2021 ಡಿಸೆಂಬರ್ 8 ದೇಶಕ್ಕೆ ದೊಡ್ಡ ದುರಂತವೊoದು ಸಂಭವಿಸಿತ್ತು. ತಮಿಳುನಾಡಿನ ಕೂನೂರು ಬಳಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 12 ಸೇನಾಧಿಕಾರಿಗಳನ್ನು ಒಳಗೊಂಡ ಹೆಲಿಕಾಪ್ಟರ್ ಪತನವಾಗಿತ್ತು, 12 ಸೇನಾಧಿಕಾರಿಗಳು ಸಾವನ್ನಪ್ಪಿದ್ದರು. ಪತನಗೊಂಡ ಹೆಲಿಕಾಪ್ಟರ್ ಬಗ್ಗೆ ಅನೇಕ ಅನುಮಾನಾಸ್ಪದ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಅದರ ಸೂಕ್ತ ತನಿಕೆ ನಡೆಸಲು ದೇಶದ ಉನ್ನತ ಮಟ್ಟದ ಹೆಲಿಕಾಪ್ಟರ್ ಪೈಲಟ್ ಏರ್ ಮಾರ್ಶಲ್ ಮನ್ವೇಂದ್ರ ಸಿಂಗ್ ನೇತೃತ್ವದಲ್ಲಿ ಮೂರು ಸೇನೆಗಳನ್ನೊಳಗೊಂಡ ಕೋರ್ಟ್ ಆಫ್ ಎನ್ಕ್ವೈರಿ ಎಂಬ ತನಿಖಾ ಸಮಿತಿ ರಚನೆ ಮಾಡಲಾಗಿತ್ತು. ತನಿಖಾ ಸಮಿತಿ ಹಲವಾರು ದಿನಗಳ ಸಮಯ ತೆಗೆದುಕೊಂಡು ಮಾಹಿತಿಯನ್ನು ಬಹಿರಂಗ ಮಾಡಿದೆ.
ಸೇನಾ ಹೆಲಿಕಾಪ್ಟರ್ ಪತನಕ್ಕೆ ಪೈಲೆಟ್‌ನ ಅಜಾಗರೂಕತೆಯೇ ಕಾರಣ ಎಂದು ತನಿಖಾ ಸಮಿತಿಯ ಪ್ರಾಥಮಿಕ ಫಲಿತಾಂಶದಲ್ಲಿ ಉಲ್ಲೇಖವಾಗಿದೆ. ಅಂದು ನೀಲಗಿರಿ ಕಾಡುಗಳ ಬಳಿ ಹವಾಮಾನದಲ್ಲಿ ಒಮ್ಮೇಲೇ ಬದಲಾವಣೆ ಉಂಟಾಯಿತು. ಮೋಡ ಅಡ್ಡಬಂದಿದ್ದರಿoದ ಫೈಲೆಟ್‌ಗೆ ದಿಗ್ಭçಮೆಯಾಗಿದೆ.
ಅವರಿಗೆ ಮುಂದೆ ಏನು ಮಾಡಬೇಕು ಎಂದು ತಿಳಿಯದ ಕಾರಣ ಹೆಲಿಕಾಪ್ಟರ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಹೀಗಾಗಿ ಅದು ಕಲ್ಲುಬಂಡೆಗೆ ಅಪ್ಪಳಿಸಿ ಸ್ಪೋಟಗೊಂಡಿದೆ ಎಂದು ತಂಡ ವರದಿ ನೀಡಿದೆ .
ಪ್ರಮುಖವಾಗಿ ಗಮನಿಸಬೇಕಾದ ಅಂಶವೆoದರೆ ಎಂಐ-17ವಿ5 ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಮಾಸ್ಟರ್ ಗ್ರೀನ್ ವರ್ಗದವರೇ ಆಗಿದ್ದರು. ಅಂದರೆ ತಮ್ಮ ತಮ್ಮ ಕ್ಷೇತ್ರದಲ್ಲಿ ನುರಿತ ಅನುಭವಿಗಳಾಗಿದ್ದರು. ಈ ಸಂದರ್ಭವನ್ನು ಎದುರಿಸಲು ಸಾಧ್ಯ ಎಂದು ಭಾವಿಸಿದ್ದರು. ಹೀಗಾಗಿ ಸಮೀಪದ ಏರ್ ಕಂಟ್ರೋಲ್ ರೂಂಗೆ ತುರ್ತು ಕರೆ ಕೂಡ ಮಾಡಲಿಲ್ಲ ಎಂದು ಹೇಳಲಾಗಿದೆ.
ಇನ್ನೂ ಅಪಘಾತದ ನಂತರ ಹೆಲಿಕಾಪ್ಟರ್‌ನಲ್ಲಿದ್ದ ಡಾಟಾ ರಿಕಾರ್ಡರ್ ಮತ್ತು ಕಾಕ್‌ಪಿಟ್ ವೈಸ್ ರಿಕಾರ್ಡ್ಗಳನ್ನು ವಿಶ್ಲೇಷಿಸಿದ ನಂತರ, ಲಭ್ಯವಿರುವ ಸಾಕ್ಷಿಗಳನ್ನು ಪ್ರಶ್ನಿಸಿ, ಉತ್ತರ ಪಡೆದ ಬಳಿಕ ತನಿಕಾ ತಂಡ ವರದಿ ನೀಡಿದೆ.

