Web story: ಹಡಗಿನಲ್ಲಿ ಕೈಯಿಂದ ಆಹಾರ ಸೇವಿಸುವ ಅವಕಾಶವಿಲ್ಲದಿರಲು ಕಾರಣವೇನು..?

Web story: ಫಿಟನೆಸ್ ಟ್ರೇನರ್ ಆಗಿರುವ ಬಸವರಾಜ್ ಕಟ್ಟಿಯವರು ಹಡಗಿನಲ್ಲಿ ಕೆಲಸ ಮಾಡುತ್ತಾರೆ. ಇವರು ಹಡಗಿನಲ್ಲೂ ಫಿಟ್‌ನೆಸ್ ಟ್ರೇನರ್ ಅಂತೆ. ಬಸವರಾಜ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಡಗಿನಲ್ಲಿ ತಾವು ಕಾಣುವ ಸುಂದರ ನೋಟವನ್ನು ನಮಗೂ ತೋರಿಸುತ್ತಾರೆ.

ಅದೇ ರೀತಿ ಕೆಲ ಮಾಹಿತಿಗಳನ್ನು ಸಹ ಆಗಾಗ ಶೇರ್ ಮಾಡುತ್ತಾರೆ. ಈ ಬಾರಿ ಬಸವರಾಜ್ ಅವರು, ಹಡಗಿನಲ್ಲೇ ಏಕೆ ಬರೀಗೈಯ್ಯಲ್ಲಿ ಆಹಾರ ಸೇವಿಸಲಾಗುವುದಿಲ್ಲ? ಸ್ಪೂನ್ ಬಳಕೆ ಮಾಡಲೇಬೇಕು ಅನ್ನೋ ರೂಲ್ಸ್ ಇರುವುದೇಕೆ ಅಂತಾ ವಿವರಿಸಿದ್ದಾರೆ.

ನಾನೇನಾದ್ರೂ ಈ ಆಹಾರವನ್ನು ಕೈಯಿಂದ ತಿಂದ್ರೆ, ನನ್ನನ್ನು ಮನೆಗೆ ಕಳುಹಿಸುತ್ತಾರೆ. ಅಥವಾ ವಾರ್ನಿಂಗ್ ನೀಡುತ್ತಾರೆ. ಏಕೆಂದರೆ, ಹಡಗಿನಲ್ಲಿ ಕೈಯಿಂದ ಆಹಾರ ಸೇವಿಸಲು ಅವಕಾಶವಿಲ್ಲ. ಇದಕ್ಕೆ ಕಾರಣ ಹೈಜಿನ್. ಹಡಗಿನಲ್ಲಿ ತುಂಬಾ ಹೈಜಿನ್ ಮೆಂಟೇನ್ ಮಾಡುತ್ತಾರೆ. ಹಡಗಿನಲ್ಲಿ ಬಫೆ ಸಿಸ್ಟಮ್ ಇರುವ ಕಾರಣ, ಸ್ವಚ್ಛತೆ ಅವಶ್ಯಕತವಾಗಿ ಇರುತ್ತದೆ. ಹಾಗಾಗಿ ಹಡಗಿನಲ್ಲಿ ಸ್ಪೂನ್‌ನಲ್ಲೇ ಆಹಾರ ಸೇವಿಸಬೇಕು ಅನ್ನೋ ನಿಯಮವಿದೆ ಅಂತಾರೆ ಬಸವರಾಜ್.

ಇನ್ನು ಅಡುಗೆ ಮಾಡುವ ಬಾಣಸಿಗರಿಗೆ ಸ್ವಲ್ಪ ಗಡ್ಡ, ಮೀಸೆ ಬಂದರೂ, ಕಿಚನ್‌ನಲ್ಲಿ ಬಿಡುವುದಿಲ್ಲ. ಗ್ಲೌಸ್ ಅಂತೂ ಬಳಸಲೇಬೇಕು. ಸ್ವಚ್ಛತೆ ಕಾಪಾಡುವುದರಲ್ಲಿ ಯಾವುದೇ ಮುಲಾಜಿಲ್ಲ. ಹಾಗಾಗಿ ನಾನು ಹಡಗಿನಲ್ಲಿ 9 ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ. 1 ದಿನವೂ ಆಹಾರದ ಕಾರಣದಿಂದ ನನ್ನ ಆರೋಗ್ಯ ಹಾಳಾಗಲಿಲ್ಲ. ಉದರ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಯಾವುದೂ ಬರಲಿಲ್ಲ. ಆರೋಗ್ಯವಾಗಿದ್ದೇನೆ ಅಂತಾರೆ ಬಸವರಾಜ್.

ಬಸವರಾಜ್ ಅವರ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ..

About The Author