Thursday, December 26, 2024

Latest Posts

ಸ್ನಾನ (Bath) ಮಾಡುವುದರಿಂದ ಆಗುವ ಲಾಭಗಳೇನು..

- Advertisement -

ಸನಾತನ ಸಂಸ್ಕೃತಿಯಲ್ಲಿ ದಿನನಿತ್ಯ ನಾವು ಮಾಡುವ ಪ್ರತಿಯೊಂದು ಕಾರ್ಯಗಳಿಗೂ ಅದರದ್ದೇ ಆದ ಮಹತ್ವವಿದೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು, ಸೂರ್ಯನಿಗೆ ವಂದಿಸುವುದು, ಸ್ನಾನ, ಸಂಧ್ಯಾವಂದನೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳು, ಹೀಗೆ ಪ್ರತಿ ಕೆಲಸಕ್ಕೂ ಒಂದೊಂದು ನಿಯಮವಿದೆ.

ಆ ನಿಯಮಗಳ ಹಿಂದೆ ಸತ್ಕಾರಣವಿದೆ. ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳು ಸಕಾರಾತ್ಮಕ ಕಾರಣಗಳ ಮೇಲೆ ನಿಂತಿವೆ. ನಮ್ಮ ಹಿರಿಯರು ಹೇಳಿದ, ಆಚರಿಸಿದ ಪ್ರತಿ ವಿಷಯದಲ್ಲೂ ಒಳಿತೇ ಅಡಗಿದೆ. ವೇದ, ಪುರಾಣಗಳಲ್ಲಿ ಹೇಳಿರುವಂತೆ ಆಚಾರ-ವಿಚಾರಗಳನ್ನು ನಿಯಮ ಬದ್ಧವಾಗಿ ಪಾಲಿಸಿದರೆ ಭಗವಂತನ ಕೃಪೆಯಾಗಿ ಒಳಿತಾಗುತ್ತದೆ. ಹೀಗೆಯೇ ಸ್ನಾನ ಮಾಡುವಾಗ ಅನುಸರಿಸಬೇಕಾದ ಕೆಲವು ನಿಯಮ ಮತ್ತು ವಿಷಯಗಳ ಬಗ್ಗೆ ಗಮನಹರಿಸೋಣ, ಯಾವಾಗ ಜೀವನದಲ್ಲಿ ಹಣದ ಸಮಸ್ಯೆ ಎದುರಾಗುತ್ತದೆ ಆಗ ಹಲವಾರು ರೀತಿಯ ಇತರ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಆದ್ದರಿಂದ ಹಣದ ಸಮಸ್ಯೆಯನ್ನು ದೂರ ಮಾಡಲು ಯಾವ ಉಪಾಯವನ್ನು ಮಾಡಿದರೆ ಬೇಗ ಆರ್ಥಿಕ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಯಾವಾಗ ವ್ಯಕ್ತಿಗೆ ತುಂಬಾ ಆಯಾಸವಾಗಿರುತ್ತದೆಯೋ ಆಗ ವ್ಯಕ್ತಿಯು ಸ್ನಾನಮಾಡಿ ಹೊರಬರುತ್ತಾನೆ, ಇದರಿಂದ ಅವನ ಮನಸ್ಸಿಗೆ ಹಗುರವಾದ ಭಾವನೆ ಬರುತ್ತದೆ. ಏಕೆಂದರೆ ನೀರಿನಲ್ಲಿ ಒಂದು ಅಮೋಘವಾದ ಶಕ್ತಿ ಇದೆ, ಅದು ವ್ಯಕ್ತಿಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಆಕರ್ಷಣೆ ಮಾಡಿ ಸಕಾರಾತ್ಮಕ ಶಕ್ತಿ ಸಂಚಲನ ಮಾಡಲು ಸಹಾಯ ಮಾಡುತ್ತದೆ.

ಮುಂಜಾನೆ ಸ್ನಾನ ಮಾಡಲು ಹೋದಾಗ ಒಂದು ಚಮಚ ಉಪ್ಪನ್ನು ಕೈಯಲ್ಲಿ ತೆಗೆದುಕೊಂಡು ಹೋಗಿ ಈ ಕೆಳಗೆ ತಿಳಿಸಿರುವ ಮಂತ್ರವನ್ನು ಜಪ ಮಾಡಬೇಕು. ಓಂ ಮನಿ ಪದ್ಮೇ ಓಂ ಫಟ್. ನಾವು ಸ್ನಾನ ಮಾಡುವ ನೀರು ಗಂಗೆ, ಗೋದಾವರಿ, ಕಾವೇರಿಯಷ್ಟೇ ಪವಿತ್ರ. ಈ ಪವಿತ್ರ ನದಿಗಳನ್ನು ಪ್ರಾರ್ಥಿಸಿಕೊಂಡು ಸ್ನಾನ ಮಾಡುವುದರಿಂದ ಭವರೋಗಾದಿಗಳು ನಿವಾರಣೆಯಾಗುತ್ತವೆ. ಸ್ನಾನ ಮಾಡುವಾಗ ‘ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂದು ಪ್ರಾರ್ಥಿಸಬೇಕು.

