ಯಾರ ತಪ್ಪಿಗೆ ದ್ರೌಪದಿಗೆ ಐವರು ಪತಿಯನ್ನು ಪಡೆಯಬೇಕಾಯಿತು ಗೊತ್ತಾ..? ಭಾಗ 2

ಮೊದಲ ಭಾಗದಲ್ಲಿ ನಾವು ದ್ರೌಪದಿಯ ಪಂಚ ಪತಿಯರ ಬಗ್ಗೆ ಹೇಳುವಾಗ, ಓರ್ವ ಸ್ತ್ರೀ ಮತ್ತು ಓರ್ವ ಪುರುಷ ಪಗಡೆಯಾಡುತ್ತಿದ್ದರು. ಇಂದ್ರ ಬಂದರೂ ಕೂಡ ಅವರು ಗೌರವಿಸಲಿಲ್ಲ. ಹಾಗಾಗಿ ಇಂದ್ರ ಅವರಿಗೆ ತಕ್ಕ ಶಾಸ್ತಿ ಮಾಡುತ್ತೇನೆಂದು ಹೇಳಿದ್ದ. ಈಗ ಅದರ ಮುಂದುವರಿದ ಭಾಗವಾಗಿ ಮುಂದಿನ ಕಥೆಯನ್ನ ತಿಳಿಯೋಣ..

ಇಂದ್ರ ಸೊಕ್ಕಿನ ಮಾತಾಡಿದಾಗ, ಅಲ್ಲಿದ್ದ ಪುರುಷ ಅವನೆಡೆಗೆ ನೋಡಿ ನಗುತ್ತಾನೆ. ತಕ್ಷಣ ಇಂದ್ರ ಅಲ್ಲಾಡಲೂ ಆಗದಂತೆ ಸ್ಥಬ್ಧವಾಗಿ ನಿಲ್ಲುತ್ತಾನೆ. ನಂತರ ಅಲ್ಲಿದ್ದ ಸ್ತ್ರೀ ಹೋಗಿ, ಇಂದ್ರನನ್ನು ಸ್ಪರ್ಶಿಸುತ್ತಾಳೆ. ಆಗ ಇಂದ್ರ ಮೊದಲಿನಂತಾಗುತ್ತಾನೆ. ಆಗ ಅವನಿಗೆ ಅಲ್ಲಿರುವ ಸ್ತ್ರೀ ಮತ್ತು ಪುರುಷ ಶಿವ ಮತ್ತು ಪಾರ್ವತಿ ಎಂದು ಗೊತ್ತಾಗುತ್ತದೆ. ಅವನು ಅವರಲ್ಲಿ ಕ್ಷಮೆ ಕೇಳುತ್ತಾನೆ.

ಹಣದ ಅವಶ್ಯಕತೆ ಇದ್ದಾಗ ಮನಸ್ಸಿನಲ್ಲಿ ಈ ಸಂಖ್ಯೆಯನ್ನು ನೆನೆಯಿರಿ, ಖಂಡಿತ ಸಮಸ್ಯೆ ದೂರವಾಗುತ್ತದೆ..!

ಆದ್ರೆ ಶಿವ, ನಿನ್ನ ಅಹಂಕಾರವನ್ನು ನಾನು ಮುರಿಯುತ್ತೇನೆ. ಇಲ್ಲೇ ಇರುವ ಗುಹೆಗೆ ಹೋಗಿ ನೋಡು, ನಿನ್ನ ಹಾಗೆ ಮೆರೆದ ನಾಲ್ಕು ಜನರಿದ್ದಾರೆ ಎಂದು ಹೇಳುತ್ತಾನೆ. ಇಂದ್ರ ಮತ್ತು ಅವನ ಜೊತೆ ಬಂದಿದ್ದ ಮಹಿಳೆ ಆ ಗುಹೆಗೆ ಹೋಗುತ್ತಾರೆ. ಅಲ್ಲಿ ಇಂದ್ರನಂತೆ ಇರುವ ನಾಲ್ವರು ದೇವತೆಗಳಿರುತ್ತಾರೆ.

ಆಗ ಶಿವ ಅವರನ್ನ ಕುರಿತು, ಇಂದ್ರ ನೀನು ಈ ನಾಲ್ವರೊಂದಿಗೆ ಭೂಲೋಕದಲ್ಲಿ ಜನಿಸಬೇಕು. ನೀವು ಪಂಡ ಪಾಂಡವರೆನ್ನಿಸಿಕೊಳ್ಳುತ್ತೀರಿ. ನಂತರ ನೀವು ಐವರು ಈ ಮಹಿಳೆಯನ್ನ ವಿವಾಹವಾಗಬೇಕು. ಈಕೆ ದ್ರೌಪದಿಯಾಗಿರುತ್ತಾಳೆ. ಮತ್ತು ನೀವು ಆರು ಜನ ಸೇರಿ, ಭೂಲೋಕದಲ್ಲಿ ನಡೆಯುವ ಯುದ್ಧಕ್ಕೆ ಕಾರಣರಾಗಿ, ಭೂಮಿಯ ಭಾರವನ್ನು ಕಡಿಮೆ ಮಾಡಬೇಕು ಎಂದು ಹೇಳುತ್ತಾನೆ.

ನೀವು ತ್ವಚೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ..ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ..!

ಹಾಗಾಗಿ ದ್ರೌಪದಿಗೆ ಐವರು ಪತಿಯರಿರುತ್ತಾರೆ. ದುರ್ಯೋಧನ ದ್ರೌಪದಿಯ ವಸ್ತ್ರಾಪಹರಣ ಮಾಡಿದ್ದಕ್ಕಾಗಿ, ಮಹಾಭಾರತ ಯುದ್ಧ ನಡೆಯುತ್ತದೆ. ಈ ಯುದ್ಧದಲ್ಲಿ ಲಕ್ಷಾಂತರ ಜನ ಸಾವನ್ನಪ್ಪುತ್ತಾರೆ.

About The Author