Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಯಲ್ಲಮ್ಮನ ಗುಡ್ಡ ದಕ್ಷಿಣ ಭಾರತದಲ್ಲಿ ಹೆಚ್ಚಿನ ಜನ ಬರುವ ಕ್ಷೇತ್ರ. ಪ್ರತಿ ವರ್ಷ ಸುಮಾರು 1.25 ಕೋಟಿ ಯಾತ್ರಿಗಳು ಬರ್ತಾರೆ. ಹೀಗಾಗಿ ಮೊನ್ನೆ ಮುಖ್ಯಮಂತ್ರಿ ಕರೆದುಕೊಂಡು ಬಂದು ಶಂಕು ಸ್ಥಾಪನೆ ಮಾಡಿದ್ವಿ. ಯಾತ್ರಿಗಳಿಗಾಗಿ ಸುಮಾರು 25 ಕೋಟಿಯ ಕಟ್ಟಡ ಉದ್ಘಾಟನೆ ಮಾಡಿದ್ವಿ. ಕೇಂದ್ರ ಪ್ರವಾಸೋದ್ಯಮ ಮಂತ್ರಿಗಳು ನಮ್ಮ ಜೊತೆ ಬೆಂಗಳೂರಿನಲ್ಲಿ ಸಭೆ ಮಾಡಿದ್ರು. ಕೇಂದ್ರ ಸರ್ಕಾರದವರು ಯಲ್ಲಮ್ಮನ ಗುಡ್ಡ ಅಭಿವೃದ್ಧಿಗೆ 100 ಕೋಟಿ ಅನುದಾನ ಕೊಟ್ಟಿದ್ದಾರೆ.
ನಮ್ಮ ಬೇಡಿಕೆಯ ಪೂರ್ಣ ಭಾಗ ಇಲ್ಲದಿದ್ದರು ಗಣನೆಗೆ ತೆಗೆದುಕೊಳ್ಳುಬಂತಹ ಅನುದಾನ. ಮಂಜೂರಾದ ಮೂಲಕ ಯಲ್ಲಮ್ಮನ ಗುಡ್ಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದೇವೆ. ಸಿಎಂ ಅಪ್ರುವಲ್ ಮಾಡಿದ್ದ ಎಲ್ಲದಕ್ಕೂ ಯಶಸ್ಸು ಸಿಕ್ಕ ಹಾಗಾಯ್ತ. ಬೆಳಗಾವಿ ಡಿಸಿ ಅವರಿಗೆ ಆಕ್ಷನ್ ಪ್ಲ್ಯಾನ್ ಮಾಡಲು ಹೇಳಿದ್ದೇನೆ. ಯಲ್ಲಮ್ಮನ ಗುಡ್ಡಕ್ಕೆ ಕರೆದೋಯ್ಯುವ ಎತ್ತುಗಳಿಗೂ ಆಹಾರ ನೀಡುವ ವ್ಯವಸ್ಥೆ ಮಾಡುವ ನಿರ್ಣಯ ಮಾಡಿದ್ದೇವೆ. ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ ನಮ್ಮ ಅಭಿನಂದನೆ ತಿಳಿಸ್ತೇನೆ ಎಂದು ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ನನಗಿಂತ ಮೂಲ ಕಾಂಗ್ರೇಸ್ ನವರು ಬೇರೆ ಯಾರಾದ್ರೂ ಇದ್ದಾರಾ? ಯತ್ನಾಳ್ ಸಿಎಂ ಪರ ಮಾತಾಡಿದ್ದಕ್ಕೆ ಬಿಜೆಪಿ ಅವರು ಅವರನ್ನ ವೀಕ್ ಮಾಡಲು ಹೊರಟಿರಬೇಕು. ಸಚಿವ ಸಂಪುಟ ವಿಸ್ತರಣೆ ನಿರ್ಣಯ ಹೈಕಮಾಂಡ್ ಮಾಡಿದ್ರೆ, ಹಿರಿಯರು ತಲೆ ಬಾಗಬೇಕು ಎಂದು ಸಚಿವರು ಹೇಳಿದ್ದಾರೆ.
