Wednesday, August 20, 2025

Latest Posts

ಪಾಯಿಂಟ್ 13ರಲ್ಲಿ GPRಗೆ ಸಿಕ್ಕಿದ್ದೇನು?

- Advertisement -

ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ಪ್ರಕರಣದ ತನಿಖೆ ಚುರುಕು ಪಡೆದಿದೆ. ನೇತ್ರಾವತಿ ಅರಣ್ಯದಲ್ಲಿ ಶೋಧ ಕಾರ್ಯಕ್ಕೆ, ಎಸ್‌ಐಟಿ ವೇಗ ಕೊಟ್ಟಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ 13ನೇ ಪಾಯಿಂಟ್‌ನಲ್ಲಿ, ಉತ್ಖನನ ಮಾಡಲಾಗ್ತಿದೆ. ಇದೇ ಜಾಗದಲ್ಲಿ ಹಲವು ಶವಗಳನ್ನು ಹೂತಿದ್ದಾಗಿ ಅನಾಮಿಕ ಹೇಳಿದ್ದ. 13ನೇ ಪಾಯಿಂಟ್‌ ಪಕ್ಕದಲ್ಲೇ ಕಿಂಡಿ ಅಣೆಕಟ್ಟೆ ಇದೆ. ವಿದ್ಯುತ್‌ ಪರಿವರ್ತಕಗಳೂ ಇವೆ. ಹೀಗಾಗಿ ತುಂಬಾ ಜಾಗರೂಕತೆಯಿಂದ, ಮುನ್ನೆಚ್ಚರಿಕೆಯಿಂದ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಆಗಸ್ಟ್‌ 12ರಂದು ಶೋಧ ಕಾರ್ಯಾಚರಣೆ ಶುರು ಮಾಡಿದ ಎಸ್‌ಐಟಿ, ಮೊದಲು ಜಿಪಿಆರ್‌ ತಂತ್ರಜ್ಞಾನ ಬಳಸಿದ್ದಾರೆ. ಆ ವೇಳೆ ಕೆಲವು ಸುಳಿವು ಸಿಕ್ಕಿದೆ. ಸರಿಯಾಗಿ 18 ಅಡಿ ಆಳದಲ್ಲಿ, ಕೆಲವು ವಸ್ತುಗಳು ಇರಬಹುದು ಅಂತಾ ಹೇಳಲಾಗಿದೆ. ಈಗ ಅದೇ ಜಾಗದಲ್ಲಿ ಶೋಧ ಕಾರ್ಯ ಶುರುವಾಗಿದೆ.

ಹಿಟಾಚಿ ಮತ್ತು ಅರ್ಥ್‌ ಮೂವರ್‌ ಬಳಸಿ, ಏಕಕಾಲದಲ್ಲಿ ಎರಡೆರಡು ಕಡೆ ಅಗೆಯಲಾಯ್ತು. 18ರಿಂದ 20 ಅಡಿ ಅಳಕ್ಕೆ ಅಗೆಯಲು, ಎಸ್‌ಐಟಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ. 1ರಿಂದ 12ರವರೆಗಿನ ಪಾಯಿಂಟ್‌ನಲ್ಲಿ 6ರಿಂದ ಏಳೆಂಟು ಅಡಿಗಳಷ್ಟು, ಆಳ ಮತ್ತು ಅಗಲವಾಗಿ ಅಗೆಯಾಲಾಗ್ತಿತ್ತು. ಆದ್ರೀಗ 13ನೇ ಪಾಯಿಂಟ್‌ನಲ್ಲಿ, ಅನಾಮಿಕ ತೋರಿಸಿದ ಸ್ಥಳದ, ಮೂರು ಪಟ್ಟು ಹೆಚ್ಚು ಜಾಗ ಗುರುತು ಮಾಡಿ ಅಗೆಯಲಾಗ್ತಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಅರ್ಥ್‌ ಮೂವರ್‌ ಬಳಸಿ, ಗುಂಡಿ ತೆಗೆಯಲಾಗ್ತಿದೆ.

ಈಗಾಗಲೇ ಜಿಪಿಆರ್‌ ಪರಿಶೀಲನೆ ಬಳಿಕ, ಲ್ಯಾಬ್‌ಗೆ ತೆಗೆದುಕೊಂಡು ಹೋಗಲಾಗಿದೆ. 2ಡಿ, 3ಡಿ ಇಮೇಜ್‌ಗಳನ್ನು ಮಾಡುವ ಸಾಧ್ಯತೆ ಇದೆ. ಮೌಂಟೆಡ್‌ ಡ್ರೋಣ್‌ ಜಿಪಿಆರ್‌ನಲ್ಲಿ ಸೆರೆಯಾದ ಎಲ್ಲದರ ಬಗ್ಗೆಯೂ, ತಂತ್ರಜ್ಞರ ಮತ್ತೊಂದು ತಂಡ ರಿಪೋರ್ಟ್‌ ರೆಡಿ ಮಾಡ್ತಿದ್ದಾರೆ.

ಬೆಳಗ್ಗೆಯಿಂದಲೂ ಜಿಟಿಜಿಟಿ ಮಳೆಯಾಗ್ತಿದ್ದು, ಗುಂಡಿಯಲ್ಲಿ ನೀರು ತುಂಬಿದ್ರೆ ಹೊರಹಾಕಲು, ಪಂಪ್‌ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಇನ್ನು, ಉತ್ಖನನ ಜಾಗದಲ್ಲಿ ಯಾವುದೇ ನೆಟ್‌ ಅಳವಡಿಸಿಲ್ಲ. ಹೀಗಾಗಿ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ಶೋಧ ಕಾರ್ಯ ನೋಡುತ್ತಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಸದಸ್ಯರು, ಎಸಿ ಸ್ಟೆಲ್ಲಾ ವರ್ಗೀಸ್, ದೂರದಾರರ ಪರ ವಕೀಲರು‌ ಕೂಡ ಹಾಜರಿದ್ದಾರೆ.

13ನೇ ಜಾಗದಲ್ಲಿ ಅಸ್ಥಿಪಂಜರ ಸಿಕ್ಕಿದ್ರೆ, ಶೋಧ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್‌ ಕೊಡುವ ಸಾಧ್ಯತೆ ಇದೆ. ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಬೇಕಿದ್ದು, ರಿಪೋರ್ಟ್‌ ರೆಡಿ ಮಾಡಬೇಕಿದೆ. ಹೀಗಾಗಿ 13ನೇ ಜಾಗದಲ್ಲಿನ ಶೋಧ ಕಾರ್ಯಾಚರಣೆ ಭಾರೀ ಮಹತ್ವ ಪಡೆದುಕೊಂಡಿದೆ.

- Advertisement -

Latest Posts

Don't Miss