Thursday, September 19, 2024

Latest Posts

ಫುಡ್ ಡಿಲೆವರಿ ಕೊಡಲು ಬಂದ ಡಿಲೆವರಿ ಬಾಯ್ ಮಾಡಿದ್ದೇನು..? ನೀವೇ ನೋಡಿ..

- Advertisement -

Uttar Pradesh News: ಎಷ್ಟೋ ಜನ ಫುಡ್ ಡಿಲೆವರಿ ಬಾಯ್ಸ್, ಅದೆಷ್ಟು ನಿಯತ್ತಾಗಿ ಕೆಲಸ ಮಾಡುತ್ತಾರೆ ಎಂದರೆ, ಹೊತ್ತಿಗೆ ಸರಿಯಾಗಿ ಊಟ ಮಾಡದೇ, ಆರೋಗ್ಯ ಸರಿಯಾಗಿ ಇಲ್ಲದಿದ್ದರೂ, ಕೆಲಸಕ್ಕೆ ಬರುವುದು, ಟಿಪ್ಸ್ ನಿರೀಕ್ಷೆ ಮಾಡದೇ ಕೆಲಸ ಮಾಡುವುದು, ಇತ್ಯಾದಿ ಮಾಡುತ್ತಾರೆ. ಆದರೆ ಕೆಲ ಯುವಕರು ಹೀಗೆ ಫುಡ್ ಡಿಲೆವರಿ ಮಾಡುವಾಗ, ಕೆಟ್ಟದಾಗಿ ಬಿಹೇವ್ ಮಾಡಿ, ಸಿಕ್ಕಿಬಿದ್ದು ಪೆಟ್ಟು ತಿಂದಿದ್ದಾರೆ, ಜೈಲು ಸೇರಿದ್ದಾರೆ. ಅದೇ ರೀತಿ ಇಲ್ಲೋರ್ವ ಡಿಲೆವರಿ ಬಾಯ್ ಫುಡ್ ಡಿಲೆವರಿ ಮಾಡಲು ಬಂದು, ಮನೆಯ ಮುಂದೆ ಇದ್ದ ಶೂಸ್ ಕದ್ದುಕೊಂಡು ಹೋಗಿದ್ದಾನೆ. ಈ ಘಟನೆ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಉತ್ತರಪ್ರದೇಶದ ನೊಯ್ಡಾದಲ್‌ಲಿ ಈ ಘಟನೆ ನಡೆದಿದ್ದು, ಸ್ವಿಗ್ಗಿ ಡಿಲೆವರಿ ಬಾಯ್ ಫುಡ್ ಡಿಲೆವರಿ ಮಾಡಲು ಬಂದು, ಮನೆಯ ಮುಂದೆ ಇದ್ದ ಶೂಸನ್ನು ಕದ್ದೊಯ್ದಿದ್ದಾನೆ. ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಮನೆಯವರು ಇದೇ ವೀಡಿಯೋ ಆಧಾರದ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಹಲವರು ಹಲವು ರೀತಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಹೀಗೆ ಮಾಡಬಾರದಿತ್ತು ಎಂದು ಬರೆದಿದ್ದರೆ, ಇನ್ನು ಕೆಲವರು ಇಂಥವರನ್ನು ಸುಮ್ಮನೆ ಬಿಡಬಾರದು ಎಂದಿದ್ದಾರೆ. ಮತ್ತೆ ಕೆಲವರು ಅವನ ಪರಿಸ್ಥಿತಿ ಹದಗೆಟ್ಟಿರಬೇಕು. ಹಾಾಗಾಗಿ ಕಳ್ಳತನ ಮಾಡಿರಬೇಕು. ಕಾರಣ ತಿಳಿದು ಶಿಕ್ಷೆ ಕೊಡಬೇಕು ಎಂದಿದ್ದಾರೆ.

- Advertisement -

Latest Posts

Don't Miss