Thursday, July 25, 2024

Latest Posts

“ವಿಕ್ರಾಂತ್ ರೋಣ” ಟ್ರೈಲರ್ ಇವೆಂಟ್‌ಗೆ ಸ್ಯಾಂಡಲ್‌ವುಡ್ ಸಮಾಗಮ..!

- Advertisement -

 

ಕಿಚ್ಚ ಸುದೀಪ್ ಕಳೆದ ಮೂರು ವರ್ಷಗ ಳಿಂದ ಒಂದು ಕನಸ್ಸನ್ನು ನನಸು ಮಾಡೋದಕ್ಕೆ ತನ್ನ ಅನುಭವವನ್ನೆಲ್ಲ ಧಾರೆ ಎರೆದಿದ್ದಾರೆ..ಸುದೀಪ್ ಯಾವ ಕನಸಿಗೆ ಇಷ್ಟೆಲ್ಲ ಕಸರತ್ತು ಮಾಡಿದ್ದಾರೆ ಅಂತ ಕೇಳಿದ್ರೆ ಅದಕ್ಕೆ ಉತ್ತರ “ವಿಕ್ರಾಂತ್ ರೋಣ”..ಇದೀಗ  ವಿಕ್ರಾಂತ್ ರೋಣ ಟ್ರೈಲರ್ ರಿಲೀಸಾಗಿದ್ದು, ಮಾಣಿಕ್ಯನ ಹೊಸ ಸಾಹಸಕ್ಕೆ ಸಾಥ್ ನೀಡಿದ್ದಾರೆ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು..

ವಿಕ್ರಾಂತ್  ರೋಣ.. ಬಾದ್ ಶಾ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ವರ್ಲ್ಡ್ ಸಿನಿಮಾ..
ಈ ಸಿನಿಮಾ ಸೆಟ್ಟೇರಿದಾಗಿನಿಂದ ಇಲ್ಲಿಯ ವರೆಗೂ ಕಿಚ್ಚನ ಅಭಿಮಾನಿಗಳಲ್ಲಿ..ಕನ್ನಡ ಚಿತ್ರರಂದಲ್ಲಿ ಹೊಸ
ಕನಸ್ಸಿನ ಅರಮನೆಯನ್ನೆ  ಕಟ್ಟಿದ್ದೆ…ಬುರ್ಜ್‌  ಖಲೀಪ ದಲ್ಲಿ  ಕನ್ನಡದ ಬಾವುಟ ಹಾಕಿಸಿದ್ದ ರೋಣ ಈಗ ಬೆಳ್ಳಿ ತೆರೆ ಮೇಲೆ ಅಬ್ಬರಿಸೋ ಮೂಲಕ ಕನ್ನಡದ ಕಂಪನ್ನು ನಮ್ಮ ನಾಡು ,ನುಡಿ,ಗಡಿಯನ್ನು ದಾಟಿ ಅಬ್ಬರಿಸೊಕೆ
ಸಜ್ಜಾಗಿದ್ದಾನೆ ವಿಕ್ರಾಂತ್ ರೋಣ…
ಪ್ಲೋ…ವಿಅರ್ ಟೀಸರ್
ಗಡಂಗ್ ರಕ್ಕಮ್ಮ ಸಾಂಗ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದು, ಮುಂದಿನ ತಿಂಗಳು ಅಂದ್ರೆ ಜು.28 ವಿಕ್ರಾಂತ್ ರೋಣ ರಿಲೀಸ್ ಗೆ ಸಿದ್ದವಾಗಿದ್ದು ನಾಳೆ ಚಿತ್ರದ 3D ಟ್ರೈಲರ್ ಲಾಂಚ್ ಮಾಡಲು ಚಿತ್ರತಂಡ ಭರ್ಜರಿ ಪ್ಲಾನ್ ಮಾಡಿದೆ. ಅಲ್ಲದೆ ಈಗ ಟ್ರೈಲರ್ ಲಾಂಚ್ ಗೂ ಮುನ್ನ ಪ್ರೀ ಟ್ರೈಲರ್ ಲಾಂಚ್ ಇವೆಂಟ್ ಮಾಡಿದೆ‌. ಇನ್ನು ಕಿಚ್ಚನ ಕನಸ್ಸಿನ ವಿಕ್ರಾಂತ್ ರೋಣ ಟ್ರೇಲರ್ ಲಾಂಚ್ ಇವೆಂಟ್ ಗೆ ಅರ್ಧ ಸ್ಯಾಂಡಲ್ ವುಡ್ ಸಾಕ್ಷಿಯಾಗಿ, ಕಿಚ್ಚನ ರೋಣ ಚಿತ್ರದ ಟ್ರೈಲರ್ ಹಾಗೂ ವಿಅರ್ ಜರ್ನಿಗೆ ಶುಭ ಹಾರೈಸಿದ್ದಾರೆ…

