Friday, June 2, 2023

Latest Posts

‘ಮಾನವ ಕಂಪ್ಯೂಟರ್’ ಆಗ್ತಾರಂತೆ ವಿದ್ಯಾಬಾಲನ್

- Advertisement -

ಸಖತ್ ಬೋಲ್ಡ್ ಮತ್ತು ಡಿಫರೆಂಟ್ ಪಾತ್ರಗಳ ಮೂಲಕ ಗುರುತಿಸಿಕೊಂಡಿರೋ ಬಾಲಿವುಡ್ ನಟಿ ವಿದ್ಯಾಬಾಲನ್ ಇದೀಗ ಮಾನವ ಕಂಪ್ಯೂಟರ್ ಆಗೋಕ್ಕೆ ಹೊರಟಿದ್ದಾರೆ. ಯಸ್, ಕರ್ನಾಟಕದ ಮೈಸೂರಿನ ಗಣಿತಶಾಸ್ತ್ರಜ್ಞೆ, ಮತ್ತು ಬರಹಗಾರ್ತಿ ಶಕುಂತಲಾ ದೇವಿಯವರ ಆತ್ಮಕತೆಯಲ್ಲಿ ವಿದ್ಯಾಬಾಲನ್ ಕಾಣಿಸಿಕೊಳ್ಳಲಿದ್ದಾರೆ.

ಶಿಕ್ಷಣವನ್ನೇ ಪಡೆಯದೇ ಗಣಿತದ ಕಠಿಣ ಲೆಕ್ಕಾಚಾರದಲ್ಲಿ ಚಾತುರ್ಯ ಮತ್ತು ಅದ್ಯದ್ಭುತ ನೆನಪಿನ ಶಕ್ತಿ ಹೊಂದಿದ್ದ ಶುಕುಂತಲಾ ದೇವಿ ಮಾನವ ಕಂಪ್ಯೂಟರ್ ಅಂತಲೇ ಜಗತ್ಪ್ರಸಿದ್ಧಿಯಾದ್ರು. ವಿದ್ಯಾ ಬಾಲನ್ ಇಂಥಾದ್ದೊಂದು ಚಾಲೆಂಜಿಂಗ್ ಪಾತ್ರದಲ್ಲಿ ನಟಿಸ್ತಿರೋದು ಇದೇ ಮೊದಲೇನಲ್ಲ ಡರ್ಟಿ ಫಿಕ್ಚರ್ ನಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಸಿಲ್ಕ್ ಸ್ಮಿತಾರ ಪಾತ್ರಕ್ಕೆ ಬಣ್ಣ ಹಚ್ಚಿದ್ರು. ಇನ್ನು ತೆಲುಗಿನ ಎನ್ ಟಿಆರ್ ಬಯೋಪಿಕ್ ನಲ್ಲೂ ವಿದ್ಯಾ ನಟಿಸಿದ್ರು. ಇನ್ನು ಈ ಸಿನಿಮಾದಲ್ಲಿ ತಾವು ನಟಿಸ್ತಿರೋ ಬಗ್ಗೆ ವಿದ್ಯಾಬಾಲನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

- Advertisement -

Latest Posts

Don't Miss