ಹಾಸನ ಸ್ವಾಭಿಮಾನಿ ಸಮಾವೇಶಕ್ಕೆ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಯಾರೋ ಸೃಷ್ಟಿ ಮಾಡ್ತಾ ಇದ್ದಾರೆ. ಅನಾಮದೇಯ ಪತ್ರದ ಒಕ್ಕಲಿಕೆ ನಾವು ಒಪ್ಪೋದಿಲ್ಲಾ. ಕಾಂಗ್ರೇಸ್ ಪಕ್ಷ ಮುಂದಾಳತ್ವವಹಿಸಿಕೊಂಡು ಯಶಸ್ವಿ ಮಾಡ್ತೇವೆ. ವಕ್ಫ, ಸಂವಿಧಾನ ತಿರುಗುಸುವ ಪ್ರಚಾರ ಮಾಡ್ತಾ ಇದ್ದಾರೆ.
ದೇಶದಲ್ಲಿ ಗೊಂದಲ ಸೃಷ್ಟಿಸುವಂತವರಿಗೆ ಉತ್ತರ ನೀಡೋಕೆ ಮಾಡ್ತಾ ಇದ್ದೇವೆ. ಮೂಲ ಕಾಂಗ್ರೇಸ್ಸಿಗರಾಗಿ ನಾವೇ ಚರ್ಚೆ ಮಾಡಿಲ್ಲ ಅಂದ್ರೆ ಯಾರು ಮಾಡೋರು. ನಮ್ಮ ನಾಯಕರನ್ನ ತೇಜೋವದೆ ಮಾಡುವ ಪ್ರಯತ್ನ ಮಾಡಿದ್ರೆ ನಾವು ಒಗ್ಗಟ್ಟಾಗಿ ಎದುರಿಸುತ್ತೇವೆ. ನಮ್ಮ ಸರ್ಕಾರ ಅಭದ್ರಗೊಳಿಸುವ ಕೆಲಸ ಮಾಡಿದ್ರೆ ಒಗ್ಗಟ್ಟಾಗಿ ಎದುರಿಸ್ತೇವೆ. ಬೈ ಎಲೆಕ್ಷನ್ ಗೆದ್ದಿದ್ದೇವೆ, ಬಿಜೆಪಿ ಅವರಿಗೆ ಕಪಾಳ ಮೋಕ್ಷ ಮಾಡಿದ್ದಂತಾಗಿದೆ ಎಂದು ಬಿಜೆಪಿ ವಿರುದ್ಧ ಸಚಿವರು ವ್ಯಂಗ್ಯವಾಡಿದ್ದಾರೆ.
ಯತ್ನಾಳ್ ಮುಖ್ಯಮಂತ್ರಿ ಕಾಂಗ್ರೇಸ್ ಪರ ಮಾತನಾಡೊ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು,
ಯತ್ನಾಳ ಎಲ್ಲರ ಮೇಲೂ ಟೀಕೆ ಮಾಡ್ತಾರೆ. ಇಷ್ಟು ದಿನ ಸಿಎಂರ ಮೇಲೆ ಸುಳ್ಳು ಪ್ರಚಾರ ಮಾಡಿ ವೀಕ್ ಮಾಡಲು ಹೊರಟ್ಟಿದ್ರು, ಈಗ ಯತ್ನಾಳ್ ಅವರನ್ನ ವೀಕ್ ಮಾಡಲು ಹೊರಟ್ಟಿದ್ದಾರೆ. ಯತ್ನಾಳ್ ನಮ್ಮ ಭಿನ್ನಾಭಿಪ್ರಾಯ ಇರಬಹುದು. ಬಿಜೆಪಿ ಅವರದ್ದು ಸಣ್ಣ ತನದ ಮಾತುಗಳು ಎಂದು ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ಅನುಮತಿ ವಿಚಾರದ ಬಗ್ಗೆ ಮಾತನಾಡಿರುವ ಸಚಿವರು, ದೊಡ್ಡ ತಪ್ಪು ನಿರ್ಣಯ ಆದ ಸಂದರ್ಭದಲ್ಲಿ ವ್ಯಯಕ್ತಿಕವಾಗಿ ಅಬ್ರಹಾಂ ದೂರು ನೀಡಿದ್ರು. ಅದರ ಹಿನ್ನೆ ರಾಜ್ಯಪಾಲರು ಅನಮತಿ ಕೊಡೋದನ್ನ ನಿರಾಕರಣೆ ಮಾಡಿದ್ದರು. ಕೊಡಬಾರದು ಅಂದಿದ್ದು ಸರಿಯಾದ ನಿರ್ಣಯ ಅಲ್ಲಾ.
