ಮತದಾರರಿಗೆ ನೀಡಲು ಬೆಡ್ ಶೀಟ್ ಸಾಗಿಸುತಿದ್ದ ವೇಳೆ ಮಾಲು ಸಮೇತ ವಾಹನ ಪೋಲಿಸರ ವಶಕ್ಕೆ

ಕೋಲಾರ:

ಕೋಲಾರ ಜಿಲ್ಲೆಯ  ಬಂಗಾರಪೇಟೆ ಕ್ಷೇತ್ರದ  ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಶೇಷುರವರು ಮತದಾರರಿಗೆ ಬೆಡ್ ಶೀಟ್ ಹಂಚಿಕೆ ಮಾಡುವ ಸಲುವಾಗಿ ಬೆಂಗಳೂರಿನಿಂದ ಬಂಗಾರಪೇಟೆಗೆ ಈಚರ್ ವಾಹನದಲ್ಲಿ ಸುಮಾರು 2000 ಬೆಡ್ ಶೀಟ್ ಗಳನ್ನು ಸಾಗಿಸುತ್ತಿದೆ ವೇಳೇ  ಕೋಲಾರ ರಾಷ್ಟ್ರೀಯ ಹೆದ್ದಾರಿ ಪೊಲಿಸರು ತಪಾಸಣೆ ಮಾಡುತಿದ್ದ ವೇಳೆ ಈಚರ ವಾಹನವನ್ನು ಪರಿಶಿಲನೆ ಮಾಡಿದ್ದಾರೆ.

 

ಈ ವೇಳೆ ಬೆಡ್ ಶೀಟ್ ಸಾಗಿಸುತಿದ್ದ ವಾಹನದ  ಚಾಲಕನನ್ನು ಕೇಳಿದಾಗ ಬೆಂಗಳೂರಿನಿಂದ ಬಂಗಾರಪೇಟೆಗೆ ಹೊಗುತ್ತಿರುವುದಾಗಿ ಹೇಳಿರುತ್ತಾನೆ. ಕೂಡಲೆ ಎಚ್ಚೆತ್ತುಕೊಂಡ ಪೋಲಿಸರು ವಾಹನವನ್ನು  ಬೆಡ್ ಶೀಟ್ಶ ಸಮೇತ ವಶಕ್ಕೆ ಪಡೆದುಕೊಂಡು ವೇಮಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ.

ಮತ್ತೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮುಂದಾದ ಮೆಟಾ ಕಂಪನಿ

ಮಂಡ್ಯದತ್ತ ಮೋದಿ

ಗೋಧಿ ಹಿಟ್ಟಿನ ಗುಲಾಬ್ ಜಾಮೂನ್ ರೆಸಿಪಿ..

 

About The Author