ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮತ್ತೂಮ್ಮೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲ್ ಸೇರಿದ್ದಾರೆ. ಅವರ ಬಹುನೀರಿಕ್ಷಿತ ಚಿತ್ರ ಡೆವಿಲ್ ಸಿನಿಮಾದ ಚಿತ್ರೀಕರಣ ಮಗಿದಿದೆ. ಆದರೆ ಈ ಸಮಯದಲ್ಲಿ ದಾಸ ಜೈಲಿಗೆ ಹೋಗಿರುವುದು ಅವರ ಅಭಿಮಾನಿಗಳಿಗೆ ನೋವು ತಂದಿದೆ ಹಾಗೂ ಡೆವಿಲ್ ರಿಲೀಸ್ ಆಗುತ್ತದೋ? ಇಲ್ಲವೋ? ಎಂಬ ಪ್ರಶ್ನೆಯೂ ಮೂಡಿದೆ.
ಇದಕ್ಕೆಲ್ಲಾ ಜೈಲಿನಲ್ಲೇ ಇದ್ದುಕೊಂಡು ಸಂದೇಶ ಕೊಟ್ಟಿರುವ ದರ್ಶನ್ ಅವರು, ಪತ್ನಿ ವಿಜಯಲಕ್ಷ್ಮಿ ಮತ್ತು ತಮ್ಮ ದಿನಕರ್ ತೂಗುದೀಪ ಅವರ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ಕಳುಹಿಸಿದ್ದಾರೆ. ಇದೀಗ ಪತ್ನಿ ವಿಜಯಲಕ್ಷ್ಮಿ ಡಿ ಬಾಸ್ ಫ್ಯಾನ್ಸ್ ಗೆ ಇನ್ಸ್ಟಾ ಗ್ರಾಮ್ ಅಲ್ಲಿ ದರ್ಶನ್ ಅವರ ಖಾತೆಯಿಂದ ಪೋಸ್ಟ್‌ವೊಂದನ್ನು ಮಾಡಿದ್ದಾರೆ.
ಇನ್ನು ಏನೆಂದು ಪೋಸ್ಟ್ ಮಾಡಿದ್ದಾರೆ ಅಂತ ನೋಡುತ್ತಾಹೋದ್ರೆ –
ನನ್ನ ಪ್ರೀತಿಯ #DBoss ಸೆಲೆಬ್ರಿಟಿಗಳೇ,
ನಿಮ್ಮ ಚಾಲೆಂಜಿಂಗ್ ಸ್ಟಾರ್ ನಿಮ್ಮೆಲ್ಲರನ್ನೂ ತಮ್ಮ ಹೃದಯದಲ್ಲಿ ಹೊತ್ತುಕೊಂಡಿದ್ದಾರೆ. ಅವರು ಬರುವವರೆಗೂ ಅವರ ಸಾಮಾಜಿಕ ಮಾಧ್ಯಗಳನ್ನು ನಾನು ಹ್ಯಾಂಡಲ್ ಮಾಡುತ್ತೇನೆ. ಅವರು ನಿಮ್ಮೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಹಿಂತಿರುಗುವವರೆಗೆ, ಅವರ ಪರವಾಗಿ ನವೀಕರಣಗಳು ಮತ್ತು ಚಲನಚಿತ್ರ ಪ್ರಚಾರಗಳನ್ನು ಹಂಚಿಕೊಳ್ಳಲು ನಾನು ಅವರ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸುತ್ತೇನೆ.
ನೀವು ತೋರಿಸುತ್ತಿರುವ ಪ್ರೀತಿ, ಪ್ರಾರ್ಥನೆಗಳು ಮತ್ತು ತಾಳ್ಮೆ ಅವರಿಗೆ ಮತ್ತು ನಮ್ಮ ಕುಟುಂಬಕ್ಕೆ ಅಪಾರ ಶಕ್ತಿಯನ್ನು ನೀಡುತ್ತದೆ. ಆ ಏಕತೆ ಮತ್ತು ಸಕಾರಾತ್ಮಕತೆಯನ್ನು ಉಳಿಸಿಕೊಳ್ಳೋಣ – ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ, ನೀವು ಯಾವಾಗಲೂ ತಿಳಿದಿರುವ ಅದೇ ಪ್ರೀತಿ ಮತ್ತು ಶಕ್ತಿಯೊಂದಿಗೆ.
ಕೃತಜ್ಞತೆ ಮತ್ತು ಪ್ರೀತಿಯಿಂದ, ವಿಜಯಲಕ್ಷ್ಮಿ ದರ್ಶನ್
ವರದಿ:ರಂಜಿತ ರೇವಣ್ಣ ನಾಟನಹಳ್ಳಿ