೆಯಲ್ಲಿ ಸಾಬೀತಾಗಿದೆ.

ಇನ್ನು ಈ ಪ್ರಕರಣದ ಬಗ್ಗೆ ಬಿಜೆಪಿ ನಾಯಕರಾದ ಪ್ರೀತಂಗೌಡ, ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹುಡುಗಿಯರ ವಿಡಿಯೋ ಮಾಡಿದ ಜಿಹಾದಿಗಳ ಕುಕೃತ್ಯ ಸಾಬೀತಾಗಿದೆ. ರಾಜ್ಯದ ಘನತೆವೆತ್ತ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಏನೋ ಸಣ್ಣ ಘಟನೆ ತಮಾಷೆಗೆ ಮಾಡಿಕೊಂಡಿದ್ದಾರೆ ಎಂದು, ಜಿಹಾದಿ ಯುವತಿಯರ ಕೃತ್ಯವನ್ನು ತಿಪ್ಪೆ ಸರಿಸಲು ಹೊರಟಿದ್ದರು. ಇದರ ವಿರುದ್ಧ ದನಿಯೆತ್ತಿದ ಹಿಂದೂ ಯುವತಿಯರ ಮನೆಗೆ ಪೊಲೀಸರನ್ನು ಕಳುಹಿಸಿ ದನಿ ಅಡಗಿಸುವ ಕಾರ್ಯ ಮಾಡಿತ್ತು ನಾಚಿಕೆಗೆಟ್ಟ ಕಾಂಗ್ರೆಸ್ ಸರ್ಕಾರ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಜಿಹಾದಿ ಚಟುವಟಿಕೆಗಳು ಎಗ್ಗಿಲ್ಲದೆ ಸಾಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತು ಈ ಎಲ್ಲ ಕೃತ್ಯಗಳಿಗೆ ಕಡಿವಾಣ ಹಾಕಿ ಜಿಹಾದಿಗಳ ಹೆಡೆಮುರಿ ಕಟ್ಟದಿದ್ದರೆ ಶಾಂತಿ, ಸಹಬಾಳ್ವೆಗೆ ಹೆಸರಾದ ಕರ್ನಾಟಕಕ್ಕೆ ಕಳಂಕ ತರಲಿದೆ ಎಂದು ಪ್ರೀತಂಗೌಡ ಹರಿಹಾಯ್ದಿದ್ದಾರೆ.

ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದು, ಉಡುಪಿಯ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಿದವರ ಕೃತ್ಯ ಸಾಬೀತಾಗಿರುವುದರಿಂದ, ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಈ ವಿದ್ಯಾರ್ಥಿನಿಯರನ್ನು ಕೂಡಲೇ ಕಾಲೇಜಿನಿಂದ ಅಮಾನತ್ತು ಮಾಡಿ ಇವರಿಗೆ ಕ್ಯಾಮೆರಾ ಅಳವಡಿಸುವ ಕುಕೃತ್ಯದ ಯೋಜನೆಯನ್ನು ರೂಪಿಸಲು ಹೇಳಿಕೊಟ್ಟವರ ಮೇಲೆ ಹಾಗೂ ಪ್ರಚೋದನೆ ಮಾಡಿದವರ ಮೇಲೂ ಪ್ರಕರಣ ದಾಖಲಿಸಿ ಜೈಲಿಗಟ್ಟಲಿ ಎಂದು ಆಗ್ರಹಿಸಿದ್ದಾರೆ.

ಮಾಸ್ಕೋ ಮಾಲ್‌ನಲ್ಲಿ ಐಸಿಸ್ ಉಗ್ರರ ಅಟ್ಟಹಾಸ: 60ರಿಂದ 70 ಮಂದಿ ಸಾವು

ಬ್ರಿಟನ್ ರಾಜಕುಮಾರಿ ಕೇಟ್ ಮಿಡಲ್ಟನ್‌ಗೆ ಕ್ಯಾನ್ಸರ್‌

ಜೆಡಿಎಸ್ ನಾಯಕರಿಗೆ ತಿರುಗೇಟು ಕೊಡಲು ಪ್ರೀತಂಗೌಡ ಟೀಂ ಸಜ್ಜು: ಪ್ರಚಾರಕ್ಕಿಳಿದ ಬಿಜೆಪಿ ಟಿಕೇಟ್ ಆಕಾಂಕ್ಷಿ

- Advertisement -

Latest Posts

Don't Miss