Health Tips: ನಮ್ಮ ದಿನಚರಿಯಲ್ಲಿ ನಾವು ಯಾವುದಾದರೂ ತಿಂಡಿ ಮೂಲಕವಾದ್ರೂ ಮೈದಾ ತಿಂದೇ ತಿಂತೀರಿ. ಕೆಲವರು ಅದನ್ನೆಲ್ಲ ಕಂಟ್ರೋಲ್ ಮಾಡಿದರೂ, ಸಾಮಾನ್ಯವಾಗಿ ಇರುವ ಜನರು ಪ್ರತಿದಿನ ಯಾವುದಾದರೂ ರೂಪದಲ್ಲಿ ಮೈದಾ ಸೇವನೆ ಮಾಡೇ ಮಾಡುತ್ತಾರೆ. ಬಿಸ್ಕತ್ತು, ಬ್ರೆಡ್, ಬನ್, ಸ್ನ್ಯಾಕ್ಸ್, ಬೀದಿಬದಿ ತಿಂಡಿ ಹೀಗೆ ಎಲ್ಲದರಲ್ಲೂ ಮೈದಾ ಬಳಕೆ ಇದ್ದೇ ಇರುತ್ತದೆ. ಹಾಗಾದ್ರೆ ನಾವು ಅಗತ್ಯಕ್ಕಿಂತ ಹೆಚ್ಚು ಮೈದಾ ತಿಂದ್ರೆ ನಮ್ಮ ಆರೋಗ್ಯಕ್ಕೇನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಮೈದಾವನ್ನು ಗೋದಿಯಿಂದಲೇ ತಯಾರಿಸಲಾಗುತ್ತದೆ ಎನ್ನುತ್ತಾರೆ. ಆದರೆ ಗೋದಿಯನ್ನು ಅಗತ್ಯಕ್ಕಿಂತ ಹೆಚ್ಚು ಪುಡಿ ಮಾಡಿದಾಗ, ಅದರಲ್ಲಿರುವ ಆರೋಗ್ಯಕರ ಅಂಶವೆಲ್ಲ ನಾಶವಾಗುತ್ತದೆ. ಆಗ ಆ ಹುಡಿ ಮೈದಾ ಆಗಿ ಬದಲಾಗುತ್ತದೆ.
ಇದರಲ್ಲಿ ಬರೀ ಕ್ಯಾಲೋರಿಯೇ ತುಂಬಿರುತ್ತದೆ. ಅಲ್ಲದೇ, ಇದು ಅಂಟಂಟಾಗಿರುವುದರಿಂದ, ಮೈದಾ ನಮ್ಮ ದೇಹ ಸೇರಿದ ಬಳಿಕ, ಅಲ್ಲಿ ಅಂಟಿಕ“ಂಡು, ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿಯೇ ಮೈದಾ ಹೆಚ್ಚು ಸೇವನೆ ಮಾಡಬಾರದು ಎನ್ನುತ್ತಾರೆ.
ಅಲ್ಲದೇ ಮೈದಾ ಸೇವನೆಯಿಂದ ನಮ್ಮ ದೇಹದ ತೂಕ ಹೆಚ್ಚಾಗುತ್ತದೆ. ಏಕೆಂದರೆ, ಇದರಲ್ಲಿ ಬರೀ ಕ್ಯಾಲೋರಿ ಇರುವುದರಿಂದ, ಮೈದಾ ಸೇವನೆ ಮಾಡಿದ ಬಳಿಕ, ನಮ್ಮ ದೇಹಕ್ಕೆ ಬರೀ ಕ್ಯಾಲೋರಿ ಸೇರುತ್ತದೆ. ಹಾಗಾಗಿಯೇ ಮೈದಾ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗಿ, ದೇಹದ ತೂಕ ಹೆಚ್ಚುತ್ತದೆ.