ಅದನ್ನು ಪುನರ್ ಪರಿಶೀಲಿಸಲು ಸಚಿವ ಸಂಪುಟದಿಂದ ನಮ್ಮ ನಿರ್ಣಯವನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ.
ಇದರಲ್ಲಿ ರಿವೇಂಜ್ ಪೊಲಿಟಿಕ್ಸ್ ಏನಿದೆ? ಇದು ನಾವು ನೀಡಿದ ದೂರು ಅಲ್ಲಾ. ಅಬ್ರಹಾಂ ನಮ್ಮ ಮುಖ್ಯಮಂತ್ರಿ ಅವರ ಮುಖ್ಯಮಂತ್ರಿ ಮೇಲು ದೂರು ಕೊಟ್ಟಿದ್ದರು. ರಾಜ್ಯಪಾಲರು ಅವಾಗಲೇ ನಿರ್ಣಯ ಕೈಗೊಂಡಿಲ್ಲ, ಹೀಗಾಗಿ ನಾವು ಮರು ಪರಿಶೀಲನೆ ಮಾಡೋಕೆ ಹೇಳಿದ್ದೇವೆ. ಸಿಡಬ್ಲ್ಯೂಸಿನಲ್ಲಿ ಚರ್ಚೆ ಆಗಿರಬಹುದು. ಪಕ್ಷ ಸಂಘಟನೆ ಬಗ್ಗೆ ನಡೆದ ನಿರ್ಣಯಗಳನ್ನು ಜಾರಿ ಮಾಡ್ತೇವೆ ಎಂದು ಸಚಿವರು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿರುವ ಸಚಿವರು, ಪಕ್ಷ ಕೈಗೊಂಡ ನಿರ್ಣಾಯಕ್ಕೆ ಹಿರಿಯರು, ಕಿರಿಯ ಸಚಿವರು ಒಪ್ಪುತ್ತಾರೆ ಎಂದರು. ಇನ್ನು ಸಿಎಂ ಬದಲಾವಣೆ ಬಗ್ಗೆ ಬಿ ಆರ್ ಪಾಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರು ಪ್ರಭುದ್ದ ರಾಜಕಾರಣಿ, ಮುಖ್ಯಮಂತ್ರಿ ಸಲಹೆಗಾರರು. ಅವರನ್ನೇ ಕೇಳಬೇಕು ಅವರ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲಾ. ಆ ಮಾತನ್ನು ನಾನು ಒಪ್ಪೋದಿಲ್ಲ ಸಾರ್ವಜನಿಕವಾಗಿ ಚರ್ಚೆ ಮಾಡಲ್ಲ. ಎಚ್ ಕೆ ಪಾಟೀಲ್ ಸಿಎಂ ಆಕಾಂಕ್ಷಿ ಎಂದ ಪ್ರಶ್ನೆಗೆ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಅಭಿನಂದನೆ ಎಂದು ಸಚಿವರು ಹೇಳಿದ್ದಾರೆ.