www.karnatakatv.net: ಅಮೆರಿಕಾಗೆ ಸರ್ಕಾರ ಕೆಲಸದ ಉದ್ದೇಶದಿಂದ ಭೇಟಿ ನೀಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲಖಿಂಪುರದಲ್ಲಿ ನಾಲ್ವರು ರೈತರ ಸಾವಿಗೆ ಕಾರಣವಾದ ಹಿಂಸಾಚಾರ ಖಂಡನೀಯ ಎಂದು ಹೇಳಿದರು.
ಬೋಸ್ಟನ್ ನ ಹಾರ್ವರ್ಡ್ ಕೆನಡಿ ಸ್ಕೂಲ್ ನಲ್ಲಿ ನಡೆದ ಸಂವಾದದಲ್ಲಿ ಲಿಖಿಂಪುರದ ಬಗ್ಗೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿದರು. ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬ ಕಾರಣಕ್ಕೆ ಅಷ್ಟೇ ಅಲ್ಲದೇ ದೇಶದ ಯಾವುದೇ ಭಾಗದಲ್ಲಿ ಈ ರೀತಿಯ ಘಟನೆಗಳು ನಡೆದರೂ ಅದರ ಬಗ್ಗೆ ಧ್ವನಿ ಎತ್ತಬೇಕು ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.
“ಲಖಿಂಪುರ ಖೇರಿ ಹಿಂಸಾಚಾರ ಘಟನೆ ಖಂಡನೀಯವಾದದ್ದು ನಮ್ಮಲ್ಲಿ ಪ್ರತಿಯೊಬ್ಬರೂ ಅದನ್ನೇ ಹೇಳುತ್ತಿದ್ದಾರೆ. ಹಾಗೆಯೇ ಬೇರೆ ಕಡೆಗಳಲ್ಲಿ ಇಂತಹ ಘಟನೆಗಳು ನಡೆದಾಗಲೂ ಅದು ಆತಂಕದ ವಿಷಯವೇ ಆಗಿರುತ್ತದೆ” ಎಂದು ಸಿತಾರಾಮನ್ ಹೇಳಿದ್ದಾರೆ.
ಭಾರತದಲ್ಲಿ ಹಲವು ಭಾಗಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಅಮಾರ್ತ್ಯಸೇನ್ ಸೇರಿದಂತೆ ಭಾರತವನ್ನು ತಿಳಿದಿರುವ ನೀವೆಲ್ಲರೂ ಕೇವಲ ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶದಲ್ಲಿಯಷ್ಟೇ ಅಲ್ಲದೇ ಇತರ ಭಾಗಗಳಲ್ಲಿ ನಡೆದ ಕೃತ್ಯಗಳ ಬಗ್ಗೆ ಧ್ವನಿ ಎತ್ತಬೇಕೆಂದು ನಿರೀಕ್ಷಿಸುವೆ. ಈಗ ನನ್ನ ಸಂಪುಟ ಸಹೋದ್ಯೋಗಿಯ ಪುತ್ರ ಬಹುಶಃ ಸಮಸ್ಯೆಗೆ ಸಿಲುಕಿರಬಹುದು ಹಾಗೂ ಅದು ಅವರಲ್ಲದೇ ಬೇರೆ ಯಾರೂ ಮಾಡಿಲ್ಲದೇ ಇರಬಹುದು ಆದರೆ ಕಾನೂನಿನ ಪ್ರಕ್ರಿಯೆಗಳು ಪೂರ್ಣಗೊಂಡು ನೈಜತೆ ಸಾಬೀತಾಗಬೇಕು” ಎಂದು ಸೀತಾರಾಮನ್ ಹೇಳಿದ್ದಾರೆ.

