- Advertisement -
Belagavi News: ಬೆಳಗಾವಿ: ಬೆಳಗಾವಿಯಲ್ಲಿ ಧಾರಾಕಾರವಾಗಿ ಮಳೆ ಬಂದಿದ್ದು, ಗ್ರಾಮದ ಕೆರೆ ಒಡೆದು ಜಮೀನುಗಳಿಗೆ ಕೆರೆ ನೀರು ನುಗ್ಗಿದೆ.
ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಹೊರವಲಯದಲ್ಲಿರುವ ಗ್ರಾಮದ ಕೆರೆ ಒಡೆದು ಅವಾಂತರ ಸೃಷ್ಟಿಸಿದ್ದು, 20 ಎಕರೆ ಜಮೀನಿಗೆ ನೀರು ನುಗ್ಗಿ ಕಷ್ಟಪಟ್ಟು ಬೆಳೆದಿದ್ದ ಭತ್ತ ಸಂಪೂರ್ಣ ನೀರು ಪಾಲಾಗಿದೆ. ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಇರುವ ಹಿನ್ನೆಲೆ, ಕೆರೆ ಸಂಪೂರ್ಣ ತುಂಬಿತ್ತು. ಕೆರೆ ಪೂರ್ಣ ತುಂಬಿದ ಹಿನ್ನೆಲೆಯಲ್ಲಿ ನೀರಿನ ಸೆಳೆತಕ್ಕೆ ಕೆರೆ ಒಡ್ಡು ಒಡೆದು ಜಮೀನಿಗೆ ನೀರು ನುಗ್ಗಿದೆ.
ನಿನ್ನೆ ಗೋಕಾಕ್ ಪೇಟೆಯಲ್ಲಿ ನೀರು ನುಗ್ಗಿ, ಅಂಗಡಿಯ ಸಾಮಾನುಗಳನ್ನು ಸ್ಥಳಾಂತರಿಸಲಾಗಿತ್ತು. ಅಲ್ಲದೇ, ಹಲವರು ಮನೆ ಬಿಟ್ಟು ಬೇರೆಡೆ ಸ್ಥಳಾಂತರಗೊಂಡಿದ್ದರು. ಘಟಪ್‌ರಭಾ ಒಳಹರಿವಿನ ಪ್ರಮಾಣ 73 ಸಾವಿರ ಕ್ಯೂಸೆಕ್ ತಲುಪಿದ ಹಿನ್ನೆಲೆ, ಈ ಅವಘಡ ಸಂಭವಿಸಿತ್ತು.
- Advertisement -