Friday, November 22, 2024

Latest Posts

ವಾಟ್ಸಾಪ್ ಮೂಲಕವೇ ಬುಕ್ ಮಾಡಬಹುದು ಆಟೋ, ಟ್ಯಾಕ್ಸಿ..?!

- Advertisement -

Technology News:

ಇನ್ನು ಗ್ರಾಹಕರು ಉಬರ್‌ ಆ್ಯಪ್‌ ಬದಲಾಗಿ ನೇರವಾಗಿ ವಾಟ್ಸ್​ಆ್ಯಪ್​​ ಮೂಲಕವೇ ಪ್ರಯಾಣಕ್ಕಾಗಿ ವಾಹನವನ್ನು ಬುಕ್‌ ಮಾಡಿಕೊಳ್ಳಬಹುದಾಗಿದೆ. ಪ್ರಖ್ಯಾತ ಆನ್‌ಲೈನ್ ಕ್ಯಾಬ್ ಬುಕ್ಕಿಂಗ್ ಸಂಸ್ಥೆ ಊಬರ್ ಮತ್ತು ವಾಟ್ಸ್ಆಪ್ ಒಡೆತನದ ಮೆಟಾ ಸಂಸ್ಥೆಗಳು ಸೇರಿಕೊಂಡು ಇಂತಹದೊಂದು ಫೀಚರ್ ಅನ್ನು ಲಾಂಚ್ ಮಾಡಿದೆ. ಸದ್ಯಕ್ಕೆ ದೆಹಲಿಯಲ್ಲಿ ಆರಂಭವಾಗುತ್ತಿರುವ ಈ ಸೇವೆ ಭಾರತದ ಇತರ ಪ್ರಮುಖ ನಗರಗಳಿಗೆ ಶೀಘ್ರದಲ್ಲೇ ವಿಸ್ತರಣೆಯಾಗಲಿದೆ. ವಾಟ್ಸ್ಆ್ಯಪ್ ಮೆಸೆಂಜರ್ ಸೇವೆಯು ಭಾರತದಲ್ಲಿ ಅರ್ಧ ಶತಕೋಟಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಬಹುತೇಕ ಜನರು ವಾಟ್ಸ್ಆ್ಯಪ್ ಅನ್ನು ಬಳಸುತ್ತಿದ್ದಾರೆ. ಹಾಗಾಗಿ ಉಬರ್ ಕೂಡ ಇದನ್ನು ಗಮನಿಸಿ ಆ್ಯಪ್ ಸಹಾಯವಿಲ್ಲದೆ ಬಳಕೆದಾರರಿಗೆ ಸುಲಭ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ವಾಟ್ಸ್ಆ್ಯಪ್ ಜೊತೆಗೆ ಕೈ ಜೋಡಿಸಿದೆ.

ಉಬರ್ ಆ್ಯಪ್ ಅವಶ್ಯಕತೆಯಿಲ್ಲದೆಯೇ, ವಾಟ್ಸ್​ಆ್ಯಪ್​​ ಮೂಲಕ ಚಾಟ್ ಇಂರ‍್ಫೇಸ್​ನಲ್ಲಿ ನೋಂದಾಯಿಸಿಕೊಳ್ಳಬಹುದು. ಜೊತೆಗೆ ರೈಡ್​ಗಳನ್ನು ಬುಕ್ ಮಾಡಬಹುದು ಮತ್ತು ಟ್ರಿಪ್ ರಸೀದಿಗಳನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಕಿಖ ಕೋಡ್ ಅನ್ನು ಸ್ಕ್ಯಾನ್ ಮಾಡುವುದು ಅಥವಾ ಉಬರ್ ವಾಟ್ಸ್​ಆ್ಯಪ್​​ ಚಾಟ್ ತೆರೆಯಲು ನೇರವಾಗಿ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಚಾಟ್‌ಬಾಟ್ ನಂತರ ಪಿಕಪ್ ಮತ್ತು ಡ್ರಾಪ್ ಆಫ್ ಸ್ಥಳಗಳನ್ನು ನೀಡಲು ಬಳಕೆದಾರರನ್ನು ಕೇಳುತ್ತದೆ. ಅವರು ಬುಕ್ ಮಾಡಲು ಬಯಸುವ ರೀತಿಯ ರೈಡ್ ಅನ್ನು ಆಯ್ಕೆ ಮಾಡುತ್ತದೆ.  ಹೀಗೆ  ಇನ್ನು  ಸುಲಭವಾಗಲಿದೆ  ಊಬರ್ ಬುಕ್ಕಿಂಗ್.

ವಿಮಾನಕ್ಕೆ ಡಿಕ್ಕಿಯಾಯಿತು ಹಕ್ಕಿ…! ಮುಂದೇನಾಯ್ತು ಗೊತ್ತಾ..?!

ವಾಟ್ಸ್ಆ್ಯಪ್ ಅನ್ನು ಸುಲಭವಾಗಿ ಹೀಗೆ ಮಾಡಿ ಡಿಲೀಟ್ ಮಾಡಿಬಿಡಿ..!

ಇದೀಗ ಭಾರತಕ್ಕೆ ಕಾಲಿಟ್ಟಿದೆ ಬಹುನಿರೀಕ್ಷಿತ ರಿಯಲ್ ಮಿ 9 4G ಸ್ಮಾರ್ಟ್ ಫೋನ್

- Advertisement -

Latest Posts

Don't Miss