Friday, November 22, 2024

Latest Posts

ಜ್ಯೋತಿಷ್ಯದ ಪ್ರಕಾರ ಬುಧವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

- Advertisement -

Astrology :

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೊಂದು ವಾರಕ್ಕೆ ಒಂದೊಂದು ರೀತಿಯ ವಿಶೇಷತೆ ಇದೆ .ಹೀಗಾಗಿ ಬುಧವಾರ ಜನಿಸಿದವರು ಕೆಲವೊಂದು ಉತ್ತಮ ಗುಣಗಳನ್ನೂ ಹಾಗೂ ಕೆಲವು ಅಸಹನೀಯ ಗುಣಗಳನ್ನೂ ಹೊಂದಿರುತ್ತಾರೆ. ಹಾಗಾದರೆ ಬುಧವಾರದಂದು ಜನಿಸಿದವರ ಜೀವನದ ಬಗ್ಗೆ ತಿಳಿದುಕೊಳ್ಳೋಣ .

ಬುಧವಾರದ ಗ್ರಹದ ಅಧಿಪತಿ ಬುಧನಾಗಿರುತ್ತಾನೆ, ಈ ಗ್ರಹವು ಸೂರ್ಯನಿಗೆ ಹತ್ತಿರವಾದ ಹಾಗೂ ಎಲ್ಲಾ ಗ್ರಹಗಳಿಗಿಂತ ಚಿಕ್ಕದಾಗಿರುವ ಗ್ರಹವಾಗಿದೆ. ಬುಧವಾರ ಜನಿಸಿದವರು ಚಂಚಲ ಸ್ವಭಾವದವರು, ಇವರು ಬಹುಮುಖ ಪ್ರತಿಭೆಯಾಗಿದ್ದು, ಸಂವಹನಶೀಲರಾಗಿರುತ್ತಾರೆ.ಯಾವುದೇ ಸಮಸ್ಯೆಗಳಿರಲಿ ಬಗೆ ಹರಿಸುವ ಸಾಮರ್ಥ್ಯ ಇವರಲ್ಲಿ ಇರುತ್ತದೆ. ಹಾಗೂ ಹೊಸ ವಿಷಯವನ್ನು ಕಲಿತುಕೊಳ್ಳಲು ಕಾತುರರಾಗಿರುತ್ತಾರೆ. ಇವರು ಎಲ್ಲವನ್ನೂ ವಿಶ್ಲೇಷಣಾತ್ಮಕವಾಗಿಯೇ ನೋಡುತ್ತಾರೆ. ನೆರೆಹೊರೆಯವರೊಂದಿಗೆ ಸಂಬಂಧವನ್ನು ಬೆಳೆಸಲು ಇಷ್ಟಪಡುತ್ತಾರೆ.ಇವರದ್ದು ಸ್ಮಾರ್ಟ್ ಚಿಂತನೆ ಇವರು ಎಂತಹ ಸವಾಲುಗಳನ್ನಾದರೂ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.ಆದರೆ ಇವರು ಮಾತನಾಡುವ ಸ್ವಭಾವ ಹಲವರಿಗೆ ಇಷ್ಟವಾಗುವುದಿಲ್ಲ, ಕೆಲವರಿಗೆ ಇದು ಗತ್ತು ಎನಿಸಬಹುದು.