ಪ್ಲೋ…
ಕಿಚ್ಚನ ವಿಕ್ರಾಂತ್ ರೋಣ ಚಿತ್ರದ 3D. ಟ್ರೈಲರ್ ನೋಡೊಕೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್,
ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಡಾಲಿ ಧನಂಜಯ್, ಚಾರ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ‌ ಶೆಟ್ಟಿ, ಸೃಜನ್ ಲೋಕೇಶ್ ಸೇರಿದಂತೆ
ಸ್ಟಾರ್ ಗಳ ದಂಡೆ ಬಂದಿತ್ತು…ಅಲ್ಲದೆ ‌ವಿಅರ್ 3D ಲಾಂಚ್ ಇವೆಂಟ್ ಗೆ ಗಡಂಗ್ ರಕ್ಕಮ್ಮ ಕೂಡ ಬಂದು
ಕಾರ್ಯಕ್ರಮಕ್ಕೆ ಮತ್ತಷ್ಟು ಕಿಕ್ ಹೆಚ್ಚಿಸಿದ್ರು..

ವಿಕ್ರಾಂತ್ ರೋಣ ಟ್ರೈಲರ್ ನಾಳೆ 6 ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಇಂಡಸ್ಟ್ರಿಯವರಿಗೆ ಹಾಗೂ ಮಾಧ್ಯಮದವರಿಗಾಗಿ ಇಂದು ವಿಕ್ರಾಂತ್ ರೋಣ ಟ್ರೈಲರ್  ತೋರಿಸಲಾಯಿತು…ಕಿಚ್ಚನನ್ನು 3D ಅವತಾರದಲ್ಲಿ ನೋಡಿದ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು ಪುಲ್ ಖುಷ್ ಆದ್ರು.. ಅಲ್ಲದೆ ಟ್ರೇಲರ್ ಗೆ ಸಿಕ್ಕ  ಶಹಬಾಷ್ ಗೆ ಬಾದ್ ಷಾ ಪುಲ್ ಖುಷ್ ಆದ್ರು..ಜೊತೆಗೆ ಹರಸಿದ ಎಲ್ಲರಿಗೂ ಧನ್ಯವಾದ ಹೇಳಿ ವಿಅರ್ ಜರ್ನಿ ಅನುಭವ ಬಿಚ್ಚಿಟ್ರು ಕಿಚ್ಚ..

ವಿಕ್ರಾಂತ್ ರೋಣ 3Dಟ್ರೈಲರ್ ನೋಡುಗರನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತೆ. ಅಲ್ಲದೆ ಟ್ರೈಲರ್ ನಲ್ಲಿ  ಚಿತ್ರದ ಮೇಕಿಂಗ್ ಅದ್ಬುತವಾಗಿದೆ..
ಇನ್ನು ಚಿತ್ರದ ಟ್ರೇಲರ್ ಹಾಗೂ ಮೇಕಿಂಗ್ ಬಗ್ಗೆ  ಮೆಚ್ಚು
ಗೆ ಮಾತನಾಡಿದ ಶಿವಣ್ಣ ಸ್ಟೇಜ್ ಮೇಲೆ ರಕ್ಕಮ್ಮ ಸಿಗ್ನೇಚರ್ ಸ್ಟೆಪ್ ಹಾಕುವ ಮೂಲಕ ಕಿಚ್ಚನ ಫ್ಯಾಂಟಸಿ ಜಗತ್ತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ರು..

ವಿಅರ್ ಅಂದರೆ ವಿಕ್ರಾಂತ್ ರೋಣ ಮಾತ್ರ ಅಲ್ಲ ವಿ.ರವಿಚಂದ್ರನ್ ಅಂತನೂ ಗೊತ್ತಿರ್ಲಿ ಎಂದು ಮಾಸ್ ಡೈಲಾಗ್ ಮೂಲಕ ಮಾತು ಅರಂಭಿಸಿದ ಕನಸುಗಾರ
ರವಿಚಂದ್ರನ್‌.ಟ್ರೇಲರ್ ನಲ್ಲಿ ಬರುವ ಡೈಲಾಗ್ ಕುರಿತು ಮಾತನಾಡಿ.ಸುದೀಪ್ ರವಿಚಂದ್ರನ್ ಮಗ ಅಂದ ಮೇಲೆ ಭಯ ಎಲ್ಲಿಂದ ಬರುತ್ತೆ ಎಂದ ರವಿಮಾಮ.. ಇಷ್ಟು ದಿನ‌ ಇಂಡಸ್ಟ್ರಿಗೆ  ನಾನೊಬ್ಬ ಕನಸುಗಾರ ಇದ್ದೆ ಈಗ ಸಾಕಷ್ಟು ಮಂದಿ ಇದ್ದಾರೆ ಎಂದ ಕ್ರೇಜಿ ಸ್ಟಾರ್ ಜಾಕ್ವೇಲಿನ್ ಕುರಿತು ಹಾಸ್ಯದ ಚಟಾಕಿ ಹಾರಿಸಿದ್ರು‌..

