- Advertisement -
ಜೀರೋ ಸೈಜ್‌ನಿಂದ ಪಡ್ಡೆ ಹುಡುಗರ ಮನದಲ್ಲಿ ಮನೆ ಮಾಡಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯ ತಾಯಿಯಾಗುತ್ತಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಮೊದಲಿನಂತೆ ಅನುಷ್ಕಾ ಈಗಲೂ ಯೋಗಾಸನ ಮಾಡುತ್ತಿದ್ದು, ಶಿರಸಾಶನ ಮಾಡುವಾಗ ಪತಿ ವಿರಾಟ್ ಕೊಹ್ಲಿ ಪತ್ನಿಗೆ ಸಾಥ್ ನೀಡಿದ್ದಾರೆ.

ವೈದ್ಯರ ಸೂಚನೆ ಮೇರೆಗೆ ಅನಷ್ಕಾ ಶರ್ಮಾ ಕಠಿಣ ಆಸನಗಳನ್ನ ಮಾಡುತ್ತಿದ್ದಾರೆ. ಅಂಥ ಆಸನಗಳಲ್ಲಿ ಶಿರವನ್ನ ನೆಲಕ್ಕೆ ಹಚ್ಚಿ, ಕಾಲನ್ನ ಮೇಲೆತ್ತುವ ಆಸನ ಶಿರಸಾಶನ. ಈ ಆಸನ ಮಾಡುವಾಗ ತುಂಬು ಗರ್ಭಿಣಿ ಅನುಷ್ಕಾರಿಗೆ ಪತಿ ವಿರಾಟ್ ಸಹಾಯ ಮಾಡಿದ್ದಾರೆ. ಈ ಬಗ್ಗೆ ಅನುಷ್ಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಪ್ರವಾಸದಲ್ಲಿ ನಿರತರಾಗಿದ್ದು, ಈಗಾಗಲೇ ಟೀಂ ಇಂಡಿಯಾ ಏಕದಿನ ಪಂದ್ಯಗಳನ್ನ ಸೋತಿದೆ.ನಾಳೆ ಏಕದಿನ ಸರಣಿಯ ಕೊನೆಯ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಗೆಲ್ಲಬೇಕಿದೆ.
- Advertisement -

