Friday, August 29, 2025

Latest Posts

ವಿಂಟೇಜ್ ಕಾರ್ ಶೋ ಮತ್ತು ರ್ಯಾಲಿಗೆ ಎಸ್.ಟಿ.ಸೋಮಶೇಖರ್ ಚಾಲನೆ:

- Advertisement -

Dasara News:

ದಸರಾ ಪ್ರಯುಕ್ತ ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಆಯೋಜಿಸಿದ್ದ ವಿಂಟೇಜ್ ಕಾರ್ ಶೋ ಮತ್ತು ರ್ಯಾಲಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

80, 100 ವರ್ಷ ಹಳೆಯದಾದ ಮ್ಯಾರಿಸ್ ಮೈನರ್, ಅಸ್ಟಿನ್,, ರೋಡ್ ಮಾಸ್ಟರ್, ರೋಲ್ಸ್ ರಾಯ್ಸ್ ಸೇರಿದಂತೆ ನಾನಾ ಮಾಡೆಲ್ ಕಾರುಗಳು ಮತ್ತು ಸ್ಕೂಟರ್ ಗಳ ವೀಕ್ಷಣೆ ಮಾಡಿದ ಸಚಿವರು, ವಿಂಟೇಜ್ ಕಾರಿನಲ್ಲಿ ಸಂಚರಿಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಇಷ್ಟೊಂದು ಬಗೆಬಗೆಯ ವಿಂಟೇಜ್ ಕಾರುಗಳನ್ನು ಹೊಂದಿರುವ ಉದ್ಯಮಿ ಗೋಪಿನಾಥ್ ಶೆಣೈ ಅವರಿಗೆ ಸರ್ಕಾರದ ಪರವಾನಗಿ ಅಭಿನಂದನೆಗಳು. ಅಮೆರಿಕ, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ ನಾನಾ ದೇಶಗಳ ತರಹವೇರಿ ಕಾರುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. 80, 100 ವರ್ಷಗಳ ಹಳೆಯ ಕಾರುಗಳ ನಿರ್ವಹಣೆ ಮಾಡುವುದು ಸುಲಭದ ಕೆಲಸವಲ್ಲ ಎಂದರು.

ಈ ಸಂದರ್ಭದಲ್ಲಿ ಸಂಸದರಾದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೇ ಶ್ರೀನಿವಾಸ್, ಮೂಡಾ ಮಾಜಿ ಅಧ್ಯಕ್ಷರಾದ ರಾಜೀವ್, ಜಂಗಲ್ಸ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಮಾಜಿ ಅಧ್ಯಕ್ಷರಾದ ಅಪ್ಪಣ್ಣ, ಬಿಜೆಪಿ ನಗರ ಜಿಲ್ಲಾಧ್ಯಕ್ಷರಾದ ಶ್ರೀವತ್ಸ ಸೇರಿದಂತೆ ಹಲವು ಮುಖಂಡರು ಜೊತೆಯಲ್ಲಿದ್ದರು.

‘’ಕರಕುಶಲ ಪ್ರಾತ್ಯಕ್ಷಿಕೆ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆ’’ ಉದ್ಘಾಟಿಸಿದ ಎಸ್.ಟಿ.ಸೋಮಶೇಖರ್:

ಕಲ್ಯಾಣಿಯಲ್ಲಿ ಮುತ್ತಿನ ಗಣಪತಿ..?!

ಶ್ರೀ ಬಂಡೆ ಮಹಾ೦ಕಾಳಿ ದೇವಾಲಯದಲ್ಲಿ ನವರಾತ್ರಿ ನಾಲ್ಕನೇ ದಿನದ ಅಲಂಕಾರ…!

- Advertisement -

Latest Posts

Don't Miss