Health Tips: ವ್ಯಾಯಾಮ ಮಾಡೋದು, ವಾಕಿಂಗ್ ಮಾಡೋದು ಆರೋಗ್ಯಕ್ಕೆ ಉತ್ತಮ ಅಂತಾ ನಮ್ಮೆಲರಿಗೂ ತಿಳಿದಿದೆ. ಆದರೆ, ವಾಕಿಂಗ್ ಎಷ್ಟು ನಿಮಿಷ ಮಾಡಬೇಕು..? ಎಷ್ಟು ವ್ಯಾಯಮ ಮಾಡಬೇಕು ಅಂತಾ ತಿಳಿದಿರಬೇಕು. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ದಿನಕ್ಕೆ 45 ನಿಮಿಷ ಬ್ರಿಸ್ಕ್ ವಾಕ್ ಮಾಡಬೇಕು. ಅಥವಾ ಜಾಗಿಂಗ್, ವ್ಯಾಯಾಮ ಮಾಡಬೇಕು. ಹಾಗಂತ ಅತೀ ಭಾರವಾದ ವಸ್ತುಗಳನ್ನು ಎತ್ತೋದೆಲ್ಲ ಮಾಡುವ ಹಾಗಿಲ್ಲ. ಇದರಿಂದ ಹೃದಯದ ಆರೋಗ್ಯ ಉತ್ತಮವಾಗುವ ಬದಲು, ಆರೋಗ್ಯಕ್ಕೆ ಹಾನಿಯಾಗಬಹುದು. ಹಾಗಾಗಿ ವ್ಯಾಯಾಮ ಮಾಡುವುದನ್ನು ಸರಿಯಾಗಿ ಕಲಿತು, ಕೆಲ ನಿಮಿಷಗಳ ಕಾಲ ಮಾತ್ರ ವ್ಯಾಯಾಮ, ಜಾಗಿಂಗ್, ವಾಕಿಂಗ್ ಮಾಡಬೇಕು ಅಂತಾರೆ ವೈದ್ಯರು.
ಜಿಮ್ಗೆ ಹೋಗುವವರು ಕೂಡ ಮಿತವಾಗಿ ವ್ಯಾಯಾಮ ಮಾಡಬೇಕು. ಅಲ್ಲದೇ, ದೇಹದಲ್ಲಿ ನೀರಿನ ಅಂಶ ಹೇಗಿದೆ ಎಂದು ತಿಳಿದು, ವ್ಯಾಯಾಮ ಮಾಡಬೇಕು. ಏಕೆಂದರೆ, ದೇಹದಲ್ಲಿ ನೀರಿನ ಅಂಶ ಕಡಿಮೆಾದಾಗಲೂ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಹಾಾಗಾಗಿ ಎಚ್ಚರಿಕೆಯಿಂದ ವ್ಯಾಯಾಮ ಮಾಡಬೇಕು ಅಂತಾರೆ ವೈದ್ಯರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




