ಕೆಲವರ ನಂಬಿಕೆ ಪ್ರಕಾರ, ನಾವು ಈ ಜನ್ಮದಲ್ಲಿ ಮಾಡಿದ ತಪ್ಪಿಗೆ, ನಮ್ಮ ಸಾವಿಗೂ ಮುನ್ನ ನಮಗೆ ಶಿಕ್ಷೆ ಸಿಗುತ್ತದೆ. ಆದ್ರೆ ಇನ್ನು ಕೆಲವರ ನಂಬಿಕೆ ಪ್ರಕಾರ, ಮುಂದಿನ ಜನ್ಮದಲ್ಲಿ ಈ ಜನ್ಮದಲ್ಲಿ ಮಾಡಿದ ತಪ್ಪಿಗೆ ಶಿಕ್ಷೆ ಸಿಗತ್ತೆ. ಆದ್ರೆ ಗರುಡ ಪುರಾಣದ ಪ್ರಕಾರ, ನಾವು ಈ ಜನ್ಮದಲ್ಲಿ ಮಾಡಿದ ತಪ್ಪಿಗೆ, ನರಕದಲ್ಲಿ ಶಿಕ್ಷೆ ಸಿಗುತ್ತದೆ. ನರಕದಲ್ಲಿ ಸಿಗುವ ಶಿಕ್ಷೆಗಳ ಬಗ್ಗೆ ಇದರಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಚು ಮಾಹಿತಿಯನ್ನ ತಿಳಿಯೋಣ ಬನ್ನಿ..
ಯಾರು ಅಪ್ಪ ಅಮ್ಮನಿಗೆ ಹಿಂಸಿಸುತ್ತಾರೋ, ಅವರನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲವೋ, ಅವರಿಗೆ ನರಕದಲ್ಲಿ ಕಾಲಸೂತ್ರಮ್ ಶಿಕ್ಷೆ ಸಿಗುತ್ತದೆ. ಕುದಿಯುತ್ತಿರುವ ನೆಲದ ಮೇಲೆ ಇಂಥವರನ್ನ ಮಲಗಿಸಲಾಗತ್ತೆ. ಇದೇ ಅವರಿಗೆ ಸಿಗುವ ಶಿಕ್ಷೆ.
ತನ್ನ ಮನೋರಂಜನೆಗಾಗಿ, ತನ್ನ ಆಸೆ ತೀರಿಸಿಕೊಳ್ಳಲು ಪ್ರಾಣಿ ಹಿಂಸೆ ಮಾಡುತ್ತಾನೋ, ಅಂಥವನಿಗೆ ಕುಂಭಿಪಾಕಂ ಶಿಕ್ಷೆ ನೀಡಲಾಗತ್ತೆ. ಕುದಿಯುತ್ತಿರುವ ಎಣ್ಣೆಯಲ್ಲಿ ಅಂಥವರನ್ನ ಹಾಕಲಾಗತ್ತೆ. ಹೀಗೆ ನಾವು ಹೇಳುವುದೆಲ್ಲ, ಕಪೋಲಕಲ್ಪಿತವಲ್ಲ. ಬದಲಾಗಿ ಗರುಡ ಪುರಾಣದಲ್ಲಿ ಈ ರೀತಿ ನರಕದಲ್ಲಿ ಸಿಗುವ ಶಿಕ್ಷೆಗಳ ಬಗ್ಗೆ ಉಲ್ಲೇಖಿಸಲಾಗಿದೆ.
ಇನ್ನೊಬ್ಬರಿಗೆ ಮೋಸ ಮಾಡಿ, ಅವರ ಸಂಪತ್ತನ್ನು ಪಡೆದವನಿಗೆ ನರಕದಲ್ಲಿ ಶಿಕ್ಷೆ ಸಿಗುತ್ತದೆ. ತಾನು ಕಷ್ಟಪಡದೇ, ಇನ್ನೊಬ್ಬರ ಹಣವನ್ನ ಕಿತ್ತುಕೊಳ್ಳುವ ವ್ಯಕ್ತಿಗೆ, ಮಹಾರೂವ ಶಿಕ್ಷೆ ಕೊಡಲಾಗುತ್ತದೆ. ಅಂದ್ರೆ ವಿಷ ಸರ್ಪಗಳಿಂದ ಅವರಿಗೆ ಕಚ್ಚಿಸಲಾಗತ್ತೆ.
ಇನ್ನು ಪತಿ ಪತ್ನಿ ಇಬ್ಬರೂ ಅನ್ಯೋನ್ಯವಾಗಿರದೇ, ಅನ್ಯೋನ್ಯವಾಗಿರುವಂತೆ ನಟಿಸಿ, ಇನ್ನೊಬ್ಬರೊಂದಿಗೆ ಸಂಬಂಧವಿಟ್ಟುಕೊಂಡರೆ, ಅಂಥವರಿಗೂ ನರಕದಲ್ಲಿ ಶಿಕ್ಷೆ ಇದೆ. ಅಂಥವರಿಗೆ ಕಬ್ಬಿಣವನ್ನು ಕಾಯಿಸಿ, ಅದರಿಂದ ಹೊಡೆಯಲಾಗತ್ತೆ. ಅವರ ದೇಹದಿಂದ ರಕ್ತ ಸುರಿಯುವವರೆಗೂ ಹೀಗೆ ಶಿಕ್ಷಿಸಲಾಗತ್ತೆ.
ಕಳ್ಳತನ, ದರೋಡೆ ಮಾಡುವ ವ್ಯಕ್ತಿಗಳಿಗೂ ನರಕದಲ್ಲಿ ಶಿಕ್ಷೆ ಇದೆ. ಸೂಚಿಮುಕಮ್ ಅನ್ನೋ ಶಿಕ್ಷೆ ಕೊಡಲಾಗುತ್ತದೆ. ಈ ಶಿಕ್ಷೆಯನ್ನ ಊಟ, ನೀರು ಕೊಡದೇ, ಸೂಜಿಯಿಂದ ಉಗುರಿಗೆ ಚುಚ್ಚಿ ಚುಚ್ಚಿ ಹಿಂಸೆ ಮಾಡಿ, ಶಿಕ್ಷೆ ಕೊಡಲಾಗತ್ತೆ. ಹಸಿವಿನಿಂದ ಬಳಲುತ್ತಿರುವ ವ್ಯಕ್ತಿಗೆ ಊಟ ಕೊಡದೇ, ಅವರಿಗೆ ಹಿಂಸೆ ಕೊಡುವವರಿಗೆ ಪಕ್ಷವರ್ತಣಕಮ್ ಅನ್ನೋ ಶಿಕ್ಷೆ ಕೊಡಲಾಗತ್ತೆ. ಅಂದ್ರೆ ಹಿಂಸಾತ್ಮಕ ಪ್ರಾಣಿ ಪಕ್ಷಿಗಳಿಂದ ಇಂಥವರ ಕಣ್ಣು ತೆಗೆಸಲಾಗತ್ತೆ.