Hubli News: ಹುಬ್ಬಳ್ಳಿ: ಹುಬ್ಬಳ್ಳಿ ಶಾಸಕರ ಕಚೇರಿಯಲ್ಲಿ ಪ್ರಸಾದ್ ಅಬ್ಬಯ್ಯ ಸುದ್ದಿಗೋಷ್ಠಿ ನಡೆಸಿದ್ದು, ಬಡವರ ಅನುಕೂಲಕ್ಕಾಗಿ ಸ್ಮಶಾನದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದೆ. ಒಂದು ವೇಳೆ ಅಲ್ಲಿನ ಜನರು ಬೇಡಾ ಅಂದರೆ ಕ್ಯಾಂಟೀನ್ ಸ್ಥಳಾಂತರ ಮಾಡಲಾಗುತ್ತದೆ. ಕೆಲವು ಜನ ಕ್ಯಾಂಟೀನ್ ಬೇಕು ಎನ್ನುತ್ತಿದ್ದಾರೆ ಇನ್ನೂ ಕೆಲವು ಜನ ಬೇಕು ಎನ್ನುತ್ತಿದ್ದಾರೆ. ಹೀಗಾಯ ಜನರಿಂದ ಮೊದಲಿಗೆ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಹೆಚ್ಚಿನ ಜನ ಬೇಡಾ ಅಂದರೆ ಕೂಡಲೇ ಕ್ಯಾಂಟೀನ್ ಸ್ಥಳಾಂತರ ಮಾಡಲಾಗುತ್ತದೆ. ಆದರೆ ಕ್ಯಾಂಟೀನ್ ವಿಚಾರದಲ್ಲಿ ಕೆಲವರು ಸ್ಥಳೀಯ ರಾಜಕೀಯ ಮಾಡುತ್ತಿದ್ದಾರೆ. ಇದನ್ನು ನಾನು ಸಹಿಸುವುದಿಲ್ಲ. ಅಲ್ಲಿನ ಜನ ಬೇಡಾ ಅಂದರೆ ಕಂಡಿತವಾಗಿ ಕ್ಯಾಂಟೀನ್ ಸ್ಥಳಾಂತರ ಮಾಡುತ್ತೇವೆ ಎಂದು ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.
ಇನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಹುಬ್ಬಳ್ಳಿ ಮಂಟೂರು ರಸ್ತೆಯಲ್ಲಿನ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವ ಹಿನ್ನಲೆ, ಹಿಂದೂ ಸ್ಮಶಾನದಲ್ಲಿ ಕ್ಯಾಂಟೀನ್ ಕಟ್ಟೋದಲ್ಲಾ ಅಬ್ಬಯ್ಯಗೆ ತಾಕತ್ತು ಇದ್ದ್ರೆ ಕಬರಸ್ತಾನದಲ್ಲಿ ಕ್ಯಾಂಟೀನ್ ಕಟ್ಟಲಿ ಅಂತ ಸವಾಲು ಹಾಕಿದ್ದರು. ಹಾಗಾಗಿ ಮುತಾಲಿಕ್ ವಿರುದ್ಧ ಪ್ರಸಾದ್ ಅಬ್ಬಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಅವನ ತಾಕತ್ತು ನಾನು ನೋಡೊದು ಬೇಕಿಲ್ಲ. ಅವನ ಎಲ್ಲಾ ತಾಕತ್ತು ನಾನು ನೋಡಿದ್ದಿನಿ. ಅವನಿಗೆ ಬೆಂಕಿ ಹಚ್ಚೊದು ಬಿಟ್ಟಿರೆ ಬೇರೆನು ಗೊತ್ತಿಲ್ಲ. ಪ್ರಮೋದ್ ಮುತಾಲಿಕ್ ನನಗೆ ಲೀಸ್ಟ್ ಬಾದರ್.. ಅವನ್ನಾ ನಾನು ಕೇರ್ ಮಾಡಲ್ಲಾ. ಅವನ್ನಾ ನಾನು ತಲೆಗೆ ತೆಗೆದುಕೊಳ್ಳೊದಿಲ್ಲ. ಪ್ರಮೋದ್ ಮುತಾಲಿಕ್ ದೊಡ್ಡ ಇಂಟರ್ ನ್ಯಾಷನಲ್ ಲೀಡರ್ ಅಲ್ಲಾ. ಅವನು ಹೇಳಿದ ತಕ್ಷಣ ನಾನು ತಾಕತ್ತು ತೋರಿಸೋದು ಬೇಕಿಲ್ಲಾ. ನನಗೆ ನನ್ನ ಜನ ಬೇಕು.. ನನ್ನ ಲೀಡರ್ ಬೇಕು. ನನ್ನನ್ನು ಜನ ಆರಿಸಿದ್ದಾರೆ ಮುತಾಲಿಕ್ ಅಲ್ಲಾ ಎಂದಿದ್ದಾರೆ.