ಇನ್ನೇನು ದಸರಾ, ದೀಪಾವಳಿ ಸಮೀಪಿಸುತ್ತಿದೆ. ಎಲ್ಲರೂ ಹಬ್ಬಕ್ಕೆ ಚಿನ್ನ ಖರೀದಿಗೆ ಪ್ಲಾನ್ ಮಾಡ್ತಾಯಿರ್ತಾರೆ. ಆದ್ರೆ ಬಂಗಾರದ ಬೆಲೆಯಲ್ಲಿ ಬಹಳಷ್ಟು ಬದಲಾವಣೆಗಳಾಗಲಿವೆ. ಹಾಗಾದ್ರೆ ಹಬ್ಬದ ಸಂದರ್ಭದಲ್ಲಿ ಬಂಗಾರದ ಬೆಲೆ ಎಷ್ಟಾಗಬಹುದು? ಯಾವಾಗ ಖರೀದಿ ಮಾಡಬೇಕು? ಗೋಲ್ಡ್ ನ ಇಂದಿನ ಬೆಲೆ ಎಷ್ಟು ಅನ್ನೋದನ್ನ ನೋಡ್ತಹೋಗೋಣ.
yes ಈ ವರ್ಷದ ಹಬ್ಬದ ಹೊತ್ತಿಗೆ ಬಂಗಾರದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಸಾಧ್ಯವಿರುವ ನಿರೀಕ್ಷೆ ಇದೆ. ಸೆಪ್ಟೆಂಬರ್ 1 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರ ಮತ್ತು ಬೆಳ್ಳಿ ಎರಡೂ ದಾಖಲೆ ಮಟ್ಟದ ಬೆಲೆ ತಲುಪಿವೆ. ಹೀಗಾಗಿ, ದಸರಾ-ದೀಪಾವಳಿಗೆ ಬಂಗಾರ ಖರೀದಿಸಲು ಯೋಚಿಸುತ್ತಿರುವ ಗ್ರಾಹಕರಲ್ಲಿ ‘ಈಗಲೇ ಖರೀದಿ ಮಾಡಬೇಕೆ? ಎಂಬ ಪ್ರಶ್ನೆ ಮೂಡಿದೆ.
ಹಾಗಾದ್ರೆ ಇಂದಿನ ಬಂಗಾರದ ಬೆಲೆ ಎಷ್ಟು? ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಅಂದ್ರೆ IBJA ನೀಡಿರುವ ಮಾಹಿತಿಯಂತೆ, 24 ಕ್ಯಾರಟ್ ಬಂಗಾರದ ಬೆಲೆ ಇಂದು ₹2,404 ಹೆಚ್ಚಾಗಿ ₹1,04,792 ರೂ. ತಲುಪಿದೆ. ಈ ವರ್ಷದ ಆರಂಭದಲ್ಲಿ ಈ ಬೆಲೆ ₹76,162 ಇತ್ತು. ಅಂದರೆ, ಜನವರಿಯಿಂದ ಸೆಪ್ಟೆಂಬರ್ ತನಕ ಬಂಗಾರ ₹28,630 ಏರಿಕೆ ಕಂಡಿದೆ.
ಸೆಪ್ಟೆಂಬರ್ 1 ರಂದು ಬೆಳ್ಳಿ ಬೆಲೆ ಪ್ರತಿಕಿಲೋಗ್ರಾಂಗೆ ₹5,678 ಏರಿಕೆಯಾಗಿದ್ದು, ಪ್ರಸ್ತುತ ಬೆಲೆ ₹1,23,250 ತಲುಪಿದೆ. ಈ ವರ್ಷ ಆರಂಭದಲ್ಲಿ ಬೆಳ್ಳಿ ₹86,000 ಇತ್ತು. ಅಂದರೆ ₹37,250 ಏರಿಕೆಯಾಗಿದೆ.
ತಜ್ಞರ ಪ್ರಕಾರ, ದಸರಾ ಮತ್ತು ದೀಪಾವಳಿ ಹಬ್ಬಗಳ ವೇಳೆಗೆ ಬಂಗಾರ ಮತ್ತು ಬೆಳ್ಳಿಯ ಖರೀದಿ ಹೆಚ್ಚಾಗುವ ಸಾಧ್ಯತೆ ಇದೆ. ಈ ವೇಳೆಗೆ ಬಂಗಾರ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಬಹುದು? ಅಂತ ನೋಡೋದಾದ್ರೆ 24 ಕ್ಯಾರಟ್ ಬಂಗಾರ ₹1,08,000 ದಾಟಬಹುದು. ಬೆಳ್ಳಿ ₹1,30,000 ತಲುಪುವ ಸಾಧ್ಯತೆ ಇದೆ.
ಹಾಗಾದ್ರೆ ಈಗಲೇ ಖರೀದಿ ಮಾಡಬೇಕೆ? ಅಥವಾ ಕಾದು ನೋಡಬೇಕೆ? ಅಂತ ಕೇಳೋದಾದ್ರೆ ತಜ್ಞರ ಪ್ರಕಾರ ಈಗಲೇ ಖರೀದಿ ಮಾಡುವುದು ಉತ್ತಮ. ಹಬ್ಬದ ಸಮಯದಲ್ಲಿ ಬೆಲೆ ಇನ್ನಷ್ಟು ಏರುವ ನಿರೀಕ್ಷೆ ಇರುವುದರಿಂದ ಈಗಲೇ ಬಂಗಾರ ಖರೀದಿಸುವುದು ಲಾಭದಾಯಕ ಅಂತಿದ್ದಾರೆ.