ಸ್ನಾನ ಎನ್ನುವುದು ಕೇವಲ ದೈಹಿಕ ಶುದ್ಧಿ ಅಷ್ಟೇ ಅಲ್ಲ. ಮನಸ್ಸಿನ ಕೊಳೆಯನ್ನೂ ನಾಶ ಮಾಡಿ ನಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ.ಈ ಪವಿತ್ರ ನದಿಗಳನ್ನು ಪ್ರಾರ್ಥಿಸಿ ಅವುಗಳ ಅಂಶವನ್ನೇ ಆಹ್ವಾನಿಸಕೊಂಡು ಸ್ನಾನ ಮಾಡುವುದರಿಂದ ಸಕಲ ಪಾಪಗಳೂ ತೊಳೆದುಹೋಗುತ್ತವೆ.
ಈ ಮೇಲಿನ ಮಂತ್ರದಿಂದ ಯಾರು ಸಿದ್ಧಿಯನ್ನು ಪಡೆದುಕೊಳ್ಳುತ್ತಾರೋ ಅವರು ಎಲ್ಲಾ ಸಂಕಷ್ಟಗಳಿಂದ ಮುಕ್ತಿಯನ್ನು ಹೊಂದುತ್ತಾರೆ. ಇಂಥ ವ್ಯಕ್ತಿಗಳು ದೌರ್ಭಾಗ್ಯದಿಂದ ಸೌಭಾಗ್ಯದ ಕಡೆಗೆ ಬಂದು ಧನ ಸಂಪತ್ತನ್ನು ಆಕರ್ಷಣೆ ಮಾಡುತ್ತಾರೆ. ಈ ಮಂತ್ರವನ್ನು ಹೇಳುವಾಗ ಬಲಗೈಯಲ್ಲಿ ಉಪ್ಪನ್ನು ಹಿಡಿದುಕೊಂಡು ನಂತರ 108 ಬಾರಿ ಮೇಲೆ ತಿಳಿಸಲಾಗಿರುವ ಮಂತ್ರವನ್ನು ಜಪ ಮಾಡಬೇಕು. ತದನಂತರ ಉಪ್ಪನ್ನು ನೀರಿನೊಳಗೆ ಹಾಕಿ ಸ್ನಾನ ಮಾಡಬೇಕು. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿಯ ಸಂಚಲನವಾಗಲು ಪ್ರಾರಂಭವಾಗುತ್ತದೆ.
ಆ ನೀರನ್ನು ಸ್ನಾನ ಮಾಡಿ ಸ್ನಾನ ಮುಗಿಸಿ ಆಚೆ ಬರುವಾಗ ನಿಮ್ಮಲ್ಲಿ ಆದ ಅನುಭವವನ್ನು ನೀವೇ ಕಾಣುತ್ತೀರಾ ಹಲವಾರು ರೀತಿಯ ಕಷ್ಟಗಳು ಬಂಧನಗಳಿಂದ ದೂರ ಆಗುವುದನ್ನು ನೀವೇ ಕಾಣುತ್ತೀರಾ ಈ ಪ್ರಯೋಗವನ್ನು ಮಾಡುವುದರಿಂದ ವ್ಯಕ್ತಿಯ ಶರೀರದಲ್ಲಿರುವ ಬ್ಲಾಕೇಜ್ ಗಳು ದೂರಾಗುತ್ತವೆ ವ್ಯಕ್ತಿಯ ಶರೀರದಲ್ಲಿರುವ ಬ್ಲಾಕೇಜ್ ಚಕ್ರದಿಂದ ವ್ಯಕ್ತಿಯು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾನೆ ಹೀಗೆ ಮಾಡುವುದರಿಂದ ನಿಮ್ಮ ಶರೀರದಲ್ಲಿರುವ ದುಃಖದ ಭಾರವನ್ನು ತೆಗೆದುಹಾಕುತ್ತಾ ಹೋಗಿ ಎಲ್ಲಿಯತನಕ ನಿಮ್ಮ ದುಃಖ ಕಡಿಮೆಯಾಗಿಲ್ಲ ಅನಿಸುತ್ತದೆ ಅಲ್ಲಿಯತನಕ ಈ ಪ್ರಯೋಗ ಮಾಡುತ್ತಾ ಹೋಗಿ ಯಾಕೆಂದರೆ ಈ ಪ್ರಯೋಗದಿಂದ ದುಃಖ ಹೋಗಿ ಸುಖ ಬರುತ್ತದೆ.

- Advertisement -

Latest Posts

Don't Miss