Web Story: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಜೀವ ತೆಗೆಯುವಷ್ಟು ಡೇಂಜರ್..?

Web Story: ನೀವು ಇತ್ತೀಚೆಗೆ ಕೋರಿಯನ್ ಗೇಮ್ ಆಡಿ, ಕೆಲ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದನ್ನು ನೋಡಿದ್ದೀರಿ. ಹಾಗಾದ್ರೆ ಈ ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಜೀವ ತೆಗೆಯುವಷ್ಟು ಡೇಂಜರ್ ಅಂತಾ ತಿಳಿಯೋಣ ಬನ್ನಿ.

ಕೋರಿಯನ್ನರ ಬಗ್ಗೆ ಕೆಲವು ಭಾರತೀಯರು ಇತ್ತೀಚೆಗೆ ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಇನ್ನೂ ಹೈಸ್ಕೂಲ್ ಹೋಗದ ಮಕ್ಕಳು, ವಯಸ್ಕರು, ಹೀಗೆ ಹಲವರು ಕೋರಿಯನ್‌ರ ಜೀವನ, ಅಲ್ಲಿನ ಸೆಲೆಬ್ರಿಟಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ.

ಹಲವರು ಕೋರಿಯನ್ ರೀತಿ ಕಾಣಲು, ತ್ವಚೆಗೆ ಬೇಕಾದ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋರಿಯನ್ ಗಾಯಕರನ್ನು ಮೆಚ್ಚುತ್ತಿದ್ದಾರೆ. ಕೋರಿಯನ್ ಡ್ರಾಮಾ, ಸಿನಿಮಾಗಳನ್ನು ನೋಡುವವರ ಸಂಖ್ಯೆಯಂತೂ ತುಂಬಾ ಇದೆ. ಇದನ್ನೇ ಬಂಡವಾಳವಾಗಿಸಿಕ“ಂಡಿರುವ ಕೆಲವರು ಇದೀಗ ಕೋರಿಯನ್ನರನ್ನು ಭೇಟಿಯಾಗುವ ಅವಕಾಶ ನೀಡುವಂತೆ ಆಸೆ ತೋರಿಸಿ, ಇಂಥ ಕೋರಿಯನ್ ಲವ್ ಗೇಮ್ ಆ್ಯಪ್‌ಗಳನ್ನು ರಿಲೀಸ್ ಮಾಡಿದ್ದಾರೆ.

ಕೋರಿಯನ್ ಗೇಮ್ ಅಂದ್ರೆ ಇದು ಖಂಡಿತವಾಗಿಯೂ ಆನ್‌ಲೈನ್ ಗೇಮಿಂಗ್ ಆ್ಯಪ್ ಅಲ್ಲ. ಬದಲಾಗಿ ಆನ್‌ಲೈನ್ ಡೇಟಿಂಗ್ ಆ್ಯಪ್. ಈ ಆ್ಯಪ್ ಡೌನ್‌ಲೋಡ್ ಮಾಡಿ, ನೀವು ನಿಮಗೆ ಬೇಕಾದ ಕೋರಿಯನ್ ಯುವಕ-ಯುವತಿಯರನ್ನು ಕಾಂಟಾಕ್ಟ್ ಮಾಡಿ, ಅವರ ಜತೆ ಡೇಟ್ ಮಾಡಬಹುದು.

ಆನ್‌ಲೈನ್‌ಲ್ಲೇ ಏನು ಬೇಕೋ ಅದನ್ನೆಲ್ಲ ಮಾಡಬಹುದು. ಆದರೆ ಅವರು ಬಂದು ನಿಮ್ಮನ್ನು ಖಂಡಿತವಾಗಿಯೂ ಭೇಟಿಯಾಗುವುದಿಲ್ಲ. ಇದು ವಯಸ್ಕರಿಗಾಗಿ ತಯಾರು ಮಾಡಿರುವ ಆ್ಯಪ್ ಆಗಿದೆ. ಆದರೆ ಇದಕ್ಕೆ ಇನ್ನೂ ವಯಸ್ಕರಾಗದ ಮಕ್ಕಳೂ ಕೂಡ ಬಲಿಯಾಗುತ್ತಿದ್ದಾರೆ.

ಲವ್ ಅಂದ್ರೇನು ಅಂತಾ ತಿಳಿದೇ ಇರದ ಮಕ್ಕಳೇ ಹೆಚ್ಚು ಬಲಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಅಪರಿಚಿತ ಜನರ ಜತೆ ಮಾತನಾಡುವ ಮಕ್ಕಳು, ತಮ್ಮ ಪರ್ಸನಲ್ ಮಾಹಿತಿಯನ್ನೆಲ್ಲ ನೀಡುತ್ತಿದ್ದಾರೆ.

ಇನ್ನ“ಂದು ಡೇಂಜರಸ್ ವಿಷಯ ಅಂದ್ರೆ, ಇದರಲ್ಲಿ ಟಾಸ್ಕ್ ನೀಡಲಾಗುತ್ತದೆ. ಆ ಟಾಸ್ಕ್ ಪಡೆದು, ಅವರು ಆ ಟಾಸ್ಕ್ ಪೂರೈಸಬೇಕಾಗುತ್ತದೆ. ಅಂಥ ಟಾಸ್ಕ್ ಮಾಡಲು ಹೋಗಿಯೇ ಹಲವರು ಪ್ರಾಣ ಕಳೆದುಕ“ಂಡಿದ್ದಾರೆ. ಈ ಮುನ್ನ ಬಂದಿದ್ದ ಬ್ಲೂ ವ್ಹೇಲ್ ಎಂಬ ರಕ್ಕಸ ಗೇಮ್ ಆ್ಯಪ್ ಹಲವು ಮಕ್ಕಳ ಪ್ರಾಣ ತೆಗೆದಿತ್ತು. ಇದೀಗ ಈ ಕೋರಿಯನ್ ಗೇಮ್ ಆ್ಯಪ್ ಕೂಡ ಇದೇ ರೀತಿ ಮಕ್ಕಳ ಪ್ರಾಣ ಹಾನಿ ಮಾಡುವ ಎಲ್ಲ ಸಂಭವವಿದೆ. ಹಾಗಾಗಿ ಇಂಥ ಆ್ಯಪ್‌ಗಳನ್ನು ಭಾರತದಲ್‌ಲಿ ಬ್ಯಾನ್ ಮಾಡಬೇಕು ಅಂತ ಹಲವರು ಆಗ್ರಹಿಸಿದ್ದಾರೆ.

About The Author