ಉದ್ಯೋಗಿಗಳು ಕಂಪನಿಯಲ್ಲಿ ಕೆಲಸ ಮಾಡುವಾಗ ಕೆಲಸದ ಸಮಯದಲ್ಲಿ ಏರುಪೇರಾಗುತ್ತದೆ. ಕಂಪನಿಯ ಮಾಲೀಕರು ಉದ್ಯೋಗಿಗಳನ್ನು ಅದೇ ಸಂಬಳದಲ್ಲಿ ನಿಗದಿತ ಸಮಯಕ್ಕಿಂತ ಜಾಸ್ತಿಹೊತ್ತು ದುಡಿಸಿಕೊಳ್ಳುವುದನ್ನು ನೋಡಿದ್ದೇವೆ. ಇದರಿಂದಾಗಿ ಉದ್ಯೋಗಿಗಳು ಸರಿಯಾದ ಸಮಯಕ್ಕೆ ಮೆನೆಗೆ ಹೋಗಲು ಆಗುತ್ತಿಲ್ಲ.
ಕುಟುಂಬದ ಜೊತೆ ಸಮಯ ಕಳೆಯಲು ಆಗುತ್ತಿಲ್ಲ ಎಂದು ಕೆಲವೊಂದು ಉದ್ಯೋಗಿಗಳು ಆಗಾಗ ಅಳಲನ್ನು ತೋಡಿಕೊಳ್ಳುತಿರುತ್ತಾರೆ. ಆದರೆ ಇಲ್ಲೊಂದು ಕಂಪನಿ ಸರಿಯಾದ ಸಮಯಕ್ಕೆ ಉದ್ಯೋಗಿಗಳು ಕೆಲಸದಿಂದ ಮನೆಗೆ ತೆರಳಲಿ ಕುಟುಂಬದ ಜೊತೆ ಕಾಲ ಕಳೆಯಲಿ ಎನ್ನುವ ದೃಷ್ಠಿಯಿಂದ ಒಂದು ಹೊಸ ಮಾರ್ಗವನ್ನು ಕಂಡುಹಿಡಿದಿದ್ದಾರೆ.
ಅದೇನೆಂದರೆ ಉದ್ಯೋಗಿಗಳು ನಿಗದಿತ ಕೆಲಸದ ಸಮಯ ಮುಗಿಯುವ ಮುನ್ಸೂಚನೆ ಅವರು ಉಪಯೋಗಿಸುವ ಕಂಪ್ಯೂಟರ್ ಸಂದೇಶ ಕೊಡುತ್ತದೆ ನಿಮ್ಮ ಕೆಲಸದ ಅವಧಿ ಮುಗಿದಿದೆ. ಇನ್ನು ಹತ್ತು ನಿಮಿಷದಲ್ಲಿ ಸಿಸ್ಟಮ್ ಆಫ್ ಆಗಲಿದೆ. ನೀವಿನ್ನು ಮನೆಗೆ ತೆರಳಬಹುದು ಎಂದು ಸ್ಕ್ರೀನ್ ಮೇಲೆ ತೋರಿಸುತ್ತದೆ .
ಈ ರೀತಿಯ ವಿನೂತನವನ್ನು ಉದ್ಯೋಗಿಗಳ ಹಿತದೃಷ್ಠಿಯಿಂದ ಮಧ್ಯಪ್ರದೇಶದ ’’ಮೊಬೈಲ್ ಅಪ್ಲಿಕೆಷನ್ ಡೆವಲೆಪ್ ಮೆಂಟ್ ಕಂಪನಿಯೊಂದು ಕಾರ್ಯವೈಕರಿಯನ್ನು ಜಾರಿಗೆ ತಂದಿದೆ. ಈ ಬಗ್ಗೆ ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್ ಕಂಪನಿಯ ಸಿಇಒ, ಅಜೆಯ ಗೊಲನಿ ಮಾತನಾಡಿ ಉದ್ಯೋಗಿಗಳು ಹೆಚ್ಚು ಕೆಲಸ ಮಾಡುವುದರೊಂದಿಗೆ, ಸಮಯ ನಿರ್ವಹಣೆ ಮಾಡುವುದು ಬಹಳ ಮುಖ್ಯ. ಈ ಕಾರಣದಿಂದ, ಅವರ ಹಿತದೃಷ್ಟಿಯಿಂದ ಈ ಮಾರ್ಗವನ್ನು ಅನುಸರಿಸಿದ್ದೇವೆ ಎಂದು ಹೇಳಿದರು.