ಒಂದು ಹೆಣ್ಣು ಗರ್ಭಿಣಿಯಾಗಿದ್ದಾಳೆಂದರೆ, ಅಲ್ಲಿಂದ ಆಕೆಯ ಎರಡನೇಯ ಜೀವನ ಶುರುವಾಗುತ್ತದೆ. ಇದು ಆಕೆಯ ಜೀವನದ ಮುಖ್ಯವಾದ ಭಾಗ ಅಂತಾನೇ ಹೇಳಬಹುದು. ಗರ್ಭ ಧರಿಸಿದಾಗಿನಿಂದ ಮಗು ಜನಿಸಿ, ಅದರ ಭವಿಷ್ಯ ರೂಪಿಸುವವರೆಗೂ ಆಕೆಯ ಕರ್ತವ್ಯ ಮುಂದುವರಿಯುತ್ತಲೇ ಇರುತ್ತದೆ. ಆದರೆ ಅದಕ್ಕೂ ಮುನ್ನ ಬಾಣಂತನದ ಬಳಿಕ ತಾಯಿ ಮತ್ತು ಮಗು ಆರೋಗ್ಯವಾಗಿರಬೇಕು ಅಂದ್ರೆ, ಗರ್ಭಿಣಿ ಕೆಲ ಆಹಾರಗಳನ್ನು ತಿನ್ನುವುದು ಬಿಡಬೇಕು. ಅದು ಯಾವ ಆಹಾರ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಗರ್ಭಿಣಿಯಾದಾಗ ಪಥ್ಯ ಮಾಡುವುದು ತುಂಬಾ ಮುಖ್ಯವಾಗಿದೆ. ಅದರಲ್ಲೂ ಉಷ್ಣ ಪದಾರ್ಥಗಳನ್ನ ಹೆಚ್ಚು ತಿನ್ನಲೇಬಾರದು ಅಂತಾರೆ ವೈದ್ಯರು. ಹೀಗೆ ಹೆಚ್ಚು ಉಷ್ಣ ಪದಾರ್ಥ ತಿನ್ನುವುದರಿಂದ ರಕ್ತಸ್ರಾವವಾಗುತ್ತದೆ. ಇದರಿಂದ ನಿಮಗೂ ಮತ್ತು ಮಗುವಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಗರ್ಭಿಣಿ ಮಹಿಳೆ ಆರೋಗ್ಯಕರ, ತಂಪು ಮತ್ತು ಹೆಚ್ಚು ಉಷ್ಣವಲ್ಲದ ಆಹಾರವನ್ನೇ ತಿನ್ನಬೇಕು.
ಬದನೆಕಾಯಿ, ಹಾಗಲಕಾಯಿ, ಪಪ್ಪಾಯಿ ಹಣ್ಣು, ಪಚ್ಚ ಬಾಳೆಹಣ್ಣು, ನುಗ್ಗೆಕಾಯಿ, ಆಲೂಗಡ್ಡೆ, ಸಬ್ಬಸಿಗೆ ಸೊಪ್ಪು, ಪುಂಡಿ ಸೊಪ್ಪು, ಎಳ್ಳು, ಚಾಕೋಲೇಟ್ಸ್, ಚಾಕೋಲೇಟ್ ಫ್ಲೇವರ್ ತಿಂಡಿ, ಐಸ್‌ಕ್ರೀಮ್, ಕುಂಬಳಕಾಯಿ, ಗೆಣಸು, ಖರ್ಜೂರ, ನುಗ್ಗೆ ಸೊಪ್ಪು, ಕಾಬುಲ್ ಕಡಲೆ, ಕರ್ಬೂಜ ಹಣ್ಣು, ಬೇರು ಹಲಸಿನಕಾಯಿ, ಅನಾನಸ್, ಕಾಫಿ, ಮೈದಾ, ಹಸಿ ಮೊಟ್ಟೆ, ಹಸಿ ಹಾಲು, ಕಪ್ಪು ದ್ರಾಕ್ಷಿ, ನೇರಳೆ ಹಣ್ಣು, ಮಾಂಸ ಸೇವನೆ ಮಾಡಬಾರದು ಅಂತಾ ಹೇಳಲಾಗಿದೆ. ಅಲ್ಲದೇ, ಮದ್ಯಪಾನ, ಧೂಮಪಾನ ಮಾಡುವುದು ಕೂಡ ಒಳ್ಳೆಯದಲ್ಲ. ಕಲ್ಲಂಗಡಿ ಹಣ್ಣಿನ ಸೇವನೆ ಮಾಡುವುದಿದ್ದರೂ, ಅತೀಯಾದ ಕಲ್ಲಂಗಡಿ ಹಣ್ಣಿನ ಸೇವನೆಯಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ.