ಮನೆಯಲ್ಲಿ ಚಪ್ಪಲಿ ಯಾಕೆ ಧರಿಸಬಾರದು, ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವುದರಿಂದ ಏನಾಗುತ್ತದೆ ಅನ್ನೋದರ ಬಗ್ಗೆ ತಿಳಿಸಿಕೊಡಲಿದ್ದೇವೆ.

ಈಗಂತೂ ಮನೆಯಲ್ಲಿ ಚಪ್ಪಲಿ ಹಾಕೊಂಡು ತಿರುಗಾಡೋದು ಫ್ಯಾಷನ್ ಆಗಿಬಿಟ್ಟಿದೆ. ಕೆಲ ಹಾಸ್ಟೇಲ್, ಪಿಜಿಗಳಲ್ಲಿ ಹೆಣ್ಣು ಮಕ್ಕಳು ರೂಮ್ ಒಳಗೆ ಹಾಕೊಂಡು ತಿರುಗೋಕ್ಕಂತಾನೇ ವೆರೈಟಿ ವೆರೈಟಿ ಚಪ್ಪಲಿ ಕೊಂಡುಕೊಳ್ತಾರೆ. ಅದರಲ್ಲೂ ರೂಮೆಟ್ಸ್ ಜೊತೆ ಕಾಂಪಿಟೇಶನ್ ಮಾಡ್ತಾರೆ.
ಕೆಲವರು ಸ್ವಚ್ಛತೆಯ ದೃಷ್ಟಿಯಿಂದ ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು ಎನ್ನುತ್ತಾರೆ. ಆದ್ರೆ ಸ್ವಚ್ಛತೆಯಷ್ಟೇ ಅಲ್ಲದೇ, ಚಪ್ಪಲಿ ಹಾಕಿ ಮನೆಯಲ್ಲಿ ಓಡಾಡುವುದರಿಂದ ಮನೆಗೇ ದರಿದ್ರ ಉಂಟಾಗುತ್ತದೆ ಎನ್ನಲಾಗಿದೆ.
ಹೊರಗೆ ಬಳಸುವ ಚಪ್ಪಲಿಯನ್ನ ಮನೆಯಲ್ಲಿ ಬಳುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಕಡಿಮೆಯಾಗಿ, ಹೊರಗಿನ ನಕಾರಾತ್ಮಕ ಶಕ್ತಿಗಳ ಪ್ರಭಾವ ಜಾಸ್ತಿಯಾಗುತ್ತದೆ. ಆದ್ದರಿಂದ ಮನೆಯ ಹೊರಗೆ ಚಪ್ಪಲಿ ಬಿಟ್ಟು, ಕೈ ಕಾಲು ತೊಳೆದು ಒಳ ಬರಬೇಕು.
ನಾವು ಚಪ್ಪಲಿ ಹಾಕಿಕೊಂಡು ದೇವರ ಕೋಣೆಗೆ ಹೋಗುವುದಿಲ್ಲ, ಬರೀ ಮನೆಯಲ್ಲಷ್ಟೇ ಒಡಾಡುತ್ತೇವೆ ಅನ್ನೋದು ಕೆಲವರ ಮಾತು. ಆದ್ರೆ ಹಾಗೆ ಮಾಡುವುದರಿಂದ ಲಕ್ಷ್ಮೀದೇವಿಯ ಕೃಪೆ ಸಿಗದೆ, ಜೀವನದಲ್ಲಿ ಸಂಕಷ್ಟಗಳು ಉಂಟಾಗುತ್ತದೆ.
ಅಲ್ಲದೇ ಅಡುಗೆ ಕೋಣೆಯಲ್ಲಂತೂ ಚಪ್ಪಲಿ ಧರಿಸಿ ಓಡಾಡಲೇಬಾರದು. ಅಲ್ಲಿ ಅನ್ನಪೂರ್ಣೆ ನೆಲೆಸಿರುವುದರಿಂದ ಚಪ್ಪಲಿ ಧರಿಸಿ ಓಡಾಡುವುದರಿಂದ ಅನ್ನಪೂರ್ಣೆಗೆ ಅವಮಾನಿಸಿದಂತಾಗುತ್ತದೆ. ಇದರಿಂದ ತುತ್ತು ಅನ್ನಕ್ಕೂ ಕಷ್ಟಪಡುವ ಸಂದರ್ಭ ಬರುತ್ತದೆ.
ಇನ್ನು ಪಿಜಿ, ಹಾಸ್ಟೇಲ್‌ಗಳಲ್ಲಿ ಚಿಕ್ಕ ಚಿಕ್ಕ ವಸ್ತುಗಳು ಕೂಡ ಕಳ್ಳತನವಾಗೋದು ಕಾಮನ್ ಆಗಿರತ್ತೆ. ಅದಕ್ಕೆ ಅಲ್ಲಿರುವ ನಕಾರಾತ್ಮಕ ಶಕ್ತಿಯೇ ಕಾರಣ ಎನ್ನಲಾಗಿದೆ. ಯಾಕಂದ್ರೆ ಯಾವ ಮನೆಯಲ್ಲಿ ಚಪ್ಪಲಿ ಹಾಕೊಂಡು ಓಡಾಡ್ತಾರೋ ಅಂಥ ಮನೆಯಲ್ಲಿ ಹೆಚ್ಚು ಕಳ್ಳತನವಾಗುತ್ತದೆ. ಕೆಲ ಮನೆಗಳಲ್ಲೂ ಕೂಡ ರಕ್ತ ಸಂಬಂಧಿಕರೇ ಕಳುವು ಮಾಡುವ ಮನಸ್ಥಿತಿಯುಳ್ಳವರಾಗಿರ್ತಾರೆ. ಅದಕ್ಕೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯೇ ಕಾರಣವಾಗಿರುತ್ತದೆ. ಅಂಥ ನಕಾರಾತ್ಮಕ ಶಕ್ತಿ ಚಪ್ಪಲಿ ಧರಿಸಿ ಮನೆಯಲ್ಲಿ ಓಡಾಡುವುದರಿಂದ ಮನೆಯ ಒಳಗೆ ಬರುತ್ತದೆ.
ಅಲ್ಲದೇ ಚಪ್ಪಲಿ ಧರಿಸಿ ಮನೆಯಲ್ಲಿ ಓಡಾಡುವುದರಿಂದ ಆರೋಗ್ಯ ಹಾಳಾಗುತ್ತದೆ. ಮನೆಯಲ್ಲಿನ ಆಹಾರ ಕೆಡಲು ಆರಂಭಿಸುತ್ತದೆ. ಅಂಥ ಮನೆಯಲ್ಲೇ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಅಲ್ಲದೇ ಅಂಥ ಮನೆ ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.




