Mandya Political News: ಮಂಡ್ಯ: ಮಂಡ್ಯದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಮಾತನಾಡಿದ್ದು, ನಾವು ಯಾವಾಗಲೂ ಶುಭ ಕಾರ್ಯ ಮಾಡ್ತೇವೆ. 2004, 2006ರಲ್ಲಿ ಮಂತ್ರಿಯಾದಾಗ ಅನೇಕ ಕಾರ್ಯಕ್ರಮ ಕೊಟ್ಟಿದ್ದೇವೆ.
ಆರೋಗ್ಯ ಇಲಾಖೆಯ ಸಚಿವನಾದ, ಮೆಡಿಕಲ್ ಕಾಲೇಜು ಕೊಟ್ಟೆವು. ಸಾರಿಗೆ ಮಂತ್ರಿಯಾದಾಗ ಡಿವಿಷನ್, ಡಿಪೋ ತಂದೆವು. ಕೃಷಿ ಮಂತ್ರಿಯಾಗಿ ಕೃಷಿ ವಿವಿ ಆಗ್ತಿದೆ. ಹೊಸ ಫ್ಯಾಕ್ಟರಿ ಆದ್ರೆ ಸಂಪೂರ್ಣ ಕಾರ್ಖಾನೆ ಸುಸ್ಥಿತಿಗೆ ಬರುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಕೆ ಅವರು ಮಾಡ್ತಾರೆ. ದುರಂತ ಅಂತ ಅಂದ್ರೆ ಸುಳ್ಳು ಸತ್ಯವನ್ನ ಮರೆಮಾಚುತ್ತೆ. ಕಾಂಗ್ರೆಸ್ ಬಂದಾಗ ಬರಗಾಲ ಅಂತ ಟೀಕೆ ಮಾಡಿದರು. ಜುಲೈ ನಲ್ಲಿ ಡ್ಯಾಂ ಪೂಜೆ ಮಾಡೋದು ರೇರ್. ಜುಲೈ ನಲ್ಲೆೇ ಕಾವೇರಿ ತುಂಬಿತುಳುಕುತ್ತಿದ್ದಾಳೆ. ದಿನ 10 ಟಿಎಂಸಿ ನೀರನ್ನು ತಮಿಳುನಾಡಿಗೆ ಹೋಗ್ತಿದೆ. ಸತ್ಯ ಒಂದಲ್ಲಾ ಒಂದು ದಿನ ಜನಕ್ಕೆ ಅರ್ಥವಾಗತ್ತೆ. ಸುಳ್ಳು ಹೇಳುವವರಿಗೆ ಜನರು ಮಾನ್ಯತೆ ಕೊಡಲ್ಲ. ಜಿಲ್ಲೆಯ ಜನರು ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಜನರಿಗೆ ಗೌರವ ಕೊಡ್ತೇವೆ. ಕಾವೇರಿ ಪೂಜೆ ಮಾಡಿರೋದು ಅತ್ಯಂತ ಸಂತೋಷ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಜಿಲ್ಲೆಯ ಜನರಿಗೆ ಸರ್ಕಾರದಿಂದ ಕಾರ್ಯಕ್ರಮ ಕೊಡ್ತೇವೆ. ಕೆಲವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ನಾವು ರೈತರ ಕೆಲಸ ಮಾಡ್ತೇವೆ. ಸರ್ಕಾರ ಬಂದ ತಕ್ಷಣವೇ ಕಾರ್ಖಾನೆ ಪ್ರಾರಂಭವಾಗಿದೆ. ಸರ್ಕಾರ 50 ಕೋಟಿ ಕೊಟ್ಟು ಕಾರ್ಖಾನೆ ನಡೆಯುತ್ತಿದೆ. ಎರಡನೇ ವರ್ಷ ಕಾರ್ಖಾನೆ ಪ್ರಾರಂಭವಾಗಿದೆ ಎಂದು ಸಚಿವರು ಹೇಳಿದ್ದಾರೆ.
ನಾವು ಜಿಲ್ಲೆಯ ಜನರ ಪರ ನಿಲ್ಲಬೇಕು ಅಷ್ಟೆ ಅದೇ ಖುಷಿ. ಕಬ್ಬಿನ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಮೇಲಿದೆ. ರೈತರಿಗೆ ಅನುಕೂಲ ಮಾಡುಲು ನಾವು ಸ್ಪಂದಿಸುತ್ತೇವೆ. ಇವತ್ತಿಂದಲೇ ಕಾರ್ಖಾನೆ ಕಬ್ಬು ಅರೆಯುವಿಕೆ ಕಾರ್ಯ ಆರಂಭವಾಗಿದೆ. ಕಬ್ಬು ಕೊರತೆ ಇದೆ ಸರಿಪಡಿಸುವ ಕೆಲಸ ಆಗುತ್ತೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.