ಇನ್ನು ವಿಅರ್ ಟ್ರೈಲರ್ ನೋಡಿ  ಮೇಕಿಂಗ್,, ಹಾಗೂ ಕಿಚ್ಚನ ನಟನೆಗೆ ಶರಣಾದ ಶೆಟ್ರು ಕೊಂಚ ಸಂಕೋಚದಲ್ಲೆ ವಿಅರ್ ಬಗ್ಗೆ ಮಾತಾಡ್ತಿದ್ರು..ಸಡನ್ ಆಗಿ ವೇದಿಕೆಗೆ ಎಂಟ್ರಿ ಕೊಟ್ಟ ಕಿಚ್ಚ ರಕ್ಷಿತ್ ಶೆಟ್ರುಗೆ ಪ್ರೀತಿಯ ಅಪ್ಪುಗೆ ಕೊಟ್ರು..ಕಿಚ್ಚನ ಅಪ್ಪುಗೆಗೆ  ಖುಷ್ ಆದ ಶೆಟ್ರು ವಿಕ್ರಾಂತ್ ರೋಣನ ಹಾಡಿ ಹೊಗಳಿದ್ರು…

ಇನ್ನು ವಿಕ್ರಾಂತ್ ರೋಣ ಟ್ರೇಲರ್ ನೋಡಿ ನಮ್ಮ ಇಂಡಸ್ಟ್ರಿ ಬಗ್ಗೆ ಮಾತನಾಡೊದ್ರ ಜೊತೆಗೆ ಪೋಲಿ ಮಾತುಗಳನಾಡಿದ್ರು ನಟ ರಾಕ್ಷಸ ಡಾಲಿ…ಅಲ್ಲದೆ  ವಿಕ್ರಾಂತ್ ರೋಣ ಇಡೀ ಫ್ಯಾಮಿಲಿ ಒಟ್ಟಿಗೆ ಕೂತು ನೋಡೊ ಸಿನಿಮಾ ಮಿಸ್ ಮಾಡ್ದೆ ನೋಡಿ ಎಂದು ಡಾಲಿ ಸಿನಿ ರಸಿಕರಲ್ಲಿ ಮನವಿ ಮಾಡಿದ್ರು..

ವಿ ಅರ್ ಟ್ರೈಲರ್  ನೋಡಿ ಖುಷ್ ಆದ ರಿಷಬ್ ಶೆಟ್ಟಿ..!

ನಾನು ಇಲ್ಲಿಗೆ ಇಂಡಸ್ಟ್ರಿಯವನಾಗಿ ಬಂದಿಲ್ಲ..ನಾನು ಇಲ್ಲಿಗೆ ಕಿಚ್ಚ ಸುದೀಪ್ ಅವರ ಅಭಿಮಾನಿಯಾಗಿ ಬಂದಿದ್ದೀನಿ‌‌… ಟ್ರೈಲರ್ ಅದ್ಬುತವಾಗಿದೆ.. ಸುದೀಪ್ ಸರ್ ಜೊತೆ ಬಂದೇ ಬರ್ತಿನಿ ಎಂದ ರಿಷಬ್ ಕಿಚ್ಚನ ಜೊತೆ ಸಿನಿಮಾ ಮಾಡುವ ಗುಟ್ಟು ಬಿಟ್ಟುಕೊಟ್ರು.

ವಿಕ್ರಾಂತ್ ರೋಣ ಟ್ರೈಲರ್ ಪ್ರೀ ಲಾಂಚ್ ಇವೆಂಟ್  ನೋಡೊಕೆ ಸಾವಿರಾರು ಕಿಚ್ಚನ ಫ್ಯಾನ್ಸ್ ಒರಾಯನ್ ಮಾಲ್ ನಲ್ಲಿ ಸೇರಿದ್ರು.. ಅಲ್ಲದೆ ರಕ್ಕಮ್ಮ ಹಾಡಿಗೆ ಕಿಚ್ಚ, ಜಾಕ್ವೆಲಿನ್ ಜೊತೆ ಸ್ಟೆಪ್ ಹಾಕೊ ಭಾಗ್ಯ ಕೆಲವರಿಗೆ ಸಿಕ್ಕಿತ್ತು..

ನಳಿನಾಕ್ಷಿ, ಕರ್ನಾಟಕ ಟಿವಿ

- Advertisement -

Latest Posts

Don't Miss