Monday, April 14, 2025

Latest Posts

ನಟಿ ರಾಖಿ ಪತಿ ಆದಿಲ್ ಖಾನ್ ಅರೆಸ್ಟ್ ಆಗೋಕೆ ಕಾರಣವೇನು..?

- Advertisement -

FilmNews

ಬೆಂಗಳೂರು(ಫೆ.7): ಬಾಲಿವುಡ್ ಖ್ಯಾತ ನಟಿ ರಾಖಿ ಸಾವಂತ್ ಬಗ್ಗೆ ಎಲ್ಲರಿಗೂ ಗೊತ್ತಿರುವ ಹಾಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ತನ್ನದೇ ಆದ ಹೇಳಿಕೆಗಳ ಮುಖಾಂತರ ಈಕೆ ಜನಪ್ರೀಯಳಾಗಿದ್ದಾಳೆ. ಈಕೆ ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಎಂಬಾತನನ್ನು ಮದುವೆಯಾಗಿ ಒಂದಿಷ್ಟು ಸುದ್ದಿಯಾಗಿದ್ದಾಳೆ. ಇದೀಗ ಈಕೆಯ ಪತಿ ಆದಿಲ್ ಖಾನ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇಬ್ಬರೂ ಇಷ್ಟಪಟ್ಟು ಮದುವೆಯಾದ ಜೋಡಿ ಇದೀಗ ಒಂದಲ್ಲಾ ಒಂದು ವಿಚಾರಕ್ಕೆ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದೆ. ಆದಿಲ್ ಖಾನ್ ರಾಖಿಯನ್ನು ಭೇಟಿ ಮಾಡಲು ಆಕೆ ಇದ್ದ ಸ್ಥಳಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದು, ದೂರಿನ ಪ್ರಕಾರ, ರಾಖಿ ಸಾವಂತ್ ಅವರು ಆದಿಲ್ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಆದಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು ರಾಖಿ ಸಾವಂತ್. ಈ ಸಂದರ್ಭ ತನ್ನ ತಾಯಿಯ ಚಿಕಿತ್ಸೆಗೆ ಆದಿಲ್ ಹಣ ನೀಡಿಲ್ಲ ಎಂದು ಆರೋಪಿಸಿದ್ದರು. ಆದಿಲ್ ಖಾನ್​ನಿಂದಾಗಿಯೇ ತಾಯಿ ಸಾವನ್ನಪ್ಪಿದ್ದಾರೆ ಎಂದು ರಾಖಿ ಸಾವಂತ್ ಆರೋಪಿಸಿದ್ದಾರೆ. ನಿನ್ನನ್ನು ಬಿಟ್ಟು ಗರ್ಲ್​ಫ್ರೆಂಡ್ ತನು ಜೊತೆ ಇರುತ್ತೇನೆ ಎಂದು ಆದಿಲ್ ಹೇಳಿದ್ದಾರೆ ಅಂತ ರಾಖಿ ಸಾವಂತ್ ತಿಳಿಸಿದ್ದಾರೆ. ತನ್ನ ತಾಯಿ ಸಾವನ್ನಪ್ಪಿದ್ದು ಆದಿಲ್ ಖಾನ್ ನಿಂದಲೇ ಅಂತ ದೂರಿನಲ್ಲಿ  ರಾಖಿ ಸಾವಂತ್ ತಿಳಿಸಿದ್ದಾರೆ.

- Advertisement -

Latest Posts

Don't Miss