Web News: ಆಧ್ಯಾತ್ಮದ ಬಗ್ಗೆ ಹೆಚ್ಚು ಆಸಕ್ತಿ ಇರಿಸಿರುವ ನಿಶಾ ಯೋಗೇಶ್ವರ್, ಮನುಷ್ಯರ ಜತೆಗಿನ ಸಂಬಂಧ, ಪ್ರೀತಿ, ಕಾಳಜಿಯ ಮೇಲೆ ನಂಬಿಕೆ ಕಳೆದುಕ“ಂಡಿರುವಂತೆ ಕಾಣುತ್ತಿದ್ದಾರೆ. ಅವರು ಜೀವನದಲ್ಲಿ ಎಷ್ಟು ಮತ್ತು ಎಂಥೆಂಥ ಕಷ್ಟ ಅನುಭವಿಸಿದ್ದಾರೆಂದು, ತಮ್ಮವರು ಎನ್ನಿಸಿಕ“ಂಡವರೇ ನಿಶಾ ಅವರಿ ಯಾವ ರೀತಿ ಸಮಸ್ಯೆ ಮಾಡಿದ್ದಾರೆಂದು ಅವರು ಹಲವು ಬಾರಿ ಹೇಳಿದ್ದಾರೆ. ಅದೇ ರೀತಿ, ನಿಶಾ ಯೋಗೇಶ್ವರ್, ದೇವರ ಜತೆ ಬಾಂಧವ್ಯ ಇರಿಸಿದರೆ, ನಮಗೆಂದೂ ಮೋಸವಾಗುವುದಿಲ್ಲ ಎಂದಿದ್ದಾರೆ.
ಪ್ರೀತಿ, ವಿಶ್ವಾಸ, ಸಂಬಂಧ, ಭಾಂಧವ್ಯದ ಬಗ್ಗೆ ಕೇಳಿದಾಗ, ನಿಶಾ ಹೇಳಿದ್ದು, ಎಲ್ಲವನ್ನೂ ಆ ದೇವರ ಜತೆ ಇರಿಸಿಕ“ಳ್ಳಿ. ಅಲ್ಲೆಂದೂ ಮೋಸವಾಗುವುದಿಲ್ಲವೆಂದು. ಅಲ್ಲದೇ ನಮಗೆ ಲೋನ್ಲಿನೆಸ್ ಯಾವಾಗ ಬರುತ್ತದೆ ಎಂದರೆ, ನಿಮ್ಮ ಜತೆ ಯಾರೂ ಇಲ್ಲವೆಂದಲ್ಲ. ನೀವು ಯಾರ ಜತೆಯೂ ಇಲ್ಲವೆಂದು. ಹಾಗಂತ ಎಲ್ಲರ ಜತೆಯೂ ಸೇರುವುದಲ್ಲ. ಬದಲಾಗಿ ನಿಮ್ಮ ಖುಷಿಯನ್ನು ತಮ್ಮ ಖುಷಿ ಎಂದು ಭಾವಿಸುವವರು. ನಿಮ್ಮ ಕೆಲಸಕ್ಕೆ ಬೆಂಬಲಿಸುವವರು. ಇಂಥವರ ಜತೆ ಸೇರಿ.
ಅದರಲ್ಲೂ ನೀವು 1 ಗುರಿ ಇರಿಸಿಕ“ಂಡರೆ, ನಿಮಗೆ ಏಕಾಂಗಿ ಎಂದೆನ್ನಿಸುವುದಿಲ್ಲ ಅಂತಾರೆ ನಿಶಾ. ಇನ್ನು ನಿಶಾ ಅವರ ಗುರಿ ಏನೆಂದರೆ, ರಾಜಕೀಯ ಅನ್ನೋದು ನನ್ನ ರಕ್ತದಲ್ಲೇ ಇದೆ. ಆದರೆ ರಾಜಕಾರಣದಲ್ಲಿ ನನಗೆ ಅವಕಾಶ ಸಿಗತ್ತೋ, ಇಲ್ಲವೋ ಗ“ತ್ತಿಲ್ಲ. ಅದು ಭವಿಷ್ಯಕ್ಕೆ ಬಿಟ್ಟಿದ್ದು. ಆದರೆ ನನಗೆ ಯಾವ ರೀತಿ ಅವಕಾಶ ಸಿಕ್ಕರೂ, ಅದನ್ನು ನಾವು ಚೆನ್ನಾಗಿ ನಿಭಾಯಿಸಬಲ್ಲೆ. ಸಮಾಜಕ್ಕೆ ಸಹಾಯಕವಾಗುವ ಕೆಲಸ ಮಾಡುವ ಆಸೆ ಇದೆ ಎಂದು ನಿಶಾ ಹೇಳಿದ್ದಾರೆ.




