Saturday, July 27, 2024

Latest Posts

ಬ್ರಿಟನ್ ರಾಜಕುಮಾರಿ ಕೇಟ್ ಮಿಡಲ್ಟನ್‌ಗೆ ಕ್ಯಾನ್ಸರ್‌

- Advertisement -

International News: ಬ್ರಿಟನ್ ರಾಜಕುಮಾರಿ ಕೇಟ್ ಮಿಡಲ್ಟನ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಕೇಟ್ ಹಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಹಲವು ಊಹಾಪೋಹಗಳು ಕೇಳಿಬಂದಿದ್ದರು. ಆದರೆ ಸ್ವತಃ ಕೇಟ್ ಈ ಬಗ್ಗೆ ಮಾತನಾಡಿದ್ದು, ತಮಗೆ ಕ್ಯಾನ್ಸರ್ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಿನ್ಸ್ ವಿಲಿಯಂ ಪತ್ನಿಯಾಗಿರುವ ಕೇಟ್‌ಗೆ ಈಗ 42 ವರ್ಷ ವಯಸ್ಸು, ಈ ವಯಸ್ಸಲ್ಲೇ ಅವರಿಗೆ ಕ್ಯಾನ್ಸರ್ ಬಂದಿದ್ದು, ರಾಜಮನೆತನಕ್ಕೆ ಇದು ಎರಡನೇಯ ಹೊಡೆತವಾಗಿದೆ. ವಿಲಿಯಂ ತಂದೆ, ಇಂಗ್ಲೆಂಡ್ ರಾಜ ಕಿಂಗ್ ಚಾರ್ಲ್ಸ್‌ಗೆ ಈಗಾಗಲೇ ಕ್ಯಾನ್ಸರ್ ಇದ್ದು, ಅವರು ಕೂಡ ಕಿಮೋಥೆರಿಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಟ್ ಕೂಡ ಚಿಕಿತ್ಸೆ ಪಡೆಯುತ್ತಿದ್ದು, ತಾನು ಸುಧಾರಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಕೇಟ್ ಚಿಕಿತ್ಸೆಗಾಗಿ ಅತ್ಯುತ್ತಮವಾದ ವೈದ್ಯರ ತಂಡವಿದ್ದು, ಪ್ರತಿದಿನ ಚಿಕಿತ್ಸೆ ಕೊಡಲಾಗುತ್ತಿದೆ. ಕ್ಯಾನ್ಸರ್ ಶುರುವಾಗಿದ್ದ ಎರಡು ತಿಂಗಳು ನಮಗೆ ಕಷ್ಟಕರವಾಗಿದ್ದು, ಇದೀಗ ಆರೋಗ್ಯದಲ್ಲಿ ಸುಧಾರಣೆ ಬಂದಿದೆ ಎಂದಿದ್ದಾರೆ.

ಇನ್ನು ಕೇಟ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದಾದರೂ ಹೇಗೆ ಅಂತಂದ್ರೆ, ಕೇಟ್‌ಗೆ ಹೊಟ್ಟೆಯ ಶಸ್ತ್ರಚಿಕಿತ್ಸೆ ನಡೆದಿತ್ತು. ಆದರೆ ಆಗ ಕ್ಯಾನ್ಸರ್ ಇರುವುದು ಗೊತ್ತಾಗಿರಲಿಲ್ಲ. ಬಳಿಕ ಮೆಡಿಕಲ್ ಟೆಸ್ಟ್ ನಡೆದಿದ್ದು, ಈ ವೇಳೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಹಾಗಾಗಿ ನಾನು ಮೊದಲನೇಯ ಸ್ಚೇಜ್‌ನಲ್ಲಿ ಇರುವಾಗಲೇ, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಪ್ರಾರಂಭಿಸಿದ್ದೇನೆ. ಹಾಗಾಗಿ ಹೆಚ್ಚು ಸಮಸ್ಯೆಯಾಗಲಿಲ್ಲವೆಂದು ಕೇಟ್ ಹೇಳಿದ್ದಾರೆ.

ನಾನು ಬದುಕಿರುವವರೆಗೆ ಕನ್ನಡಿಗನೇ, ಆರ್.ಸಿ.ಬಿ ಯ ಹೆಮ್ಮೆಯ ಅಭಿಮಾನಿಯೇ: ಸಿಎಂ ಸಿದ್ದರಾಮಯ್ಯ

ಭೂತಾನ್‌ನಲ್ಲಿ ಮೋದಿಗೆ ಭವ್ಯ ಸ್ವಾಗತ.. ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವ

ಮೊಣಕಾಲಿನಲ್ಲಿ ನಡೆದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಜಾನ್ವಿ ಕಪೂರ್

- Advertisement -

Latest Posts

Don't Miss