Sports News: ಕುಸ್ತಿಪಟು ವಿನೀಶ್ ಫೋಗಟ್, ಒಲಂಪಿಕ್ಸ್‌ನಲ್ಲಿ ತೂಕ ಹೆಚ್ಚಾದ ಕಾರಣಕ್ಕೆ, ಪದಕ ಗೆಲ್ಲದೇ, ಭಾರತಕ್ಕೆ ವಾಪಸ್ಸಾಗಿದ್ದರು. ಆ ಬೇಸರ ಅವರಲ್ಲಿದ್ದರೂ, ಅವರು ಪಟ್ಟಿದ್ದ ಪ್ರಯತ್ನಕ್ಕೆ ಬೆಲೆ ಕೊಟ್ಟು, ಭಾರತೀಯರು ಅವರನ್ನು ಪ್ರೀತಿಯಿಂದಲೇ ಬರಮಾಡಿಕೊಂಡಿದ್ದರು. ಇದೀಗ ವಿನೀಶ್ ರೈಲ್ವೆ ಇಲಾಖೆಗೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಇದೆ.
ವಿನೀಶ್ ಫೋಗಟ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು, ನನಗೆ ಹೆಮ್ಮೆಯ ವಿಚಾರ. ಆದರೆ ಕಾರಣಾಂತರಗಳಿಂದ ನಾನು ನನ್ನ ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದೇನೆ. ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ್ದಕ್ಕೆ, ನಾನು ರೈಲ್ವೆ ಇಲಾಖೆಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.
ಇನ್ನು ಈ ಊಹಾಪೋಹಗಳಿಗೆ ಸಂಬಂಧಿಸಿದಂತೆ, ವಿನೀಶ್ ಮತ್ತು ಭಜರಂಗ್ ಪೂನಿಯಾ ಕೂಡ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆಯಂಥ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹಾಗಾಗಿ ವಿನೀಶ್ ಫೋಗಟ್ ಲಕ್ಷ ಲಕ್ಷ ಸಂಬಳ ಸಿಗುವ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂದು ಹೇಳಲಾಗುತ್ತಿದೆ.
ಅಲ್ಲದೇ ಕಾಂಗ್ರೆಸ್ ಸೇರ್ಪಡೆಯಾದರೆ, ಹರಿಯಾಣಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಭಜರಂಗ ಪೂನಿಯಾ ಮತ್ತು ವಿನೀಶ್ ಫೋಗಟ್ ಸ್ಪರ್ಧಿಸಲಿದ್ದಾರೆಂದು ಅಂದಾಜಿಸಲಾಗಿದೆ.