- Advertisement -
www.karnatakatv.net: ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೋಳಿಯಿಂದ ಸಚಿವ ಸಂಪುಟದ ವಿಸ್ತರಣೆ ಸುಳಿವು ಸಿಗುತ್ತಿದ್ದಂತೆ ದೇವರ ಮೊರೆಹೋದ ರಮೇಶ್ ಜಾರಕಿಹೋಳಿ.
ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ರಮೇಶ್ ಜಾರಕಿಹೋಳಿ. ಉತ್ತರಾಖಂಡ ಮಂದಕಿನಿ ನದಿಯ ಸಮೀಪದ ಗಡ್ವಾಲ್ ಹಿಮಾಲಯ ವ್ಯಾಪ್ತಿಯಲ್ಲಿ ಬರುವ ಕೇದಾರನಾಥ ದೇವಾಲಯ. ರಮೇಶ್ ಜಾರಕಿಹೋಳಿಗೆ ಅಳಿಯ ಅಂಬಿರಾವ್ ಪಾಟೀಲ, ಪುತ್ರ ಅಮರನಾಥ ಜಾರಕಿಹೋಳಿ ಸೇರಿದಂತೆ ಆಪ್ತರು ಸಾಥ ನೀಡಿದ್ದಾರೆ. ಈ ಹಿಂದೆ ಮೊದಲಬಾರಿಗೆ ಸಚಿವರಾಗುವ ಮುನ್ನ ಒಂದು ತಿಂಗಳ ಮುಂಚೆ ಇದೇ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ರಮೇಶ್ ಜಾರಕಿಹೋಳಿ ಈಗಾ ಸಚಿವ ಸಂಪುಟದ ವಿಸ್ತರಣೆ ಮುನ್ನವೇ ಕೇದಾರನಾಥ ದೇವಾಲಯಕ್ಕೆ ಭೇಟಿ ಕುತೂಹಲ ಮೂಡಿಸಿದೆ. ರಮೇಶ್ ಜಾರಕಿಹೋಳಿ ಈ ಬಾರಿಯಾದರೂ ಸಚಿವ ಸ್ಥಾನ ಸಿಗುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.
ನಾಗೇಶ್ ಕುಂಬಳಿ, ಕರ್ನಾಟಕ ಟಿವಿ- ಬೆಳಗಾವಿ
- Advertisement -