ಮಾಸ್ಕೋ: ಉಕ್ರೇನ್‌ನಲ್ಲಿನ ಯುದ್ಧವನ್ನು ಆದಷ್ಟು ಬೇಗ ಕೊನೆಗೊಳಿಸುವ ಗುರಿಯನ್ನು ರಷ್ಯಾಹೊಂದಿದ್ದು, ಈ ಹೋರಾಟವು ಆದಷ್ಟು ಬೇಗ ಕೊನೆಗೊಳ್ಳಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪುಟಿನ್ ಅವರು, ಈ ಸಂಘರ್ಷವನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆ. ನಾವು ಇದಕ್ಕಾಗಿ ಶ್ರಮಿಸುತ್ತಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ. ಇದೆಲ್ಲವೂ ಶೀಘ್ರವಾಗಿ ಕೊನೆಗೊಳಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದರು.
ಮಕ್ಕಳು ಸಂಸ್ಕಾರವಂತರಾಗಬೇಕೆಂದರೆ ನೀವು ಯಾವ ರೀತಿ ನಡೆದುಕೊಳ್ಳಬೇಕು..?
ಯುಎಸ್ ಅಧ್ಯಕ್ಷ ಜೋ ಬೈಡೆನ್ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಆತಿಥ್ಯ ನೀಡಿದ ಒಂದು ದಿನದ ನಂತರ ಪುಟಿನ್ ಈ ಹೇಳಿಕೆ ನೀಡಿದ್ದಾರೆ. ಇದಕ್ಕೂ ಮೊದಲು ಝೆಲೆನ್ಸ್ಕಿಗೆ ನಿರಂತರ ಮತ್ತು ಅಚಲವಾದ ಬೆಂಬಲ ನೀಡುವುದಾಗಿ ಯುಎಸ್ ಭರವಸೆ ನೀಡಿತ್ತು. ನಮ್ಮ ಗುರಿ ಮಿಲಿಟರಿ ಸಂಘರ್ಷದ ಫ್ಲೈವೀಲ್ ಅನ್ನು ತಿರುಗಿಸುವುದು ಅಲ್ಲ. ಇದಕ್ಕೆ ವಿರುದ್ಧವಾಗಿ, ಈ ಯುದ್ಧವನ್ನು ನಾವು ಕೊನೆಗೊಳಿಸಲು ಶ್ರಮಿಸುತ್ತೇವೆ ಎಂದು ಪುಟಿನ್ ಹೇಳಿದ್ದಾರೆ.
ಯಾರ ತಪ್ಪಿಗೆ ದ್ರೌಪದಿಗೆ ಐವರು ಪತಿಯನ್ನು ಪಡೆಯಬೇಕಾಯಿತು ಗೊತ್ತಾ..? ಭಾಗ 2
ನೀವು ತ್ವಚೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ..ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ..!