Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು ಮಾಡುತ್ತಿರುವ ತಾಲ್ಲೂಕು ಆಡಳಿತ,
ಕೃಷ್ಣಾ ನದಿ ಒಳ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯು ಕೆಲವು ಮಾರ್ಗಗಳ ಸಂಚಾರಕ್ಕೆ ಬ್ಯಾರೆ ಗೇಡ್ ಹಾಕಿ ಬಂದ ಮಾಡಿದ್ದಾರೆ.
ಇನ್ನೂ ನದಿ ತೀರದ ಕೆಲವು ಭಾಗಗಳಲ್ಲಿ ಎನ್ ಡಿ ಆರ್ ಎಪ್ ತಂಡ ನಿಯೋಜಿಸಿ ಜಿಲ್ಲಾ ಆಡಳಿತ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಾ ಸರ್ಕಾರಕ್ಕೆ ಸೂಚನೆ ಸಲಹೆ ನೀಡುತ್ತಿದ್ದಾರೆ.
ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ನೀರಿನ ಮಟ್ಟ ಹೆಚ್ಚಾಗಿದ್ದು ಸಂಚಾರಕ್ಕೆ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು ಕೊಲ್ಲಾಪುರ ಪೋಲಿಸ್ ಇಲಾಖೆ ಸಿಬ್ಬಂದಿ ಹರಸಾಹಸ ಮಾಡಿ ವಾಹನಗಳನ್ನು ತೆರವುಗೊಳಿಸುತ್ತಿದ್ದಾರೆ.
ಇನ್ನೂ ಮಳೆ ಪ್ರಮಾಣ ಹೆಚ್ಚಾದರೆ ರಾಷ್ಟ್ರೀಯ ಹೆದ್ದಾರಿ ಬಂದ ಆಗುವ ಸಾಧ್ಯತೆ ಇದೇ ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಕೆಲವು ಭಾಗಗಳಲ್ಲಿ ಬಾರಿ ಮಳೆ ಯಿಂದ ಜನರು ಸೂರು ಕಳೆದುಕೊಂಡು ಸರ್ಕಾರಕ್ಕೆ ಪರಿಹಾರ ದಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ, ಇನ್ನೂ ಮಳೆ ಪ್ರಮಾಣ ಹೆಚ್ಚಾದರೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ನದಿ ತೀರದ ಗ್ರಾಮಗಳಿಗೆ ನೀರು ನುಗುವ ಸಾದ್ಯತೆ ಇದೇ ಎಂದು ಅಧಿಕಾರಿಗಳು ಸೋಚಿಸುತ್ತಿದ್ದಾರೆ.