Tuesday, October 22, 2024

Latest Posts

ಇಂದಿನಿಂದ ಏನೇನು ಬದಲಾವಣೆ

- Advertisement -

ಮಾರ್ಚ್ 1 ರಿಂದ ಅಂದರೆ ಇಂದಿನಿಂದ ಕೇಂದ್ರ ಸರ್ಕಾರ ಮಾಡಿರುವ ಹಲವಾರು ಬದಲಾವಣೆಗಳು ಇಂದಿನಿಂದ ಜಾರಿಯಾಗಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಿಗೆ ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಕೆವೈಸಿ ಮಾಡಿಸಿಲ್ಲ ಅಂದರೆ ನಿಮ್ಮ ಬ್ಯಾಂಕ್ ಖಾತೆ ಸ್ಥಗಿತಗೊಳ್ಳಲಿದೆ. ಖಾತೆ ಸಕ್ರಿಯವಾಗಿ ಕಾರ್ಯನಿರ್ವಹಿಸ ಬೇಕು ಎಂದ್ರೇ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಜೋಡಣೆ ಮಾಡಬೇಕು.

ಎರಡನೇ ಬದಲಾವಣೆ, ಇಂಡಿಯಾನ್ ಬ್ಯಾಂಕ್ ಎಟಿಎಮ್‌ನಲ್ಲಿ ಎರಡು ಸಾವಿರ ರೂಪಾಯಿಯ ನೋಟುಗಳು ಇನ್ನು ಮುಂದೆ ಸಿಗುವುದಿಲ್ಲ, ಆದರೆ, ಬ್ಯಾಂಕ್ ಕೌಂಟರ್‌ನಲ್ಲಿ ಸಿಗಲಿದೆ.

ಮೂರನೇ ಬದಲಾವಣೆ , ಟೋಲ್ ಪ್ಲಾಜಾಗಳಲ್ಲಿ ಸಿಗುತ್ತಿದ್ದ ಫಾಸ್ಟ್ ಟ್ಯಾಗ್ ಉಚಿತವಾಗಿ ಸಿಗುವುದಿಲ್ಲ. ಫಾಸ್ಟ್ ಟ್ಯಾಗ್ ಬೇಕು ಎಂದರೇ ನೂರು ರೂಪಾಯಿ ಪಾವತಿಸಿ ಖರೀದಿಸಬೇಕಿದೆ.

ನಾಲ್ಕನೇ ಬದಲಾವಣೆ, ಪ್ರತಿ ತಿಂಗಳ ಮೊದಲ ದಿನ ಅಡುಗೆ ಸಿಲಿಂಡರ್ ದರ ಪರಿಷ್ಕರಣೆ ಮಾಡಲಾಗತ್ತದೆ, ಅದೇ ರೀತಿಯಲ್ಲಿ ಇಂದು ಸಿಲಿಂಡರ್ ಬೆಲೆಯಲ್ಲಿ 25 ರೂಪಾಯಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ದರ 822 ರೂ ಇದೆ. ಫೆಬ್ರವರಿಯಿಂದ ಇದು ವರೆಗೂ ನಾಲ್ಕು ಬಾರಿ ಬೆಲೆ ಏರಿಕೆಯಾಗಿದೆ.

ಕೊನೆ ಬದಲಾವಣೆ, ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನವಾಗಿವೆ. ಆದ್ದರಿಂದ ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳ ಐಎಫ್‌ಎಸ್‌ಸಿ ಕೋಡ್ ಇಂದಿನಿಂದ ಕಾರ್ಯ ನಿರ್ವಹಿಸುವುದಿಲ್ಲ. ಹೀಗಾಗಿ ಈ ಬ್ಯಾಂಕ್‌ಗಳ ಗ್ರಾಹಕರು ಹೊಸ ಐಎಫ್‌ಎಸ್‌ಸಿ ಕೋಡ್ ಬಳಸಿ ಹಣ ವರ್ಗಾವಣೆ ಮಾಡಬಹುದಾಗಿದೆ.

- Advertisement -

Latest Posts

Don't Miss