www.karnatakatv.net : ರಾಯಚೂರು : ವಿಭಾಗೀಯ ಮಟ್ಟದ ನಾಯಕರಿಗೆ ಟಾರ್ಗೆಟ್ ಕೊಡಲಾಗಿದೆ. 75 ವರ್ಷದ ಅಮೃತ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಇಡೀ ವರ್ಷ ಆಚರಣೆ ಮಾಡಲಾಗುವುದು. ಕಾಂಗ್ರೆಸ್ ಮಾತ್ರವಲ್ಲದೆ ಎಲ್ಲರನ್ನ ಒಳಗೊಂಡು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಒಂದೊಂದು ತಿಂಗಳು ಒಂದೊಂದು ಹೆಸರಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಅಕ್ಟೋಬರ್ ತಿಂಗಳಲ್ಲಿ ಗಾಂಧಿ ನೆನಪಲ್ಲಿ ಪ್ರತಿ ಪಂಚಾಯತಿಯಲ್ಲಿ ಸಭೆ ನಡೆಸಲು ಚಿಂತಿಸಲಾಗಿದೆ. ಹೀಗೆ ವರ್ಷವಿಡಿ ಸಂಘಟನೆ ಮತ್ತು ಹೋರಾಟದ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ಜನಕ್ಕೆ ಬಿಜೆಪಿ ಏನು ಜನಾರ್ಶಿವಾದ ಮಾಡಿದೆ, ಏನ್ ಯಾತ್ರೆ ಮಾಡ್ತಾರೆ. ಬೆಡ್ ಸ್ಕ್ಯಾಂಡಲ್ ನಾವು ಹೇಳಿದ್ದೆವಾ, ಸಿಎಂ ನ ನಾವು ತೆಗೆದಿದ್ದೆವಾ. ಕಷ್ಟದಲ್ಲಿದ್ದವರಿಗೆ ಬಿಜೆಪಿಯರು ಏನು ಸಹಾಯ ಮಾಡಿದರು ಅಂತ ಅವರೇ ಹೇಳಲಿ. ಜನಕ್ಕೆ ಏನ್ ಆಶಿರ್ವಾದ ಬೂದಿ ಆಶಿರ್ವಾದ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ವ್ಯಂಗವಾಡಿದರು.
ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು