ಧಾರವಾಡ: ಈಗಾಗಲೆ 2016 ಜೂನ್ 15 ರಂದು ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷಿ ನಾಶದ ಆರೋಪಿಯಾಗಿರುವ ವಿನಯ್ ಕುಲಕರ್ಣಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯ ಯೊಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕಷ್ಟ ಎದುರಾಗಿದೆ.
ಈಗಾಗಲೇ ಸಿಬಿಐ ತನಿಖೆಯಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗಡೆ ಬಂದಿರುವ ಇವರು ಈಗ ಜಿಲ್ಲಾ ಪ್ರವೇಶದಲ್ಲಿ ನಿರ್ಬಂಧದಲ್ಲಿದ್ದಾರೆ. ಹೇಗಾದರೂ ಮಾಡಿ ಜಿಲ್ಲೆಯನ್ನು ಪ್ರವೇಶ ಮಾಡಬೇಕು ಎನ್ನುವ ಕಸರತ್ತಿನಲ್ಲಿರುವಾಗಲೇ ಮತ್ತೊಮ್ಮೆ ಹಿನ್ನಡೆಯಾಗಿದೆ. 2018ರ ಸಾಕ್ಷ್ಯನಾಶದ ಕೇಸ್‌ನಲ್ಲಿ ಬಿ ರಿಪೋರ್ಟ್ ನಲ್ಲಿ ಧಾರವಾಡ ಉಪನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಇನ್ನು ದೂರುದಾರ ಮೃತ ಯೋಗೀಶ್ ಗೌಡನ ಸಹೋದರ ಗುರುನಾಥ್ ಗೌಡನಿಗೆ ಸಾಕ್ಷ ನಾಶಪಡಿಸುವಂತೆ ಒತ್ತಡ ಹೇರಿದ್ದರು.
ಹಾಗೂ ಕೆಲ ಪೊಲೀಸ್ ಅಧಿಕಾರಿಗಳ ಮೂಲಕ ರಾಜಿ ಸಂಧಾನಕ್ಕೆ ಯತ್ನ ನಡೆಸಿದ್ದರು. ಈ ಕುರಿತು ಆಡಿಯೋ, ವಿಡಿಯೋ ಸಾಕ್ಷಿ ಕಲೆ ಹಾಕಲಾಗಿದ್ದು ಅದನ್ನೇ ಮುಂದಿಟ್ಟುಕೊಂಡು ಗುರುನಾಥ್ ಕೋರ್ಟ್‌ಗೆ ಹೋಗಿದ್ದ ವೇಳೆ ಎಫ್ ಐಆರ್ ದಾಖಲಿಸಲು ಸೂಚಿಸಿತ್ತು. ವಿನಯ ಕುಲಕರ್ಣಿ, ಡಿವೈಎಸ್ಪಿ ಸುಲ್ಪಿ ಸೇರಿ ಅನೇಕ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣದ ಕುರಿತು ತನಿಖೆ ನಡೆಸಲು ಡಿಸಿಪಿ ಗುನಾರೆ ನೇತೃತ್ವದ ತಂಡ ಬಿ ರಿಪೋರ್ಟ್ ಅರ್ಜಿ ಸಲ್ಲಿಸಿತ್ತು
ಈ ಬಿ ರಿಪೋರ್ಟ್ ವಿರುದ್ಧ ಗುರುನಾಥ ಗೌಡ ಪುನಃ ಕೋರ್ಟ್ ಮೊರೆ ಹೋಗಿದ್ದರು. ಇವರ ಅರ್ಜಿ ವಿಚಾರಣೆ ನಡೆಸಿ ಪುನಃ ತನಿಖೆ ನಡೆಸುವಂತೆ ಕೋರ್ಟ್ ಆದೇಶ ಹೊರಡಿಸಿದೆ. ಈಗ ಗುರುನಾಥ್ ಗೌಡರ ಪರ ನ್ಯಾಯ ಒದಗಿಸಲು ಹೋರಾಟಗಾರರಾದ ಬಸವರಾಜ್ ಕೊರವರ ಆಗ್ರಹಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಕೊಡದೆ ಹೋದಲ್ಲಿ ರಾಜ್ಯ ಸರ್ಕಾರದ ವಿರುದ್ದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
Cauvery Water : ಕಾವೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಫ್ಲೈಟ್ ಹತ್ತಿದ ಡಿ ಬಾಸ್…!