Sandalwood: ಭೀಮ ಗಿರಿಜಾ ಖ್ಯಾತಿಯ ಪ್ರಿಯಾ ಸಂದರ್ಶನದಲ್ಲಿ ಮಾತನಾಡಿದ್ದು, ರಂಗಭೂಮಿಯಿಂದ ಸಿನಿಮಾ ಮತ್ತು ಸಿರಿಯಲ್‌ಗೆ ಬಂದಾಗ ಅವರ ಅನುಭವ ಹೇಗಿತ್ತು ಅಂತಾ ಹೇಳಿದ್ದಾರೆ.
ರಂಗಭೂಮಿಯಲ್ಲಿ ನಾವು ವೇದಿಕೆ ಮೇಲೆ ಮಾತನಾಡಿದ ಮಾತು ಹಾಲ್‌ನಲ್ಲಿ ಕುಳಿತ ಎಲ್ಲರಿಗೂ ಕೇಳಬೇಕಿತ್ತು. ಅದಕ್ಕಾಗಿ ಹೆಚ್ಚು ಎನರ್ಜಿ ಬೇಕಿತ್ತು. ಆದರೆ ಸಿರಿಯಲ್‌ನಲ್ಲಿ ಆ ಎನರ್ಜಿ ಅವಶ್ಯಕತೆ ಇರುವುದಿಲ್ಲ. ಎದುರಿಗಿರುವ ಕ್ಯಾಮೆರಾಗೆ ಅಭಿನಯ ಮತ್ತು ನಮಗೆ ಹಾಕಿರುವ ಮೈಕ್‌ಗೆ ನಮ್ಮ ಧ್ವನಿ ಕೇಳಿದ್ರೆ ಸಾಕಿತ್ತು. ಹಾಗಾಗಿ ಅಲ್ಲಿ ಸ್ವಲ್ಪ ಎನರ್ಜಿ ಕಡಿಮೆ ಮಾಡಿ, ಅಭಿನಯಿಸಬೇಕಿತ್ತು ಅಂತಾರೆ ಪ್ರಿಯಾ.
ಲಕ್ಷಣ ಸಿರಿಯಲ್‌ನಲ್ಲಿ ಅಭಿನಯಿಸುವಾಗ ನಿರ್ದೇಶಕರೇ ನನಗೆ, ನಿಮ್ಮ ಎನರ್ಜಿಯನ್ನು ಕಡಿಮೆ ಮಾಡಿ ಮಾತನಾಡಿ. ನಿಮ್ಮ ಪಾತ್ರಕ್ಕೆ ಆ ಎನರ್ಜಿ ಬೇಡ ಎಂದಿದ್ದರು. ಹಾಗಾಗಿ ನಾನು ಆ ವೇಳೆ ನಟಿಸುವಾಗ ಸ್ವಲ್ಪ ಎನರ್ಜಿ ಕಡಿಮೆ ಮಾಡಬೇಕಿತ್ತು. ಹೀಗೆ ರಂಗಭೂಮಿ ಮತ್ತು ಸಿನಿಮಾ, ಸಿರಿಯಲ್ ನಡುವೆ ಅಂತರವಿರುತ್ತದೆ ಅಂತಾ ಹೇಳಿದ್ದಾರೆ ಪ್ರಿಯಾ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

