Hubli News: ಹುಬ್ಬಳ್ಳಿ: ಸಿಎಂ ಸೂಚನೆ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಡ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಯಾಗಲು ಸ್ವತಃ ಕಮಿಷನರ್ ಎನ್. ಶಶಿಕುಮಾರ್ ಫೀಲ್ಡ್ಗೆ ಇಳಿದಿದ್ದಾರೆ. ಡ್ರಗ್ ಮುಕ್ತ ಹುಬ್ಬಳ್ಳಿ – ಧಾರವಾಡ ಮಾಡಲು ಕಾರ್ಯಾರಂಭ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಹಳೆ ಸಿಆರ್ ಮೈದಾನದಲ್ಲಿ ಡ್ರಗ್ ಪೆಡ್ಲರ್ಗಳ ಪರೇಡ್ ನಡೆಸುವ ಮೂಲಕ, ಕಮಿಷನರೇಟ್ನ ಎಲ್ಲಾ ಠಾಣೆ ವ್ಯಾಪ್ತಿಯ ಡ್ರಗ್ ಪೆಡ್ಲರ್ಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಕಮಿಷನರ್ಗೆ ಡಿಸಿಪಿ ಬಿಎಸ್ ನಂದಗಾವಿ, ರವೀಶ್ ಸಾಥ್ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಕಮಿಷನರ್ ಸಿಎಂ ಹಾಗೂ ಗೃಹ ಸಚಿವರ ಸಭೆಯಲ್ಲಿ ಸರ್ಕಾರ, ಮಾದಕ ವಸ್ತುಗಳ ಬಗ್ಗೆ ಝಿರೋ ಟಾಲರನ್ಸ್ ಇರಬೇಕೆಂದು ಒತ್ತಿ ಹೇಳಿದ್ದಾರೆ. ಈ ಹಿನ್ನಲೆ ಅವಳಿ ನಗರದಲ್ಲಿ ಡ್ರಗ್ ಪರೇಡ್ ಮಾಡಲಾಗಿದೆ. ಕಿಡಿಗೇಡಿಗಳು, ಡ್ರಗ್ ಪೆಡ್ಲರ್ಗಳು ಯುವ ಜನರ ದಿಕ್ಕು ತಪ್ಪಿಸೋ ಕೆಲಸ ಮಾಡ್ತಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಹೋಮ್ ವರ್ಕ್ ಮಾಡಿ ಡ್ರಗ್ ಪೆಡ್ಲರ್ಗಳ ಪರೇಡ್ ಮಾಡಿದ್ದೇವೆ. ಕಳೆದ 10 ವರ್ಷದಲ್ಲಿ ದಾಖಲಾದ ಕೇಸ್ಗಳ ಆಧಾರದ ಮೇಲೆ ಪರೇಡ್ ಮಾಡಿದ್ದೇವೆ ಅಂತಾ ಕಮಿಷನರ್ ಹೇಳಿದ್ದು ಹೀಗೆ.
180ಕ್ಕೂ ಹೆಚ್ಚು ಜನ ಡ್ರಗ್ ಪೆಡ್ಲರ್ಗಳು ಹಾಜರಿದ್ರು ಕೆಲವರು ಹೊರಗಡೆ ಇದ್ದಾರೆ. ಹೊರ ಜಿಲ್ಲೆ, ಹೊರ ರಾಜ್ಯದಲ್ಲಿ ಇದಾರೆ. ಇದರ ಹಿಂದೆ ಯಾರಿದ್ದಾರೆ ಅನ್ನೋದು ತನಿಖೆ ಆಗಬೇಕು. ಗಾಂಜಾ, ಡ್ರಗ್ ಖರೀದಿಗೆ ಹಣ ಎಲ್ಲಿಂದ ಬರತ್ತೆ ಅನ್ನೋ ತನಿಖೆಗೆ ಸೂಚನೆ ನೀಡಲಾಗಿದೆ. ಶಿಕ್ಷಣ ಸಂಸ್ಥೆಗಳು ನಮಗೆ ಮಾಹಿತಿ ಕೊಡಲು ಮನವಿ ಮಾಡಿದ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್, ರೌಡಿ ಶೀಟರ್ ಲಿಸ್ಟ್ ಈಗಾಗಲೇ ಮಾಡಲಾಗಿದೆ.ಕೆಲವು ಕಿಡಿಗೇಡಿಗಳು, ಕ್ರಿಮಿಲ್ ಗಳಿಗೆ ಸಮಾಜ ಇಲ್ಲ. ರೌಡಿಗಳಲ್ಲಿ ದೊಡ್ಡವರು, ಸಣ್ಣವರು ಇಲ್ಲ. ಚಟುವಟಿಕೆ ಇದ್ರೆ ಅವರ ಮೇಲೆ ಕ್ರಮ ಖಂಡಿತ ಎಂದು ರೌಡಿ ಶೀಟರ್ಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.




