Health Tips: ಹಿಂದಿನ ಕಾಲದಲ್ಲಿ ಮಕ್ಕಳು ಮಾತು ಕೇಳದಿದ್ದಲ್ಲಿ, ಬೈದು, ನಾಲ್ಕು ಏಟು ನೀಡಿ, ಪೋಷಕರು ಮಕ್ಕಳಿಗೆ ಬುದ್ಧಿ ಹೇಳುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮಕ್ಕಳಿಗೆ ಸ್ವಲ್ಪ ಬೈದರೂ , ಕೆಲವರು ಅದನ್ನೇ ಸಿರಿಯಸ್ ಆಗಿ ತೆಗೆದುಕ“ಂಡು, ಮಾಡಬಾರದ ಕೆಲಸ ಮಾಡುತ್ತಾರೆ. ಹಲವು ಮಕ್ಕಳು ಅಪ್ಪ ಅಮ್ಮ ಗದರಿದಕ್ಕೇ ಆತ್ಮಹತ್ಯೆ ಮಾಡಿಕ“ಳ್ಳುವ ನಿರ್ಧಾರಕ್ಕೆ ಬಂದಿದ್ದ ಉದಾಹರಣೆಯೂ ಇದೆ. ಹಾಗಾಗಿ ಇಂದಿನ ಕಾಲದ ಮಕ್ಕಳನ್ನು ಪೋಷಕರು ಕಂಟ್ರೋಲ್ ಮಾಡೋದೇ ಬಿಗ್ ಚಾಲೆಂಜ್ ಆಗಿದೆ.
ಅದರಲ್ಲೂ ಇಂದಿನ ಕಾಲದ ಕೆಲ ಹೆಣ್ಣು ಮಕ್ಕಳು ಪುರುಷರ ರೀತಿ, ಸ್ಮೋಕ್ ಮಾಡೋದನ್ನೂ ಕಲಿತಿದ್ದಾರೆ. ಆದರೆ ಇದನ್ನ ಪೋಷಕರು ಮಾತ್ರ ಎಂದಿಗೂ ನಿರ್ಲಕ್ಷಿಸಬೇಡಿ ಅಂತಾರೆ ವೈದ್ಯರು. ಹಾಗದ್ರೆ ಹೆಣ್ಣು ಮಕ್ಕಳು ಸ್ಮೋಕ್ ಮಾಡಿದ್ರೆ ಏನಾಗತ್ತೆ ಅಂತಾ ತಿಳಿಯೋಣ ಬನ್ನಿ..
ಹೆಣ್ಣು ಮಕ್ಕಳ ಕಾಲೇಜಿನಲ್ಲಿ ಯಾವ ರೀತಿಯ ವಾತಾವರಣವಿದೆ. ಎಂಥವರ ಗೆಳೆತನವಿದೆ ಅನ್ನೋದನ್ನ ಪೋಷಕರು ತಿಳಿದಿರಬೇಕು. ಏಕೆಂದರೆ, ಇಂಥ ಚಟಗಳು ತಾಕುವುದೇ, ಗೆಳೆಯರ ಸಂಗದಿಂದ. ಹಾಗಾಗಿ ಮಗಳು ಎಂಥವರ ಗೆಳೆತನ ಮಾಡಿದ್ದಾಳೆಂದು ತಿಳಿಯುವುದು ಮುಖ್ಯ ಅಂದಿದ್ದಾರೆ ವೈದ್ಯರು. ಏಕೆಂದರೆ ಓರ್ವ ಯುವತಿಗೆ ಕುಡಿಯುವ ಜ್ಯೂಸ್‌ನಲ್ಲಿ ಡ್ರಗ್ಸ್ ಹಾಕಿ, ಆಕೆಯನ್ನು 20ಕ್ಕೂ ಹೆಚ್ಚು ಪುರುಷರು ಬಳಸಿದ್ದರಂತೆ. ಏಕೆಂದರೆ 1 ಸಲ ಡ್ರಗ್ಸ್ ಚಟ ತಾಕಿದರೆ, ಅದಕ್ಕಾಗಿ ಏನನ್ನಾದರೂ ಮಾಡಲು ರೆಡಿಯಿರುತ್ತಾರೆ. ಡ್ರಗ್ಸ್‌ನ್ನು ಸಿಗರೇಟ್ ಮೂಲಕವೂ ಸೇವಿಸಲಾಗುತ್ತದೆ. ಹಾಗಾಗಿ ಇಂಥ ಚಟ ತಾಕದಿರುವಂತೆ ನೋಡಿಕ“ಳ್ಳಿ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.