Friday, December 6, 2024

Latest Posts

ಉಣಕಲ ಶ್ರೀ ಚನ್ನಬಸವೇಶ್ವರ ಜಲಸಾಗರ ನಾಮಕರಣಕ್ಕೆ ಪಾಲಿಕೆಯಲ್ಲಿ ಠರಾವು ಪಾಸ್ : ಶಂಕರಣ್ಣ ಗೆಲವು

- Advertisement -

Hubli News: ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರಸಿದ್ಧಿ ಉಣಕಲ್ ಕೆರೆ ಒಂದು ಇತಿಹಾಸ ಹೊಂದಿದೆ. ಈ ಕೆರೆಗೆ ಶ್ರೀ ಚನ್ನಬಸವೇಶ್ವರ ಜಲಸಾಗರ ಎಂದು ಹೆಸರು ಇಡಲು ಉತ್ತರ ಕರ್ನಾಟಕ ಜನಶಕ್ತಿ ಸೇನಾ ಸಂಸ್ಥಾಪಕ ಎಸ್ ಎಸ್ ಶಂಕರಣ್ಣ ನಿರಂತರ ಹೋರಾಟ ಮಾಡಿದ್ದರು, ಮಹಾನಗರ ಪಾಲಿಕೆ ಇಂದು ಸಾಮಾನ್ಯ ಸಭೆಯಲ್ಲಿ ಠರಾವ್‌ ಪಾಸ್ ಮಾಡಿದ್ದು, ಯುಜೆಎಸ್ ಹೋರಾಟಕ್ಕೆ ಇದೀಗ ಜಯ ಸಿಕ್ಕಿದೆ.

ಉಣಕಲ್ ಕೆರೆ ಅದರದೇಯಾದ ಇತಿಹಾಸವನ್ನು ಹೊಂದಿದೆ. ಈ ಉಣಕಲ್ ಕೆರೆಗೆ ಶ್ರೀ ಚನ್ನಬಸವೇಶ್ವರ ಜಲಸಾಗರ ಎಂದು ನಾಮಕರಣ ಮಾಡಲು, ಉತ್ತರ ಕರ್ನಾಟಕ ಜನಶಕ್ತಿ ಸೇನಾ ಸಂಸ್ಥಾಪಕ ಎಸ್‌.ಎಸ್ ಶಂಕರಣ್ಣ ಅವರು, ಉಣಕಲ್ ಕೆರೆ ಮುಂದೆ ನಾಮ ಪಲಕದ ಬೋರ್ಡ್ ಹಾಕಿ ಹೋರಾಟ ಮಾಡ್ತಾ ಬಂದಿದ್ದಾರೆ.

ಅಷ್ಟೇ ಅಲ್ಲೆ ಅದೆಷ್ಟೋ ಮಾಧ್ಯಮಗೋಷ್ಟಿ ಮಾಡುವುದರ ಮೂಲಕ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದಿದ್ದರು. ಈ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಮಾನ ಸಭೆಯಲ್ಲಿ ಈ ವಿಷಯ ಪ್ರಸ್ತಾಪಕ್ಕೆ ಬಂದಾಗ ಮೇಯರ್ ರಾಮಣ್ಣ ಬಡಿಗೇರ ಅವರು, ಎಲ್ಲ ಪಾಲಿಕೆ ಸದಸ್ಯರ ಮುಂದೆ ಪ್ರಸ್ತಾಪಿಸಿದಾಗ ಎಲ್ಲರೂ ಒಪ್ಪಿಗರ ಸೂಚಿಸಿದ್ದು, ಈಗ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಉಣಕಲ್ ಕೆರೆಗೆ ಶ್ರೀ ಚನ್ನಬಸವೇಶ್ವರ ಜಲಸಾಗರ ಎಂದು ನಾಮಕರಣ ಮಾಡಿ ಠರಾವ್ ಪಾಸ್ ಮಾಡಿದ್ದಾರೆ.

- Advertisement -

Latest Posts

Don't Miss