villiage story:
ರಾಜಕಾರಣಿಯಾಗಬೇಕು ಎಂದುಕೊಂಡವನೇ ಸೀದಾ ಬಸ್ ಹತ್ತಿ ಪಟ್ಟಣಕ್ಕೆ ಬಂದ. ಬಂದನಂತರ ಅವನಿಗೆ ಆ ಊರು ನೋಡಿ ದಿಕ್ಕು ತೋಚದಂತಾಯಿತು. ಊರಿಗೆ ಹೊಸಬ, ಬದಲಿಗೆ ಯಾರು ಪರಿಚಯವಿಲ್ಲ. ಎರಡು ಮೂರು ದಿನ ಹೇಗೋ ಕಾಲ ಕಳೆಯುತ್ತಾನೆ. ಊರಿಂದ ಬರುವಾಗ ಕೈಯಲ್ಲಿ ಸ್ವಲ್ಪ ದುಡ್ಡು ತಂದಿರುತ್ತಾನೆ. ಅದೂ ಸಹ ದಿನಗಳೆದಂತೆ ಕಾಲಿಯಾಗುತ್ತಾ ಬಂತು. ಕೆಲಸ ಕೇಳುವುದು ಹೇಗೆ ಎಂಬುದು ಸಹ ಅವನಿಗೆ ಗೊತ್ತಿರಲ್ಲ ಏಕೆಂದರೆ ಊರಿನಲ್ಲಿ ಯಾವುದೇ ಭಯವಿಲ್ಲದೆ ಮನೆಯಲ್ಲಿ ಊಟ ಮಾಡಿ ಉಂಡಾಡಿಗುಂಡನ ತರ ಬೆಳೆದವನು ಆದರೆ ಪಟ್ಟಣದಲ್ಲಿ ಯಾರು ಇಲ್ಲ ಇವನಿಗೆ. ಕೈಯಲ್ಲಿ ದುಡ್ಡು ಕಾಲಿಯಾಯ್ತು. ಹಸಿವು ತಾಳಲಾಗದೆ ಒಂದು ಹೊಟೆಲ್ಲಿಗೆ ಬಂದು ಚೆನ್ನಾಗಿ ತಿನ್ನುತ್ತಾನೆ. ಆದರೆ ಕೊಡಲು ದುಡ್ಡು ಇರುವುದಿಲ್ಲ. ಊರಿನಲ್ಲಿ ಜನರನ್ನು ಹೆದರಿಸಿದ ತರ ಇಲ್ಲಿಯೂ ಸಹ ಹೊಟೆಲ್ನ್ ನವರನ್ನು ಹೆಸರಿಸಲು ಮುಂದಾದ ಆದರೆ ಅಲ್ಲಿದ್ದ ಜನ ಅವನಿಗೆ ಬೈದರು ತಿಂದಿರುವ ದುಡ್ಡು ಕೊಡಲು ಆಗ್ತಿಲ್ಲ ಹೆದರಿಸುತ್ತೀಯಾ, ನೋಡಲು ಕೋಣದ ತರ ಬೆಳೆದಿದ್ದೀಯಾ ಎಂದು ಬೈದು ನಂತರ ಹೊಟೆಲ್ನವನಿಗೆ ಜನ ಹೇಳಿದರು ಇವನ ಹತ್ತಿರ ದುಡ್ಡಿಲ್ಲ ಇವನಿಗೆ ಹಾಗೆ ಕಳುಹಿಸಿದರೆ ಮುಂದೇನು ಹೀಗೆ ಮಾಡುತ್ತಾನೆ. ಇವನ ಹತ್ತಿರ ಜನ ತಿಂದಿರುವ ತಟ್ಟೆ ತೊಳೆಸಿರಿ ಆಗ ಇವನಿಗೆ ಬುದ್ದಿ ಬರುತ್ತದೆ ಎಂದರು. ಊರಲ್ಲಿ ಇವನ ಸಂಬಂಧಿರಕು ಇದ್ದರು ಜಗಳವಾಡಿದರೆ ಬಿಡಿಸಲು ಬರುತಿದ್ದರು. ಆದರೆ ಗೊತ್ತು ಪರಿಚಯವಿಲ್ಲದ ಊರು ಇಲ್ಲಿ ಯಾರು ಇರುತ್ತಾರೆ ಇವನ ಪರ ನಿಲ್ಲಲು.ಅದಕ್ಕೆ ಅವನಿಗೆ ದಿಕ್ಕೆ ತೋಚದಂತಾಗಿ ಹೇಳಿದ ಕೆಲಸ ಮಾಡಲು ಮುಂದಾದ.
