ಕರ್ನಾಟಕ ಟಿವಿಯ ಇಂಪ್ಯಾಕ್ಟ್ ; ವೃದ್ಧ ದಂಪತಿಗೆ ನೆರವಾದ ತಂಡ

www.karnatakatv.net: ರಾಯಚೂರು : ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಗುಂಡ ಗ್ರಾಮದ ವೃದ್ಧ ದಂಪತಿಗಳಿಗೆ ಕೊನೆಗೂ‌ ನೆಮ್ಮದಿಯ ಸೂರು ಸಿಕ್ಕಿದೆ..  ದಶಕಗಳಿಂದ ಈ ದಂಪತಿಗಳು ಹಲವು ಸಂಕಷ್ಟಗಳನ್ನ ಎದುರಿಸ್ತಿದ್ರು. ಈ ಬಗ್ಗೆ ಕರ್ನಾಟಕ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು.. ಆ ಹಿನ್ನಲೆ ಇಂದು ದಂಪತಿಗಳಿಗೆ ಮನೆ ಜೊತೆಗೆ ನೆರವಿನ ಮಹಾಪೂರವೇ ಹರಿದು ಬರ್ತಿದೆ…

ಯೆಸ್ … ಇದು ನಮ್ಮ ಕರ್ನಾಟಕ ಟಿವಿ ಬಿಗ್ ಇಂಪ್ಯಾಕ್ಟ್..

ರಾಯಚೂರಿನ ವೃದ್ಧ ದಂಪತಿಗಳೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದಾರೆ. ಆಳುವ ಸರ್ಕಾರಗಳು ಕಡೆಗಣಿಸಿದರೆ ನಾವು ನಿಮ್ ಜೊತೆಗಿದಿವಿ ಅಂತ ಗಂಗಾವತಿಯ ವಾಯ್ಸ್ ಆಫ್ ಪೀಪಲ್ ತಂಡ ಮುಂದೆ ಬಂದಿದೆ. ಅಷ್ಟೇ ಅಲ್ಲ ಕಷ್ಟಗಳನ್ನೇ ಹಾಸಿ ಹೊದ್ದಿದ್ದ ಈ ದಂಪತಿಗಳಿಗೆ ಅಂತಾನೆ ಈ ಕರುಣಾಮಯಿ ತಂಡದಿಂದ ಮನೆ ಸಿದ್ಧವಾಗ್ತಿದೆ..

ಹೌದು ಸರ್ಕಾರದಿಂದ ಮಂಜೂರಾಗಿದ್ದ ಮನೆಯ ತಗಡಿನ ಶೀಟ್ ಗಳು ಹಾರಿ  ಹೋದ ಬೆನ್ನಲ್ಲೆ ವಾಯ್ಸ್ ಆಫ್ ಪೀಪಲ್ ತಂಡ ಬಣ್ಣ ಬಣ್ಣದ ತಗಡಿನ ಶೀಟ್ ಗಳ ಜೊತೆಗೆ ಮರಳು, ಇಟಗಿ ಎಲ್ಲವನ್ನೂ ತರಿಸಿ  ವೃದ್ಧ ದಂಪತಿಗಳಿಗೆ ನೆರಳು ಮಾಡಿಕೊಡುತ್ತಿದ್ದಾರೆ.

ಅಷ್ಟೇ ಅಲ್ಲ ವೃದ್ಧರಿಗೆ ಆರು ತಿಂಗಳಿಗೆ ಆಗುವಷ್ಟು ರೇಷನ್, ಮಂಚ ಗಾದೆ ಎಲ್ಲವನ್ನೂ ಈ ತಂಡ ವೃದ್ಧರಿಗೆ ಒದಗಿಸಿಕೊಟ್ಟಿದೆ. ಇದೆಲ್ಲವೂ ಸಾಧ್ಯವಾದದ್ದು ವಾಯ್ಸ್ ಆಫ್ ಪೀಪಲ್ ತಂಡದ ಅಧ್ಯಕ್ಷ ಯುವ ಉತ್ಸಾಹಿ ತರುಣ ಪ್ರಫುಲ್ ಹಿರೇಮಠ ಎಂಬುವವರಿಂದ ಎಂಬುದು ವಿಶೇಷ..

ಅಷ್ಟೇ ಅಲ್ಲ ಕಳೆದ ಆರು ತಿಂಗಳಿನಿಂದ ಕತ್ತಲಲ್ಲಿ ಕಾಲ ಕಳೆಯುತ್ತಿದ್ದ ಈ ದಂಪತಿಗಳು ಇನ್ನು ಮುಂದೆ ಚಿಂತಿಸಬೇಕಿಲ್ಲ. ಇದೇ ತಂಡದಿಂದ ವೃದ್ಧರಿಗೆ ವುದ್ಯುತ್ ಸೌಕರ್ಯವೂ ದೊರೆಯುತ್ತಿದೆ..  ಏನೇ ಆಗಲಿ ಓಟು ಪಡೆದು ನಮ್ಮನ್ನ ಆಳುವ ಸರ್ಕಾರಗಳು ಮಾಡದಿರುವ ಕಾರ್ಯವನ್ನ ಈ ಪೀಪಲ್ ಆಫ್ ವಾಯ್ಸ್ ತಂಡ ಮಾಡ್ತಿದೆ. ಅದಕ್ಕಾಗಿ ಅಚರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು…

ಅನಿಲ್ ಕುಮಾರ್  ಕರ್ನಾಟಕ ಟಿವಿ ರಾಯಚೂರು

About The Author