Friday, July 4, 2025

Latest Posts

ಹಾಸನ ಹೃದಯಗಳ ಸಾವಿಗೆ ವ್ಯಾಕ್ಸಿನ್ ಕಾರಣನಾ? – ಸಿದ್ದರಾಮಯ್ಯ ಅನುಮಾನ!

- Advertisement -

ಹಾಸನದ ಯುವ ಜನತೆಯ ಹೃದಯಾಘಾತ ಎಲ್ಲರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಹಾಸನಕ್ಕೆ ಅದೇನ್ ಆಗಿದ್ಯೋ ನಿಜಕ್ಕೂ ಗೊತ್ತಿಲ್ಲ. ಪ್ರತಿದಿನ ಕೇಳಿ ಬರ್ತಿರೋ ಕಹಿ ಸುದ್ದಿ ಕೇಳಿದ್ರೆ ರಾಜ್ಯದ ಜನತೆ ಬೆವರು ಇಳಿಯುವಂತೆ ಮಾಡಿದೆ. ಈ ಸಾಲು, ಸಾಲು ಹೃದಯಾಘಾತಗಳಿಗೆ ಕೋವಿಡ್ ಲಸಿಕೆಯು ಕಾರಣ ಅನ್ನೋದನ್ನ ಅಲ್ಲಗೆಳೆಯಲು ಆಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಇಂತಹದೊಂದು ಅನುಮಾನದ ಬಗ್ಗೆ ಟ್ವೀಟ್‌ ಮಾಡಿದ್ದು ಹೊಸ ಚರ್ಚೆಗೆ ಕಾರಣವಾಗಿದೆ.

ಸಿಎಂ ಸಿದ್ದರಾಮಯ್ಯ ಈ ಟ್ವೀಟ್ ಮಾಡಿದ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಹೃದಯಾಘಾತಕ್ಕೆ ವ್ಯಾಕ್ಸಿನ್ ಕಾರಣ ಇರಬಹುದು ಅನ್ನೋ ಸಿಎಂ ಸಿದ್ದರಾಮಯ್ಯ ವಾದವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ.

ಕೊರೊನಾ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆತುರಾತುರದಲ್ಲಿ ಕೊರೊನಾ ಲಸಿಕೆಗೆ ಅಧಿಕೃತ ಅನುಮೋದನೆ ಕೊಟ್ಟಿತ್ತು. ಜನರಿಗೆ ಹಂಚಿದ್ದು ಕೂಡ ಈ ಸಾವುಗಳಿಗೆ ಕಾರಣವಿರಬಹುದು ಎಂಬುದನ್ನು ಅಲ್ಲಗಳೆಯಲಾಗದು. ಇದಕ್ಕೆ ಕಾರಣ ವಿಶ್ವದ ಅನೇಕ ಅಧ್ಯಯನಗಳು ಇತ್ತೀಚೆಗೆ ಹೆಚ್ಚಾಗಿರುವ ಹೃದಯ ಸ್ತಂಭನಕ್ಕೆ ಕೊವಿಡ್ ಲಸಿಕೆ ಕಾರಣ ಎಂಬುದನ್ನು ಹೇಳಿವೆ ಅಂತಾ ಸಿಎಂ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಕೇಂದ್ರ ಆರೋಗ್ಯ ಇಲಾಖೆಯು ಹೃದಯಾಘಾತದ ಸಾವುಗಳಿಗೂ, ಕೋವಿಡ್ ವ್ಯಾಕ್ಸಿನಿಗೂ ಯಾವುದೇ ಸಂಬಂಧ ಇಲ್ಲ. ರಿಸ್ಕಿ ಲೈಫ್ ಸ್ಟೈಲೇ​ ಹಠಾತ್ ಸಾವುಗಳಿಗೆ ಕಾರಣ. ಕೋವಿಡ್ ವ್ಯಾಕ್ಸಿನ್​ ಸೇಫ್ ಮತ್ತು ಪರಿಣಾಮಕಾರಿಯಾಗಿದೆ. ಇಂತಹ ಸಾವುಗಳಿಗೆ ವ್ಯಾಕ್ಸಿನ್ ಕಾರಣ ಎಂಬುದು ಸುಳ್ಳು, ತಪ್ಪು ದಾರಿಗೆ ಎಳೆಯುವಂತದ್ದು. ಇದಕ್ಕೆ ವೈಜ್ಷಾನಿಕ ಆಧಾರಗಳಿಲ್ಲ ಅಂತಾ ಟ್ವೀಟ್ ಮೂಲಕವೇ ತಿರುಗೇಟು ಕೊಟ್ಟಿದೆ.

ದೇಶದಲ್ಲಿನ ಹಠಾತ್ ಸಾವುಗಳ ಬಗ್ಗೆ ಹಲವು ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಇಂಡಿಯನ್ ಮೆಡಿಕಲ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹಾಗೂ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಗಳ ಅಧ್ಯಯನದಲ್ಲಿ ದೃಢಪಟ್ಟಿದೆ. ಜೊತೆಗೆ ವಿವಿಧ ಸಂಶೋಧನೆಗಳು ಅಧ್ಯಯನಗಳು ಇದನ್ನೇ ಹೇಳಿವೆ. ಕಾರ್ಡಿಯಾಕ್ ಸಾವುಗಳಿಗೆ ಜೆನೆಟಿಕ್ಸ್, ಲೈಫ್ ಸ್ಟೈಲ್, ಆರೋಗ್ಯ ಸ್ಥಿತಿಯೇ ಕಾರಣ. ಕೋವಿಡ್ ನಿಂದ ಕೋಟ್ಯಂತರ ಜನರ ಜೀವ ಉಳಿದಿದೆ ಅಂತಾ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

- Advertisement -

Latest Posts

Don't Miss