ಸಾಯಂಕಾಲ ಆಗುತ್ತಾ ಬಂತು ಅವನು ಎಲ್ಲಾಕಡೆ ಸುತ್ತಾಡಿ ಕೊನೆಗೆ ಅದೇ ಹೊಟೆಲ್ಗೆ ಬಂದ. ಬಂದವನೇ ಸುಮಾರು ಹೊತ್ತು ಅಲ್ಲೇ ಕುಳಿತ ರಾತ್ರಿಯಾಯಿತು ಹೊಟೆಲ್ ಮುಚ್ಚುವ ಸಮಯದಲ್ಲಿ ಮಾಲಿಕ ಇವನನ್ನು ನೋಡಿ ಇವನ ಹತ್ತಿರ ಬಂದು ವಿಚಾರಿಸತೊಡಗಿದ. ಮಾಲಿಕನಿಗೆ ಇವನ ಬಗ್ಗೆ ವಿಚಾರಿಸಿದಾಗ ಒಮ್ಮೆ ಆಶ್ಚರ್ಯದಿಂದ ನಕ್ಕರು. ಇವನ ಹುಟ್ಟು ನೋಡಿದರೆ ನೀನು ಈ ಊರಿಗೆ ಹೊಸಬ, ಆದರೆ ಅದು ಹೇಗೆ ಇಷ್ಟು ದೊಡ್ಡ ಕನಸು ಹೊತ್ತು ಬಂದಿದ್ದೀಯಾ ಎಂದು ಆಗ ನಡೆದ ವಿಚಾರ ತಿಳಿಸಿದ ನಾನು ಹೇಗಾದರೂ ಮಾಡಿ ರಾಜಕಾರಣಿಯಾಗಲೇಬೇಕು ಎಂದನು.ಆಗ ಮಾಲಿಕ ಸರಿ ನೀನು ಎಲ್ಲಿ ಇರುವುದು ಎಂದು ಕೇಳಿದನು. ನನಗೆ ಇಲ್ಲಿ ಯಾರ ಪರಿಚಯವು ಇಲ್ಲ ಬಂದು ನಾಲ್ಕು ದಿನವಾಯಿತು ಇಷ್ಟು ದಿನ ಅಲ್ಲಿ ಇಲ್ಲಿ ಮಲಗಿತ್ತಿದ್ದೆ. ಆದರೆ ನನಗೆ ಹಸಿವು ತುಂಬಾ ಆಗುತ್ತಿದೆ ದುಡ್ಡಿಲ್ಲ ಅದಕ್ಕೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದನು. ಆಗ ಮಾಲಿಕ ನಿನಗೇನಾದರೂ ಕೆಲಸ ಬರುತ್ತಾ ಎಂದು ಕೇಳಿದನು. ಅದಕ್ಕೆ ಅವನ ಉತ್ತರ ಇಲ್ಲ ಎಂದು. ಹಾಗಾದರೆ ಇಲ್ಲಿ ಜೀವನಕ್ಕೆ ಏನು ಮಾಡುತ್ತೀಯ ಎಂದನು. ಗೊತ್ತಿಲ್ಲ ಎಂದನು ಆಗ ಹೊಟೆಲ್ ಮಾಲಿಕ ನನ್ನ ಹತ್ತಿರ ಕೆಲಸಕ್ಕೆ ಇರು ನನಗೂ ಕೆಲಸದವರು ಬೇಕಾಗಿದ್ದಾರೆ. ನಾನು ಇಲ್ಲಿ ಕೆಲಸಕ್ಕೆ ಸೇರಿದರೆ ನಾನು ರಾಜಕಾರಣಿಯಾಗಬೇಕು ಎಂದನು. ಅದಕ್ಕೆ ಸರಿ ಎಲ್ಲಿ ಹೋಗುತ್ತೀಯ ಹೋಗು ಎಂದನು.
ರಾತ್ರಿಯಾಗಿದೆ ಏನು ಮಾಡಲು ಗೊತ್ತಾಗುತ್ತಿಲ್ಲ ಹಸಿವು ಜಾಸ್ತಿಯಾಗುತ್ತಿದೆ ಕೊನೆಗೆ ಅಲ್ಲೇ ಕೆಲಸ ಮಾಡಲು ನಿರ್ಧರಿಸಿದ ಆಗ ಹೊಟಿಲ್ ಮಾಲಿಕ ಹತ್ತಿರ ಬಂದು ನೀನು ಇಲ್ಲೆ ಕೆಲಸ ಮಾಡು ಪ್ರತಿ ಶನಿವಾರ ನಮ್ಮ ಹೊಟೆಲ್ ಗೆ ಕೆಲವು ಹುಡುಗರು ಬರುತ್ತಾರೆ ಅವರು ರಾಜಕಾರಣಿಗಳ ಹತ್ತಿರ ಕೆಲಸ ಮಾಡುತ್ತಾರೆ ಅವರಿಗೆ ನಿನ್ನ ಪರಿಚಯ ಮಾಡಿಸುತ್ತೇನೆ ಎಂದನು. ಆಗ ಹುಡುಗನ ಖಷಿಗೆ ಪಾರವೇ ಇರಲಿಲ್ಲ ಆವತ್ತು ಅವನಿಗೆ ಊಟ ಹಾಕಿ ಇರಲು ಜಾಗ ಕೊಟ್ಟರು ಹೊಟೆಲ್ ಮಾಲಿಕರು.ಮಾರನೆ ದಿನದಿಂದ ಹೊಟೆಲ್ ನಲ್ಲಿ ಕೆಲಸ ಮಾಡಲು ಸೇರಿಕೊಂಡನು.
ಮುಂದಿನ ಅವನ ಹೊಟೆಲ್ ಜೀವನ ಹೇಗಿತ್ತು ಅವನಿಗೆ ರಾಜಕಾರಣಿಗಳ ಹುಡುಗರನ್ನು ಹೊಟೆಲ್ ಮಾಲಿಕ ಪರಿಚಯ ಮಾಡಿಸುತ್ತಾನಾ ಇಲ್ವಾ ಎಂಬುದನ್ನು ಮುಂದಿನ ಕಥೆಯಲ್ಲಿ ತಿಳಿಸುತ್ತೇನೆ …ನಮಸ್ಕಾರ
ಕಥೆ ಮುಂದುವರಿಯುವುದು.