Spiritual: ಎಲ್ಲೆಡೆ ಸದ್ಯ ದರ್ಶನ್ ಜೈಲಿಗೆ ಹೋಗಿದ್ದು, ಅವರು ಅಲ್ಲಿ ಅನುಭವಿಸುತ್ತಿರುವ ಕಷ್ಟದ ಬಗ್ಗೆಯೇ ಸುದ್ದಿ. ಅಷ್ಟೇ ಅಲ್ಲದೇ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಪತಿಯನ್ನು ರಕ್ಷಿಸಿಕೊಳ್ಳಲು, ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಲಾಯರ್, ರಾಜಕಾರಣಿಗಳ ಸಹಾಯ ಕೇಳಿದ್ದಲ್ಲದೇ, ದೇವರ ಮೊರೆ ಹೋಗಿದ್ದಾರೆ.
ನಿನ್ನೆಯಷ್ಟೇ ವಿಜಯಲಕ್ಷ್ಮೀ ಕೊಲ್ಲೂರು ಮೂಕಾಂಬಿಕೆಯ ದರ್ಶನ ಮಾಡಿ, ನವ ಚಂಡಿಕಾ ಹೋಮ ಮಾಡಿಸಿದ್ದಾರೆ. ಹಾಾಗಾದ್ರೆ ಭಕ್ತರು ಕಷ್ಟಕಾಲದಲ್ಲಿ ಮೂಕಾಂಬಿಕೆಯ ಮೊರೆ ಹೋಗಲು ಕಾರಣವೇನು..? ಅಲ್ಲಿ ಚಂಡಿಕಾ ಹೋಮ ಏಕೆ ಮಾಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕೊಲ್ಲೂರಿನಲ್ಲಿ ಪ್ರತಿದಿನ ಮೂರು ಚಂಡಿಕಾ ಯಾಗ ನಡೆಯುತ್ತದೆ. ಈ ಶಕ್ತಿ ಪೀಠದಲ್ಲಿ ಮೂರು ದೇವತೆಗಳು ನೆಲೆಸಿದ್ದು, ಈ ಮೂರು ದೇವತೆಗಳಿಗೂ ಪ್ರತಿದಿನ ಚಂಡಿಕಾಯಾಗ ನಡೆಯುತ್ತದೆ. ಇನ್ನು ಭಕ್ತರೇ ಇಲ್ಲಿ ಬಂಡು ಪೂಜೆ ಮಾಡಿಸಿದರೆ, ಅವರ ಸಕಲ ಮನೋಕಾಮನೆಗಳು ಪೂರ್ಣವಾಗುತ್ತದೆ.
ಹಾಗಂತ ಎಲ್ಲ ವರ್ಗದವರಿಗೂ ಇಲ್ಲಿ ಚಂಡಿಕಾ ಹೋಮ ಮಾಡಲಾಗುವುದಿಲ್ಲ. ಏಕೆಂದರೆ, ಚಂಂಡಿಕಾ ಯಾಗ ಮಾಡಲು ಲಕ್ಷ ರೂಪಾಯಿ ಬೇಕು. ಹಾಗಾಗಿ ಇಲ್ಲಿ ಬಂದು ಚಂಡಿಕಾಯಾಗ ಮಾಡಲಾಗದಿದ್ದರೂ, ಕುಂಕುಮಾರ್ಚನೆ ಮಾಡಿಸಬಹುದು. ಈ ಒಂದು ಸಣ್ಣ ಸೇವೆಯಿಂದಲೂ ನಿಮಗೆ ನೆಮ್ಮದಿ ಸಿಗುತ್ತದೆ. ಸಕಲ ಆಸೆಗಳು ಈಡೇರುತ್ತದೆ. ಯಾವ ಸೇವೆಯಾದರೂ ಮನಸ್ಸಿನಲ್ಲಿ ಭಕ್ತಿ ಇರಬೇಕು ಅಷ್ಟೇ.
ಇನ್ನು ಆದಿ ಶಂಕರಾಚಾರ್ಯರು ಭಾರತದ ದಕ್ಷಿಣ ಭಾಗದಲ್ಲಿ ಶಾರದಾ ಪೀಠ ಸ್ಥಾಪನೆಗಾಗಿ ಬರುತ್ತಿದ್ದಾಗ, ಅವರಿಗೆ ಕೊಲ್ಲೂರಿನಲ್ಲಿ ಮೂಕಾಸುರನನ್ನು ಕೊಂದ ಮೂಕಾಂಬಿಕೆ ಲೋಕಕಲ್ಯಾಣಕ್ಕಾಗಿ ನೆಲೆಗೊಳ್ಳಬೇಕಿದೆ ಎನ್ನುವ ಸಂಗತಿ ಗೊತ್ತಾಗುತ್ತದೆ. ಆಗ ಅವರು ಕೊಲ್ಲೂರಿನಲ್ಲಿ ಶ್ರೀಚಕ್ರ ಸಹಿತ ಮೂಕಾಂಬಿಕೆಯನ್ನು ಪ್ರತಿಷ್ಠಾಪಿಸುತ್ತಾರೆ.
ಪ್ರತಿದಿನ ಅಲ್ಲಿನ ಮುಖ್ಯ ಅರ್ಚಕರು ದಿನಕ್ಕೆ ಮೂರು ಬಾರಿ, ಶ್ರೀಚಕ್ರಕ್ಕೆ ಅರ್ಚನೆ ಮಾಡಿ, ದೇವಿಯನ್ನು ಸಂತುಷ್ಟಗೊಳಿಸುತ್ತಾರೆ. ಶ್ರೀಚಕ್ರಕ್ಕೆ ಪದ್ಧತಿ ಪ್ರಕಾರ, ಭಕ್ತಿ, ಶುದ್ಧತೆಯಿಂದ ಪೂಜೆ ಮಾಡಿದಾಗಲೇ, ಆ ಶ್ರೀಚಕ್ರದ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಭಕ್ತರು ಭಕ್ತಿಯಿಂದ ಈ ಪುಣ್ಯ ಕ್ಷೇತ್ರಕ್ಕೆ ಹೋಗಿ, ಪೂಜೆ ಸಲ್ಲಿಸುವುದರಿಂದ, ಜೀವನದಲ್ಲಿ ನೆಮ್ಮದಿ, ಸುಖ, ಶಾಂತಿ, ಎಲ್ಲವೂ ನೆಲೆಸುತ್ತದೆ.