ತಮ್ಮ ಕುಟುಂಬದ ವಿರುದ್ಧ ಕೇಳಿ ಬಂದ ಆರೋಪಗಳಿಗೆಲ್ಲಾ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವ್ರು ಸ್ಪಷ್ಟನೆ ಕೊಟ್ಟಿದ್ದಾರೆ. ರಾಷ್ಟ್ರೀಯ ನ್ಯೂಸ್ ಏಜೆನ್ಸಿ PTIಗೆ ಸಂದರ್ಶನದಲ್ಲಿ ಪ್ರತಿಯೊಂದು ವಿಚಾರದ ಬಗ್ಗೆಯೂ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದರಲ್ಲಿ ಕೆಲವು ವ್ಯಕ್ತಿಗಳಿದ್ದಾರೆ. ಅವರಲ್ಲಿ ಕೆಲವರ ಹೆಸರು ಗೊತ್ತು. ಕೆಲವರು ಈ ಬಗ್ಗೆ ಹೇಳಿದ್ದಾರೆ. ಆದರೆ ನಾವದನ್ನು ಫ್ರೂವ್ ಮಾಡೋಕೆ ಆಗಲ್ಲ. ಎಸ್‌ಐಟಿ ಎಲ್ಲವನ್ನೂ ಬಯಲಿಗೆಳೆಯಲಿದೆ. ಅವರ ಹೆಸರುಗಳು ಹೊರಬರಲಿವೆ. ಸಂಸ್ಥೆಯ ಹೆಸರು ಹಾಳು ಮಾಡೋರು ಹೊರಗೆ ಬರ್ತಾರೆ. ಇದು ಎಸ್‌ಐಟಿಯ ಜವಾಬ್ದಾರಿಯಾಗಿದೆ. ನಾವು ಎಸ್‌ಐಟಿ ವರದಿಗಾಗಿ ಎದುರು ನೋಡ್ತಿದ್ದೇವೆ. ನಮಗೆ ಅಂತಿಮ ವರದಿ ಬೇಕಾಗಿದೆ.
ಯಾವ ರೀತಿಯ ತನಿಖೆಯಾದರೂ ಮಾಡಲಿ. ನಾವು ನಮ್ಮ ಮಿತಿಯಲ್ಲಿ ಎದುರಿಸಲು ಸಿದ್ಧರಿದ್ದೇವೆ. ತನಿಖೆಯನ್ನು ನಾವು ಸ್ವಾಗತಿಸುತ್ತೇವೆ. ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಸಂದೇಶ ಹೋಗ್ತಿದೆ. ಯುವಕರಲ್ಲಿ ಬಹಳ ಗೊಂದಲ ಮೂಡಿಸ್ತಿದೆ. ಈ ರೀತಿಯ ಸಂದೇಶಗಳಿಂದ ವಿಚಲಿತರಾಗ್ತಿದ್ದಾರೆ. ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆ ಜೊತೆ ಕನೆಕ್ಷನ್ ಇದೆ. ದೇವಸ್ಥಾನ, ಹಿಂದೂ ಧರ್ಮದ ಮೂಲಕ ಯುವಜನತೆ ಸಾಗುತ್ತಿರುತ್ತಾರೆ. ಇಂಥಾ ಯುವಪೀಳಿಗೆಯ ತಲೆ ಕೆಡಿಸೋದು ಸರಿಯಲ್ಲ. ಹೀಗಂತ, ಸೋಶಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿಯಾಗಿ ತಪ್ಪು ಮಾಹಿತಿ ನೀಡೋರ ವಿರುದ್ಧ, ವೀರೇಂದ್ರ ಹೆಗ್ಗಡೆಯವರು ಕಿಡಿಕಾರಿದ್ದಾರೆ.
ಇನ್ನು, ಧರ್ಮಸ್ಥಳದಲ್ಲೇ, ಭಾರೀ ಸಂಚಲನ ಉಂಟು ಮಾಡಿರುವ ಸೌಜನ್ಯ ಕೇಸ್ ಬಗ್ಗೆಯೂ ಮಾತನಾಡಿದ್ದಾರೆ. ಸೌಜನ್ಯ ಹುಡುಗಿಯ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಎಲ್ಲರೂ ನಮ್ಮ ಸಿಬ್ಬಂದಿ.. ಪ್ರತಿದಿನದಂತೆ ಬಂದಿರ್ತಾರೆ. ನಾನು ಸರ್ಕಾರಕ್ಕೆ ತಿಳಿಸಿದ್ದೆ, ಆರೋಪಿಗಳ ಪತ್ತೆಗೆ ಹೇಳಿದ್ದೆ. ನನ್ನ ಕುಟುಂಬದ ವಿರುದ್ಧ ಆರೋಪ ಬಂದಿದೆ. ಅವರು ಭಾರತದಲ್ಲೇ ಇಲ್ಲ. ವಿದೇಶದಲ್ಲಿ ಇದ್ದಾರೆ. ಇಂಥಾ ಆರೋಪಗಳು ಆಧಾರ ರಹಿತವಾಗಿವೆ. ಕೆಲವರು ಸುಮ್ಮನೇ ಎಳೆದು ತರುತ್ತಿದ್ದಾರೆ. ಹೀಗಂತ ವೀರೇಂದ್ರ ಹೆಗ್ಗಡೆಯವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.