ಕಾಂಗ್ರೆಸ್ ಅಲ್ಲ SDPI ಗೆ ವೋಟ್? ನಾವೆಲ್ಲಾ ಒಗ್ಗಟ್ಟಾಗಿದ್ದೇವೆ!: Prabha Mallikarjun Podcast

Political News:  ಸಂಸದೆಯಾಗಿರುವ ಪ್ರಭಾ ಮಲ್ಲಿಕಾರ್ಜುನ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅಪ್ಪಾಜಿಯವರ ಕೆಲಸದಿಂದ ಇಲ್ಲಿನ ಮತದಾರರು ನಮಗೆ ಬೆಂಬಲಿಸುತ್ತಾರೆ ಅನ್ನೋ ನಂಬಿಕೆ ಇದೆ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.

ಅಪ್ಪಾಜಿಯವರು ಅಜಾತು ಶತ್ರುಗಳಾಗಿ ಅವರು ಮಾಡಿರುವ ಕೆಲಸಗಳು ನಮ್ಮನ್ನು ಕಾಯುತ್ತದೆ. ಈ ಪಾಸಿಟಿವ್ಸ್ ಪಡೆದು ನಾವು ಚುನಾವಣೆಯಲ್ಲಿ ಮುಂದೆ ಹೋಗುತ್ತಿದ್ದೇವೆ. ಬೇರೆ ಏನೇ ಋಣಾತ್ಮಕ ವಿಷಯ ಬಂದರೂ, ನಾವು ಕಾದು ನೋಡುವ ಪ್ರಯತ್ನ ಮಾಡುತ್ತಿದ್ದೇವೆ. ಅದೆಲ್ಲ 1 ರೀತಿಯಲ್ಲಿ ನಮಗೆ ಗೈಡ್ ಮಾಡುವ ವಿಷಯವಾಗಿದೆ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.

ರಾಜಕೀಯ ತುಂಬಾ ಕಷ್ಟದ ಕೆಲಸ. ಹಾಗಾಗಿ ಸಮರ್ಥ್ ಪ್ರಥಮ ಬಾರಿ ಸ್ಪರ್ಧಿಸುತ್ತಿದ್ದಾರೆ. ಪ್ರಚಾರವೆಲ್ಲ ಮಾಡಿದ್ದಾರೆ. ನಾವು ಗೆದ್ದರೆ ಕ್ಷೇತ್ರದ ಸಮಸ್ಯೆ ತಿಳಿದು, ಅದಕ್ಕಾಗಿ ನಾವು ಕೆಲಸ ಮಾಡಬೇಕಿದೆ. ಅದಕ್ಕಾಗಿ ಸಮರ್ಥ ಎಲ್ಲ ರೀತಿಯ ತಯಾರಿ ಮಾಡಿದ್ದಾರೆ. ಬೆಂಗಳೂರು, ದೆಹಲಿಗೆ ಬಂದು ರಾಜಕೀಯದ ಬಗ್ಗೆ ಹಲವು ವಿಷಯಗಳನ್ನು ತಿಳಿಯುತ್ತಿದ್ದಾರೆ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.

About The Author