ಇವರು ಯಾವ ಕೆಲಸವನ್ನಾದರೂ ಅತ್ಯಂತ ಕುತೂಹಲದಿಂದ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ. ಹಾಗೂ ಎಲ್ಲದರಲ್ಲೂ ಹೊಸತನ ಹುಡುಕುತ್ತಿರುತ್ತಾರೆ.ಇವರಿಗೆ ಪ್ರಯಾಣ ಮಾಡುವುದೆಂದರೆ ಬಹಳ ಇಷ್ಟ,ಇವರು ಹೊಸ ಪರಿಚಯಗಳನ್ನು ಮಾಡಲು ಇಷ್ಟ ಪಡುತ್ತಾರೆ.ಆದರೆ ವೃತ್ತಿಜೀವನದಲ್ಲಿ ಯಶಸ್ಸು ಗಳಿಸಬೇಕೆಂದ್ದರೆ ನಿಮ್ಮ ಬುದ್ಧಿವಂತಿಕೆಗೆ ಅವಕಾಶ ಇರುವ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು .ತಮ್ಮ ಸಂಗಾತಿಯನ್ನು ಬಹುಬೇಗ ಮನವೊಲಿಸುವ ಕಲೆಯನ್ನು ಹೊಂದಿರುತ್ತಾರೆ. ಹೀಗಾಗಿ ಯಾವ ಸನ್ನಿವೇಶ ಎದುರಾದರೂ ತಮ್ಮ ಮಾತುಗಳಿಂದ ಅವರನ್ನು ಮೋಡಿ ಮಾಡುತ್ತಾರೆ, ಎದುರಿನವರ ತಪ್ಪನ್ನು ಮನಸ್ಸಿಗೆ ತೆಗೆದುಕೊಳ್ಳದೇ ಬಹುಬೇಗ ಕ್ಷಮಿಸುವ ಗುಣವನ್ನು ಹೊಂದಿರುತ್ತಾರೆ.

ಸಂಬಂಧಗಳನ್ನು ಕಾಪಾಡಿಕೊಳ್ಳುವ ವಿಷಯಕ್ಕೆ ಬಂದಾಗ ಕೆಲವೊಮ್ಮೆ ಅಸಡ್ಡೆ ತೋರುವ ವ್ಯಕ್ತಿತ್ವವೂ ಇವರದ್ದಾಗಿದೆ. ಕೆಲವೊಮ್ಮೆ ದ್ವಂದ್ವ ವ್ಯಕ್ತಿತ್ವ ಹಾಗೂ ನಿಲುವನ್ನು ಹೊಂದಿರುವುದು ಸಹ ಸಂಕಷ್ಟಕ್ಕೆ ದೂಡುತ್ತದೆ. ಹೀಗಾಗಿ ನಿಮ್ಮ ಸಂಗಾತಿ ನಿಮ್ಮನ್ನು ವಿಶ್ವಾಸಕ್ಕೆ ನೀವು ಅರ್ಹರಲ್ಲ ಎಂಬ ತೀರ್ಮಾನಕ್ಕೆ ಬರಬಹುದು. ಹೀಗಾಗಿ ಕುಟುಂಬದ ಪ್ರತಿ ವಿಷಯಕ್ಕೂ ಪ್ರಾಮುಖ್ಯತೆ ಹಾಗೂ ಆದ್ಯತೆಯನ್ನು ನೀಡಬೇಕಿದೆ. ಸಂಗಾತಿಯೊಂದಿಗೆ ಉತ್ತಮ ಬಂಧ ಸೃಷ್ಟಿಸಲು ಸಂವಹನ ಕೌಶಲ್ಯಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು.

ಇವರ ಅದೃಷ್ಟ ಸಂಖ್ಯೆ ೫ ಅದೃಷ್ಟ ಮತ್ತು ಯಶಸ್ಸನ್ನು ಪಡೆಯಲು ಈ ಸಂಖ್ಯೆಯನ್ನು ಬಳಸಿ. ಒಳ್ಳೆಯ ಫಲಿತಾಂಶಗಳನ್ನು ಪಡೆಯಲು ಬುಧವಾರ ದೇವಸ್ತಾನಕ್ಕೆ ಭೇಟಿ ನೀಡುವುದು ಒಳ್ಳೆಯದು ಹಾಗೂ ಬಡವರಿಗೆ ದಾನಗಳನ್ನು ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ .

ಜ್ಯೋತಿಷ್ಯದ ಪ್ರಕಾರ ಸೋಮವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

ಜ್ಯೋತಿಷ್ಯದ ಪ್ರಕಾರ ಮಂಗಳವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

ಈ ಸಮಯದಲ್ಲಿ ನಿದ್ದೆ ಎಚ್ಚರಗೊಂಡರೆ ನಿಮಗೆ ನೀವೇ ಸೃಷ್ಟಿಕರ್ತ….

 

- Advertisement -

Latest Posts

Don't Miss