Web Story: ಭಾರತದಲ್ಲಿ ಸಿಗುವ ರುಚಿಕರವಾದ, ಖಾರ ತಿನಿಸುಗಳಲ್ಲಿ ಸಮೋಸಾ ಕೂಡ 1. ಹಸಿರು ಚಟ್ನಿ ಅಥವಾ ಸಾಸ್ ಜತೆ ಸೇವಿಸುವ ಸಮೋಸಾ ಹಲವರ ನೆಚ್ಚಿನ ತಿನಿಸಾಗಿದೆ. ಪಾರ್ಟಿ, ಫಂಕ್ಷನ್‌ಗಳಲ್ಲಿ ಹೆಚ್ಚಾಗಿ ಸೇವಿಸುವ ಸ್ಪೆಶಲ್ ಖಾರ ತಿಂಡಿ ಅಂದ್ರೆ ಅದು ಸಮೋಸಾ. ಇಂಥ ಸಮೋಸಾ ನಮ್ಮ ದೇಶದ ತಿನಿಸು ಅಲ್ಲವೇ ಅಲ್ಲ. ಆದರೆ ಸಮೋಸಾ ಇದೀಗ ನಮ್ಮ ದೇಶದ ತಿನಿಸಾಗಿ ಮಾರ್ಪಟ್ಟಿದೆ. ಹಾಗಾದ್ರೆ ಸಮೋಸಾ ಯಾವ ದೇಶದ ತಿನಿಸಾಗಿತ್ತು ಅಂತಾ ತಿಳಿಯೋಣ ಬನ್ನಿ..
ಆಲೂಗಡ್ಡೆ, ಈರುಳ್ಳಿ, ಹಸಿಮೆಣಸು, ಮೈದಾ, ಎಣ್ಣೆ ಸೇರಿ ಮಸಾಲೆಗಳನ್ನು ಸೇರಿಸಿ ತಯಾರಿಸುವ ಸಮೋಸಾವನ್ನು ಮದ್ಯ ಪ್ರಾಂತ್ಯದ ಜನ ಪರಿಚಯಿಸಿದ್ದು. ಆದರೆ ಆ ಸಮೋಸಾ ಸಿಹಿಯಾಗಿತ್ತು. ಮತ್ತು ಅದರ ಹೆಸರು ಸಂಬೋಸಾಗ್ ಆಗಿತ್ತು.
ಈ ಸಂಬೋಸಾಗ್‌ನ್ನು ಮೈದಾ, ಸಕ್ಕರೆ, ಜೇನು, ಖರ್ಜೂರ, ಬಾದಾಮಿ ಎಲ್ಲವನ್ನೂ ಹಾಕಿ ತುಪ್ಪದಲ್ಲಿ ಕರಿಯಲಾಗುತ್ತಿತ್ತು. ಈಜಿಪ್ಟ್‌ನಲ್ಲೂ ಇದೂ ಪ್ರಸಿದ್ಧ ಸಿಹಿ ಪದಾರ್ಥವಾಗಿತ್ತು. ಏಕೆ ಹೀಗೆ ಹೇಳಲಾಗುತ್ತೆ ಅಂದ್ರೆ, ಈಜಿಪ್ಟ್ ಪಿರಾಮಿಡ್ ಶೇಪ್ ರೀತಿ ಈ ಸಿಹಿ ತಿಂಡಿ ಇತ್ತು. ಅಲ್ಲದೇ ಪರ್ಷಿಯನ್ ಭಾಷೆಯಲ್ಲಿ ಪಿರಾಮಿಡ್‌ಗಳನ್ನು ಸಮ್ಸಾ ಅಂತಾ ಹೇಳಲಾಗುತ್ತದೆ. ಹಾಗಾಗಿ ಇದು ಈಜಿಪ್ಟಿಯನ್ನರ ತಿನಿಸು ಅಂತಲೂ ಹೇಳಲಾಗುತ್ತದೆ.
ಅಲ್ಲಿನ ಜನ ಸಂಬೋಸಾಗ್‌ನ್ನು ಪ್ರಯಾಣದ ಸಮಯದಲ್ಲಿ ಸೇವಿಸುತ್ತಿದ್ದರು. ಆ ರೀತಿ ಭಾರತಕ್ಕೆ ಬರುವಾಗ ಅವರು ಆ ತಿನಿಸು ಹಿಡಿದು ಬಂದಿದ್ದರು.
ಪರ್ಷಿಯನ್‌ನು ಈ ಸಿಹಿ ತಿಂಡಿಯನ್ನು ಭಾರತಕ್ಕೆ ಪರಿಚಯಿಸಿದರು. ಇಲ್ಲಿನ ಆಡಳಿತಗಾರರಿಗೆ ಆ ತಿನಿಸು ತಿನ್ನಲು ನೀಡಿದಾಗ, ರಾಜ ಮಹಾರಾಜರಿಗೆ ಸಂಬೋಸಾಗ್ ತುಂಬಾ ಇಷ್ಟವಾಯಿತು. ಬಳಿಕ ಜನ ಸಾಮಾನ್ಯರು ಸಂಬೋಸಾಗ್‌ನ್ನು ಇಷ್ಟಪಟ್ಟರು. ಆಗ ಅದು ಸಿಹಿ ಪದಾರ್ಥವಾಗಿತ್ತು.
ಆದರೆ 16ನೇ ಶತಮಾನದಲ್ಲಿ ಪೋರ್ಚುಗೀಸರು ಆಲೂಗಡ್ಡೆಯನ್ನು ಭಾರತಕ್ಕೆ ಪರಿಚಯಿಸಿದರು. ಬಳಿಕ ಭಾರತದಲ್ಲಿ ಸಿಹಿಗಿಂತ ಖಾರ ಪದಾರ್ಥವನ್ನು ಜನ ಹೆಚ್ಚು ಇಷ್ಟಪಡಲು ಶುರು ಮಾಡಿದರು. ಆಲೂಗಡ್ಡೆಯೂ ರುಚಿ ಎನ್ನಸಲಾರಂಭಿಸಿತು.
ಬಾದಾಮಿ, ಜೇನುತುಪ್ಪ, ಖರ್ಜೂರದ ಜಾಗಕ್ಕೆ ಆಲೂಗಡ್ಡೆ, ಈರುಳ್ಳಿ, ಹಸಿಮೆಣಸಿನ್ನು ಸೇರಿಸಿ, ಹೂರಣ ಮಾಡಲಾಯಿತು. ಆ ಬಳಿಕ ಭಾರತದಲ್ಲಿ ಸಂಬೋಸಾಗ್, ಸಮೋಸಾ ಆಗಿ ಬದಲಾಗಿ, ಇದೀಗ ಭಾರತದ ಸಮೋಸಾ ಅಂತಲೇ ಪ್ರಸಿದ್ಧವಾಗಿದೆ.




